ಮದ್ದೂರು: ಗೋ ಸಂತತಿ ಉಳಿವು ಮತ್ತು ಭಾರತೀಯ ಸಂಸ್ಕೃತಿ, ಸಂಸ್ಕಾರ ಪ್ರಚುರಪಡಿಸುವ ಉದ್ದೇಶ ಹೊಂದಿರುವ ನಂದಿ ರಥಯಾತ್ರೆ ರಥ ಮಂಗಳವಾರ ಮದ್ದೂರಿಗೆ ಆಗಮಿಸಿದಾಗ ಸಂಜೆಯ ವೃತ್ತದ ಬಳಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು,
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿ ವಿ.ಸಿ.ಉಮಾಶಂಕರ ಮಾತನಾಡಿ, ಭಾರತೀಯ ಸಂಸ್ಕೃತಿ ಸನಾತನ ಕಾಲದಿಂದಲೂ ವಿಶ್ವಕ್ಕೆ ಮಾದರಿಯಾಗಿರುವುದು ಇತಿಹಾಸದ ಸಂಗತಿ.
ವಿಷಮುಕ್ತ ಗಾಳಿ, ಮಣ್ಣು, ಆಹಾರ, ಪ್ರಕೃತಿ, ಪರಿಸರ ಸಂರಕ್ಷಣೆ, ದೇಸಿ ಬೀಜ ಸಂರಕ್ಷಣೆ, ಧರ್ಮ ಜಾಗೃತಿ, ಸಾಮಾಜಿಕ ಸಾಮರ್ಥ್ಯ, ಗ್ರಾಮವಿಕಾಸ, ಭಾರತೀಯ ಕುಟುಂಬ ಪದ್ಧತಿಯ ಸಂರಕ್ಷಣೆ, ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವುದು, ಉದ್ಯೋಗ ಸೃಷ್ಟಿ, ಋಣಮುಕ್ತ ಭಾರತ, ಸಮೃದ್ಧ ಭಾರತದ ನಿರ್ಮಾಣ ನಮ್ಮೆಲ್ಲರ ಗುರಿಯಾಗಬೇಕು ಎಂದರಲ್ಲದೆ, ಸನಾತನ ಧರ್ಮದ ಗೋಮಾತೆಯ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ರಥಯಾತ್ರೆಯಲ್ಲಿ ನೈದಿಲೆ ಚಂದ್ರು, ಹೂತಗೆರೆ ಆನಂದ, ಗುಂಡ ಮಹೇಶ, ಮಂಡ್ಯ ಪ್ರಭು ಮತ್ತಿತರರು ಹಾಜರಿದ್ದರು.