ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಎ.ಕೃಷ್ಣನಾಯ್ಕ, ಉಪಾಧ್ಯಕ್ಷೆ ವಾಣಿ ರಾಜೇಶ್ ಅವರನ್ನು ಸದಸ್ಯರು ಅಭಿನಂದಿಸಿದರು. ಎನ್.ಜಿ.ರಮೇಶ್, ಆರ್.ಸತ್ಯಪ್ಪ, ಗೋವಿಂದನಾಯ್ಕ, ಎನ್.ರಮೇಶ್, ಶೇಖರಾಚಾರ್ ಇತರರಿದ್ದರು. 
ಜಿಲ್ಲೆ

ನಂದಿಬಟ್ಟಲು ಗ್ರಾಪಂಗೆ ಎ.ಕೃಷ್ಣನಾಯ್ಕ ಅಧ್ಯಕ್ಷ

ಲಿಂಗದಹಳ್ಳಿ: ನಂದಿಬಟ್ಟಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎ.ಕೃಷ್ಣನಾಯ್ಕ, ಉಪಾಧ್ಯಕ್ಷರಾಗಿ ವಾಣಿ ರಾಜೇಶ್ ಬುಧವಾರ ಅವಿರೋಧವಾಗಿ ಆಯ್ಕೆಯಾದರು.

ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಎ.ಕೃಷ್ಣನಾಯ್ಕ ಮಾತನಾಡಿ, ನಂದಿಬಟ್ಟಲು ಗ್ರಾಮ ಪಂಚಾಯಿತಿ ಕಟ್ಟಡ ಶಿಥಿಲಗೊಂಡಿದ್ದ ಕಾರಣ ನೂತನ ಕಟ್ಟಡ ನಿರ್ಮಿಸಲು ಗ್ರಾಪಂ 11 ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡು ನರೇಗಾ ಯೋಜನೆ ಮೂಲಕ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಕಾಮಗಾರಿ ಶೇ.90ರಷ್ಟು ಮುಕ್ತಾಯವಾಗಿದ್ದು, ಕೆಲವೇ ದಿನಗಳಲ್ಲಿ ನೂತನ ಕಟ್ಟಡ ಉದ್ಘಾಟಿಸಲಾಗುವುದು ಎಂದು ಹೇಳಿದರು.

ಉಪಾಧ್ಯಕ್ಷೆ ವಾಣಿ ರಾಜೇಶ್ ಮಾತನಾಡಿ, ಗ್ರಾಪಂ ನೂತನ ಕಟ್ಟಡದ ಮೇಲ್ಭಾಗದಲ್ಲಿ 15ನೇ ಹಣಕಾಸು ಯೋಜನೆ ಮತ್ತು ಎಸ್ಕೋ ಖಾತೆ ಹಣ ಸೇರಿ 22 ಲಕ್ಷ ರೂ. ವೆಚ್ಚದಲ್ಲಿ ಸಭಾಂಗಣ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಪಿಡಿಒ ಎನ್.ಎಸ್.ನಾಗರಾಜಪ್ಪ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎನ್.ಜಿ.ರಮೇಶ್, ನಿವೃತ್ತ ಕೃಷಿ ಅಧಿಕಾರಿ ಆರ್.ಸತ್ಯಪ್ಪ, ಬಂಜಾರ ಸಮಾಜದ ಪದಾಧಿಕಾರಿ ಗೋವಿಂದನಾಯ್ಕ, ಮಾಜಿ ಆಧ್ಯಕ್ಷ ಎನ್.ಜೆ.ಭದ್ರೇಗೌಡ, ಎನ್.ರಮೇಶ್, ಶೇಖರಾಚಾರ್ ಇತರರಿದ್ದರು.