ಜಿಲ್ಲೆ

ನಕಲಿ ಅಂಕಪಟ್ಟಿ, ದೂರು ದಾಖಲು

ಕಲಬುರಗಿ: ಅರಣ್ಯ ವೀP್ಷÀಕ ಗ್ರೂಪ ಡಿ ವೃಂದದ ಹುz್ದÉಗಳ ನೇರ ನೇಮಕದಲ್ಲಿ ನಕಲಿ ಅಂಕಪಟ್ಟಿ ನೀಡಿ ಹುz್ದÉ ಪಡೆಯಲು ಪ್ರಯತ್ನಿಸಿದ ಘಟನೆ ನಡೆದಿದೆ. ಪ್ರಾದೇಶಿಕ ಅರಣ್ಯ ವಲಯದ ಅರಣ್ಯ ಅಧಿಕಾರಿ ಸಂಜುಕುಮಾರ ಚವ್ಹಾಣ್ ಆರೋಪಿ ಕಡಣಿ ಗ್ರಾಮದ ಬೀರಪ್ಪ ಶಿವಪುತ್ರ ವಿರುದ್ಧ ದೂರು ನೀಡಿದ್ದಾರೆ. ಕಲಬುರಗಿ ವೃತ್ತ ವ್ಯಾಪ್ತಿಯ ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದದ ೨೩ ಅರಣ್ಯ ವೀP್ಷÀಕ ಗ್ರೂಪ ಡಿ ವೃಂದದ ಹುz್ದÉಗಳ ನೇರ ನೇಮಕ ಅಧಿಸೂಚನೆ ಹೊರಡಿಸಿ, ಅಂತಿಮ ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಕಡಣಿ ಗ್ರಾಮದ ಬೀರಪ್ಪ ಶಿವಪುತ್ರ ಆನ್‌ಲೈನ್ ಮೂಲಕ ಶೈಕ್ಷಣಿಕ ದಾಖಲೆ ಸಲ್ಲಿಸಿದ್ದ. ದಾಖಲೆಯಲ್ಲಿ ೨೦೧೪ರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ೬೦೫ ಅಂಕ ಪಡೆದು ತೇರ್ಗಡೆಯಾದ ಬಗ್ಗೆ ಮಾಹಿತಿ ಇತ್ತು. ಆದರೆ ಇದನ್ನು ಪರಿಶೀಲನೆಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಸಲ್ಲಿಸಲಾಗಿತ್ತು. ೨೦೧೪ರಲ್ಲಿ ಬೀರಪ್ಪ ಎಸ್ಸೆಸ್ಸೆಲ್ಸಿಯಲ್ಲಿ ೩೧೮ ಅಂಕ ಪಡೆದು ಪಾಸ್ ಆದ ಬಗ್ಗೆ ಮಾಹಿತಿ ನೀಡಿರುತ್ತಾರೆ. ನೇಮಕಾತಿ ಪ್ರಾಧಿಕಾರವೂ ನಕಲು ಅಂಕಪಟ್ಟಿ ನೀಡಿದ ಸೂಚನೆಯಂತೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.