ಜಿಲ್ಲೆ

ನ.5ರಂದು ಸಾಧಕರಿಗೆ ಸನ್ಮಾನ

ಚಿತ್ರದುರ್ಗ:ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದ ಸನ್ಮಾನಿಸಿರುವ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರನ್ನು ಮುರುಘಾ ಮಠದಲ್ಲಿ ನ.5ರಂದು ಏರ್ಪಡಿಸಿರುವ ಉಚಿತ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಗೌರವಿಸಲಾಗುವುದು ಎಂದು ಶ್ರೀ ಮಠ ದ ಆಡಳಿತ ಮಂಡಳಿ ಅಧ್ಯಕ್ಷ ಶಿವ ಯೋಗಿ ಸಿ.ಕಳಸದ್ ತಿಳಿಸಿದ್ದಾರೆ. ಇವರೊಂದಿಗೆ ನಗರದ ಜಿಲ್ಲಾಸ್ಪತ್ರೆ ಸ್ತ್ರೀರೋಗತಜ್ಞ ಡಾ.ಕೆ.ಪಿ.ಮ ಲ್ಲಪ್ಪ, ಬೆಂಗಳೂರಿನ ತಜ್ಞ ವೈದ್ಯ ಡಾ.ಅಶ್ವಿನಿಕುಮಾರ್‌ಪಸಾರ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

---