ಹುಲ್ಲೋಳಿ ಗ್ರಾಮದಲ್ಲಿ ಕಾಮಕುಮಾರ ನಂದಿ ಮಹಾರಾಜರ ಹಂತಕರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಪಿಡಿಒಗೆ ಮನವಿ ಸಲ್ಲಿಸಿದರು. ಜಯಪಾಲ ಚೌಗಲಾ, ಪ್ರಕಾಶ ಚೌಗಲಾ, ಶಾಂತಿನಾಥ ಚೌಗಲಾ ಇತರರಿದ್ದರು. 
ಜಿಲ್ಲೆ

ನಂದಿ ಮಹಾರಾಜರ ಹತ್ಯೆ ಖಂಡಿಸಿ ಪ್ರತಿಭಟನೆ

ಹುಕ್ಕೇರಿ: ತಾಲೂಕಿನ ಹುಲ್ಲೋಳಿ ಗ್ರಾಮದಲ್ಲಿ ಜೈನ ಸಮುದಾಯ, ಸಹಕಾರಿ ಸಂಘ ಸಂಸ್ಥೆಗಳು ಹಾಗೂ ಶಾಲಾ ಕಾಲೇಜುಗಳಿಂದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಗುರುವಾರ ವೌನವಾಗಿ ಪ್ರತಿಭಟಿಸಿ ಪಿಡಿಒಗೆ ಮನವಿ ಸಲ್ಲಿಸಿದರು.


ಅರಿಹಂತ ಸೌಹಾರ್ದ ಸಹಕಾರಿ ಸಿಇಒ ಆನಂದ ಚೌಗಲಾ ಮಾತನಾಡಿ, ಮುನಿಗಳ ಹತ್ಯೆ ತಲೆ ತಗ್ಗಿಸುವಂತಹ ಕೃತ್ಯ. ಕೊಲೆಗಾರರಿಗೆ ಕಠಿಣ ಶಿಕ್ಷೆ ನೀಡಬೇಕು. ಸಾಧು ಸಂತರಿಗೆ ಸರ್ಕಾರ ಸೂಕ್ತ ರಕ್ಷಣೆ ಒದಗಿಸಬೇಕು ಎಂದರು.


ಜಯಪಾಲ ಚೌಗಲಾ, ಪ್ರಕಾಶ ಚೌಗಲಾ, ಶಾಂತಿನಾಥ ಚೌಗಲಾ, ಆನಂದ ಚೌಗಲಾ, ಅಜಿತ ಸಪ್ತಸಾಗರ, ಮಹಾವೀರ ಚೌಗಲಾ, ವೇಣುತಾಯಿ ಚೌಗಲಾ, ರಾಜು ಚೌಗಲಾ, ಜಯಪಾಲ ಚೌಗಲಾ, ಚಂದ್ರಕಾಂತ ಚೌಗಲಾ, ತಿಪ್ಪಣ್ಣ ಬೆಳವಿ ಹಾಗೂ ಶ್ರಾವಕ, ಶ್ರಾವಕಿಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ನೇಮಿನಾಥ ಜೈನ ಬಸದಿ ಕಮಿಟಿ, ವೀರಸೇವಾದಳ ಸದಸ್ಯರು, ಮಹಿಳಾ ಮಂಡಳ ಸದಸ್ಯರಿದ್ದರು.