ಜಿಲ್ಲೆ

ನಕಲಿ ಇ-ಮೇಲ್, 2.11 ಕೋಟಿ ರೂ. ವಂಚನೆ

ಬಳ್ಳಾರಿ : ಇಲ್ಲಿನ ಗಾಂಧಿನಗರ ವ್ಯಾಪಾರಸ್ಥರೊಬ್ಬರಿಗೆ ನಕಲಿ ಇ ಮೇಲ್ ಮೂಲಕ 2.11 ಕೋಟಿ ರೂ.ವಂಚಿಸಿದ್ದು, ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳೆದ 8 ವರ್ಷಗಳಿಂದ ಸ್ಪಾಂಜ್ ಐರೆನ್ ಬಿಸಿನೆಸ್ ನಡೆಸುತ್ತಿದ್ದು, ವಿವಿಧಡೆಯಿಂದ ರಾ ಮೆಟೇರಿಯಲ್ ಕೋಲ್ ಖರೀದಿ ಮಾಡಿ, ನಂತರ ಸಂಬಂಧಿಸಿದ ಹಣವನ್ನು ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿತ್ತು. ಆದರೆ, ಆ.16 ರಂದು ಅಗವಾರಲ್ ಕಂಪನಿಯ ಹೆಸರಿನ ಮೇಲೆ ನಕಲಿ ಇ-ಮೇಲ್ ಬಂದಿತ್ತು. ಹಂತ ಹಂತವಾಗಿ 2.11 ಕೋಟಿ ರೂ. ಆನ್‌ಲೈನ್ ಜಮೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.