ಉದ್ದೂರ್‌ಕಾವಲ್ ಗ್ರಾಪಂ ವ್ಯಾಪ್ತಿಯ ನಂಜಾಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದಿರುವುದು. 
ಜಿಲ್ಲೆ

ನಂಜಾಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿತ

Mysuru Rural

ರ್ಮಾಪುರ: ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಉದ್ದೂರ್‌ಕಾವಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಜಾಪುರ ಗ್ರಾಮದಲ್ಲಿ ಶಾಂತ ಎಂಬುವರ ಮನೆ ಗೋಡೆ ಕುಸಿದು ಬಿದ್ದಿದೆ.

ಗ್ರಾಪಂ ಸದಸ್ಯ ಮನುಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಂತ್ರಸ್ತರಿಗೆ ಸರ್ಕಾರ ಶೀಘ್ರ ಪರಿಹಾರ ಒದಗಿಸಬೇಕು ಎಂದು ಮನು ಮನವಿ ಮಾಡಿದರು.

ಗ್ರಾಮಲೆಕ್ಕಿಗ ಶಿವಕುಮಾರ್, ಸದಸ್ಯರಾದ, ಶೋಭಾ ನವೀನ್, ಕಂದಾಯ ವಸೂಲಿಗಾರ ಕಿರಣ್‌ಕುಮಾರ್, ಮುಖಂಡರಾದ ಚಂದ್ರಶೇಖರ್, ವಿ.ಚಂದ್ರಶೆಟ್ಟಿ, ವಿಠಲ್ ಹಾಜರಿದ್ದರು.