ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಎನ್.ಜೆ.ಭದ್ರೇಗೌಡ, ಉಪಾಧ್ಯಕ್ಷೆ ತುಂಗಾಬಾಯಿ ಗಂಗಾನಾಯ್ಕ ಅವರನ್ನು ಅಭಿನಂದಿಸಲಾಯಿತು. ಟಿ.ಎಂ.ಉಮಾಶಂಕರ್, ರಮೇಶ್, ಮಹಮ್ಮದ್ ಅಕ್ಬರ್, ಆರ್ ಸತ್ಯಪ್ಪ ಇತರರಿದ್ದರು.  
ಜಿಲ್ಲೆ

ನಂದಿಬಟ್ಟಲು ಗ್ರಾಪಂಗೆ ಎನ್.ಜೆ.ಭದ್ರೇಗೌಡ ಅಧ್ಯಕ್ಷ

ಲಿಂಗದಹಳ್ಳಿ: ನಂದಿಬಟ್ಟಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎನ್.ಜೆ.ಭದ್ರೇಗೌಡ, ಉಪಾಧ್ಯಕ್ಷರಾಗಿ ತುಂಗಾಬಾಯಿ ಗಂಗನಾಯ್ಕ ಅವಿರೋಧವಾಗಿ ಆಯ್ಕೆಯಾದರು.

ಮಂಗಳವಾರ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಟಿ.ಯತಿರಾಜು ಅವರು ಅವಿರೋಧ ಆಯ್ಕೆ ಘೋಷಿಸಿದರು. ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಎನ್.ಜೆ.ಭದ್ರೇಗೌಡ ಮಾತನಾಡಿ, ಸರ್ವರಿಗೂ ಸಮಪಾಲು ಎಂಬಂತೆ ಆದ್ಯತೆ ಮೇರೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದಾಗಿ ತಿಳಿಸಿದರು. ತುಂಗಾಬಾಯಿ ಮಾತನಾಡಿ, 11 ಸದಸ್ಯರು ಒಮ್ಮತದಿಂದ ನನ್ನನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಇದಕ್ಕೆ ಶಾಸಕ ಜಿ.ಎಚ್.ಶ್ರೀನಿವಾಸ್ ಮಾರ್ಗದರ್ಶನ ನೀಡಿದ್ದರು. ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂದರು. ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಎಂ.ಉಮಾಶಂಕರ್, ಮಹಮ್ಮದ್ ಅಕ್ಬರ್, ಟಿ.ಆರ್.ರವಿ, ಬಿ.ಕೃಷ್ಣೇಗೌಡ, ಬಿ.ಜೆ.ಗಿರೀಶ್ ಬಾಬು, ಆರ್.ರಾಮಯ್ಯ, ಎನ್.ಭರತ್, ಎಲ್.ಎ.ಕೃಷ್ಣಪ್ಪ, ಆರ್.ಸತ್ಯಪ್ಪ ಇತರರಿದ್ದರು.