ಹಾಸನ: ನಗರದಲ್ಲಿ ಅಕ್ಷರ ಬುಕ್ ಹೌಸ್ ಪ್ರಾರಂಭವಾಗಿ 9ವರ್ಷ ಕಳೆದು 10ನೇ ವರ್ಷಕ್ಕೆ ಕಾಲಿಟ್ಟಿರುವ ಹಿನ್ನಲೆಯಲ್ಲಿ 10ರ ಎಲ್ಲಾ ಪುಸ್ತಕಗಳಿಗೆ ಶೇ. 20 ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ಅಕ್ಷರ ಬುಕ್ ಹೌಸ್ ಮಾಲೀಕ ಟೈಮ್ಸ್ ಗಂಗಾಧರ್ ಹೇಳಿದರು.
ಜಿಲ್ಲೆಯ ಜನರಲ್ಲಿ ಪುಸ್ತಕ ಓದುವ ಅಭ್ಯಾಸ ಹುಟ್ಟಿಸಬೇಕೆಂಬ ಉದ್ದೇಶದಿಂದ ನಗರದ ಶಂಕರಮಠ ರಸ್ತೆಯಲ್ಲಿ ಆರಂಭವಾದ ಅಕ್ಷರ ಬುಕ್ ಹೌಸ್ ಒಂಬತ್ತು ಸಾರ್ಥಕ ವರ್ಷಗಳನ್ನು ಪೂರೈಸಿ ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ. ಆದ್ದರಿಂದ ಮೂರು ದಿನಗಳ ಕಾಲ ರಿಯಾಯಿತಿ ನೀಡಲಾಗಿದೆ. ಇದರ ಜೊತೆಗೆ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ನವೆಂಬರ್ ತಿಂಗಳಿನಲ್ಲಿ ಎಲ್ಲಾ ಪುಸ್ತಕಗಳ ಮೇಲೆ ಶೇಕಡ 10ರಷ್ಟು ರಿಯಾಯಿತಿಯನ್ನು ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು .
ಪುಸ್ತಕ ಮಾರಾಟದಿಂದ ಲಾಭ ಗಳಿಕೆ ಸಾಧ್ಯವಿಲ್ಲ. ಜಿಲ್ಲೆಯ ಜನರಲ್ಲಿ ಪುಸ್ತಕ ಓದುವಂತಹ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ನಾವು ಅಕ್ಷರ ಬುಕ್ ಹೌಸ್‌ಗೆ ಲಕ್ಷಾಂತರ ರೂ. ಬಂಡವಾಳ ಹಾಕಿದ್ದು, ಇಲ್ಲಿವರೆಗೂ ಲಾಭ ಬಂದಿಲ್ಲ. ಆದರೆ ಪುಸ್ತಕದ ಮೇಲಿನ ಪ್ರೀತಿಗೆ ಬುಕ್ ಹೌಸ್ ತೆರೆದಿದ್ದೇವೆ ಎಂದರು.
ಶೀಘ್ರದಲ್ಲೇ ಚಿಕ್ಕಮಗಳೂರಿನಲ್ಲಿ ಅಕ್ಷರ ಬುಕ್ ಹೌಸ್‌ನ ಇನ್ನೊಂದು ಶಾಖೆಯನ್ನು ತೆರೆಯುತ್ತೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಕ್ಷರ ಬುಕ್ ಹೌಸ್ ತೆರೆಯಬೇಕೆಂಬ ಗುರಿ ಹಾಕಿಕೊಂಡಿದ್ದೆವೆ. ಸಾಧ್ಯವಾದರೆ ರಾಷ್ಟ್ರ ಮಟ್ಟಕ್ಕೆ ವಿಸ್ತರಿಸುತ್ತೇವೆ ಎಮದು ಹೇಳಿದರು
ಸುದ್ದಿಗೋಷ್ಠಿಯಲ್ಲಿ ಬುಕ್ ಹೌಸ್ ವ್ಯವಸ್ಥಾಪಕ ಮಂಜುನಾಥ್, ಕಾರ್ತಿಕ್ ಇದ್ದರು.