ಬೇಲೂರು : ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ಧರ್ಮ ಸಮ್ಮೇಳನದ ಅಂಗವಾಗಿ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ 8ನೇ ದಿನದ ಜಗದ್ಗುರುಗಳವರ ಇಷ್ಟಲಿಂಗಪೂಜೆಯೂ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
8ನೇ ದಿನದ ಇಷ್ಟಲಿಂಗ ಪೂಜೆಯಲ್ಲಿ ಶರನ್ನವರಾತ್ರಿ ಸಮಿತಿ ಸದಸ್ಯರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಭಾಗವಹಿಸಿ ಜಗದ್ಗುರುಗಳ ಆಶಿರ್ವಚನ ಪಡೆದರು.
ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಇಷ್ಟಲಿಂಗ ಪೂಜೆ ಸಂದರ್ಭ ಆಶಿರ್ವಚನ ನೀಡುತ್ತ ಮಾತನಾಡಿ, ಪ್ರತಿಯೊಬ್ಬ ಮನುಷ್ಯನೂ ಧರ್ಮದಲ್ಲಿ ನಂಭಿಕೆ ವಿಶ್ವಾಸ ಕಳೆದು ಕೊಳ್ಳಬಾರದು, ನಂಬಿ ನೆಡೆದಂತ ಮನುಷ್ಯನಿಗೆ ಕಲ್ಲು ಸಹ ದೇವರಾಗಿ ಕಾಣಿಸುತ್ತದೆ. ಆದರೆ ಶ್ರದ್ಧಾ ಭಕ್ತಿಗಳಲ್ಲಿ ವಿಸ್ವಾಸಗಳಿಲ್ಲದಿದ್ದವನಿಗೆ ದೇವರು ಪ್ರತ್ಯಕ್ಷವಾದರು ತಿಳಿದುಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಜಗದ್ಗುರು ರೇಣುಕಾಚಾರ್ಯರು ಇಷ್ಟಲಿಂಗ ಎಂದು ಕರೆಯುತ್ತಾರೆ ವೀರಶೈವರಲ್ಲಿ ಎರಡು ಬಗೆ ಲಿಂಗಪೂಜೆ ಇದೆ, ಒಂದು ಸ್ಥಾವರಲಿಂಗದ ಪೂಜೆ ಮತ್ತೊಂದು ಇಷ್ಟಲಿಂಗ ಪೂಜೆ. ಯಾವುದು ಶಿವಜ್ಞಾನ ಉಂಟು ಮಾಡುತ್ತದೆಯೋ ಅದೇ ದೀಕ್ಷೆ. ಬಸ್ಮ ಲಿಂಗ, ಜಂಗಮ, ಪೂಜೆಯಿಂದ ಪಾಪ ಎಂಭುದು ನಾಶವಾಗುತ್ತದೆ. ಪಟ್ಟಾದಿಕಾರಿಯಿಂದ ಲಿಂಗ ಪಡೆದು ಪೋಜೆ ಮಾಡಿದರೆ ಅದರಿಂದ. ಫಲ ಪಡೆದು ಕೊಳ್ಳಬಹುದು, 51, 21, ಅಥವಾ 5 ಸಾರಿಯಾದರು ಮಂತ್ರ ಜಪ ಮಾಡಿ ಪೂಜಿಸಬೇಕು. ಉಪಾಂಸಕ, ಮಾನಸಿಕ ಜಪದಲ್ಲಿ ಸರ್ವಶ್ರೇಷ್ಟ ಎಂದು ಜ್ಞಾನಿಗಳು ಹೇಳುತ್ತಾರೆ, ಚಂಚಲವಾದ ಮನಸ್ಸನ್ನು ತಡೆ ಹಿಡಿಯುವುದು ಬಹಳ ಕಷ ್ಟ, ಮಾನವನ ಮರ್ಕಟನ ಪರಮಾತ್ಮನ ನೆಲೆಯಲ್ಲಿ ಕಟ್ಟಿ ಉಳಿಸಿ ಕೊಳ್ಳಲು ಹಿರಿಯರು ಪರಮಾತ್ಮನಲ್ಲಿ ಬೇಡಿಕೊಂಡಿದ್ದಾರೆ.
ಮಂತ್ರ ಕ್ಷೇತ್ರ ಗುರುಗಳಲ್ಲಿ ನಂಬಿಕೆ ಇಟ್ಟು ಪೋಜಿಸಿದರೆ ಫಲ ಪಡೆಯಬಹುದು. ನಂಬಿಕೆ ಇಂದ ನೆಡೆದರೆ ಪರಮಾತ್ಮನ ಕೃಪೆಗೆ ಪಾತ್ರರಾಗಬಹುದು. ಜಗದ್ಗುರುಗಳು ಮಾಡಿದ ಪೋಜಾಫಲ ಭಕ್ತರಿಗೆ ಪ್ರಾಪ್ತವಾಗಿದೆ. ನವರಾತ್ರಿ ಸಮಯದಲ್ಲಿ ರಂಭಾಪುರಿ ಪೀಟ ಅಧರ್ಮದ ವಿರುದ್ಧ ಧರ್ಮಕಾರ್ಯ ಪ್ರಚಾರ ಮಾಡುತ್ತಾ ಬಂದಿದೆ. ಮುವತ್ತೊಂದು ವರ್ಷಗಳಿಂದ ದಸರ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಈ ಪೂಜೆಯೂ ಶರನ್ನವರಾತ್ರಿ ದಸರ ಸಮಯ ಬಿಟ್ಟು ಬೇರೆ ಯಾವುದೇ ಸಮಯದಲ್ಲೂ ಇಷ್ಟು ಸುದೀರ್ಗವಾಗಿ ಮಾಡಲಾಗುವುದಿಲ್ಲಾ ಈ ಬಗ್ಗೆ ಭಕ್ತರಿಗೆ ಹರಿವಾಗಬೇಕು. ಕಳೆದ ಏಳು ದಿನದಿಂದ ಭಕ್ತ ಸಾಗರವೇ ಹರಿದು ಬರುತ್ತಿದೆ. ಕೊನೆವರೆಗೂ ಕುಳಿತು ಪೂಜಾಕಾರ್ಯದಲ್ಲಿ ಪಾಳ್ಗೋಳ್ಳುತ್ತಿದ್ದೀರಿ. ಜಗದ್ಗುರುಗಳು ಕುಂಭ ಹೊರುವ ದಿನ ಪ್ರತಿಯೋಬ್ಬರೂ ಸಹ ಸಣ್ಣ ಸಣ್ಣ ಕುಂಭವಾನ್ನಾದರೂ ತಂದು ಅದರಲ್ಲಿ ಪಾಲ್ಗೊಳ್ಳಿ ಎಂದು ಕರೆ ಕೊಟ್ಟರು.
ಬೇಲೂರಿನಲ್ಲಿ ನಡೆಯುತ್ತಿರುವ ಧರ್ಮ ಸಮ್ಮೇಳನದ ಸಂದೇಶ ನಾಡಿನಾಧ್ಯಂತ ಬಹಳ ಕಡೆ ಹೋಗಿತ್ತಿದೆ ಎಂದರು.