ಚಿಕ್ಕಮಗಳೂರು: ಭಾರತದ ಆಂತರಿಕ ವಿಚಾರಗಳ ಕುರಿತು ವಿದೇಶಗಳಲ್ಲಿ ಪದೇ ಪದೆ ಬಾಯಿಗೆ ಬಂದAತೆ ಟೀಕಿಸುವ ಮೂಲಕ ಭಾರತವನ್ನು ಅವಮಾನಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಕರಾತ್ಮಕ ಹೇಳಿಕೆಯನ್ನು ಜಿಲ್ಲಾ ಬಿಜೆಪಿ ಖಂಡಿಸಿದೆ ಎಂದು ಪಕ್ಷದ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶದ ಹಿರಿಮೆ, ಅಭಿವೃದ್ಧಿ, ಹೊಸ ಹೊಸ ಆವಿಷ್ಕಾರಗಳು, ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಸಾಧನೆಗಳ ಕುರಿತು ವಿದೇಶಿಗರ ಗಮನ ಸೆಳೆಯುವುದನ್ನು ಬಿಟ್ಟು, ಕೇವಲ ಪ್ರಚಾರಕ್ಕಾಗಿ ನಕರಾತ್ಮಕ ಹೇಳಿಕೆ ಮೂಲಕ ದೇಶÀದ ಜನರು ತಲೆ ತಗ್ಗಿಸುವಂತ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಒಬ್ಬ ನಕರಾತ್ಮಕ ಚಿಂತಕ. ಜೊತೆಗೆ ದೇಶ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವ ಉz್ದೆÃಶಕ್ಕಾಗಿ ವಿದೇಶದ ನೆಲಕ್ಕೆ ತನ್ನನ್ನು ಅಹ್ವಾನಿಸಿದ್ದಾರೆ ಎಂಬುದನ್ನು ಪದೇ ಪದೆ ಬದಿಗೊತ್ತಿ, ಅಂತಾರಾಷ್ಟç ಮಟ್ಟದಲ್ಲಿ ಬಿಟ್ಟಿ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ನಕರಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಾನೊಬ್ಬ ದೇಶ ವಿರೋಧಿ ಎಂಬುದನ್ನು ಮತ್ತೊಮ್ಮೆ ಅವರು ರುಜುವಾತುಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಮಹಾರಾಷ್ಟçದಲ್ಲಿ ನಡೆದ ಚುನಾವಣೆಗಳಲ್ಲಿ ತಪ್ಪುಗಳಾಗಿದ್ದರೆ ಅದನ್ನು ನಮ್ಮ ನೆಲದ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಅಧಿಕಾರ ಎಲ್ಲರಿಗೂ ಇದೆ. ಆದರೆ ರಾಹುಲ್ ಗಾಂಧಿ ಅವರು ಇಲ್ಲದ ಮತ್ತು ಸುಳ್ಳು ವಿಚಾರಗಳನ್ನು ಮುನ್ನಲೆಗೆ ತಂದು ಭಾರತವನ್ನು ಅವಮಾನಿಸಿರುವುದನ್ನು ನೋಡಿದರೆ ಅವರೊಬ್ಬ ನಕರಾತ್ಮಕ ಚಿಂತಕ ಎಂಬುದು ಸಾಬೀತಾಗುತ್ತದೆ ಎಂದು ತಿಳಿಸಿದ್ದಾರೆ.