ಹರಪನಹಳ್ಳಿ ತಾಲೂಕಿನ ಅರಸೀಕೆರೆ ಕೋಲಶಾಂತೇಶ್ವರ ಮಠದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಪ್ರಮುಖರಾದ ವೈ.ಡಿ.ಅಣ್ಣಪ್ಪ, ಪ್ರಶಾಂತ್ ಪಾಟೀಲ್ ಬಿ, ರಾಮಣ್ಣ, ಪೂಜಾರ ಮರಿಯಪ್ಪ, ಅಡ್ಡಿ ಚನ್ನವೀರಪ್ಪ, ಎ.ಎಚ್. ಕೊಟ್ರೇಶ್, ಮಲ್ಲಣ್ಣ, ಎ.ಬಿ.ಬಸವನಗೌಡ, ಷಣ್ಮುಖಪ್ಪ, ಸೋಮಲಿಂಗಪ್ಪ, ಕೊಟ್ರಪ್ಪ, ಸಿದ್ದನಗೌಡ ಇತರರಿದ್ದರು. 
ಜಿಲ್ಲೆ

ನ.1ರಿಂದ 108 ಪೂಜ್ಯರ ಪಾದಪೂಜೆ

ಹರಪನಹಳ್ಳಿ: ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಠಗಳು ದಾಸೋಹ ಹೆಚ್ಚಿಸಬೇಕು ಎಂದು ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಮಠದಲ್ಲಿ 108 ಪೂಜ್ಯರ ಪಾದಪೂಜೆ ಕಾರ್ಯಕ್ರಮ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನಾಡಿನಾದ್ಯಂತ ಪ್ರಸಿದ್ಧ ಮಠಗಳ ಪೂಜ್ಯರು ನ.1ರಿಂದ ಜರುಗಲಿರುವ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ಯಶಸ್ವಿಗೊಳಿಸುವುದು ಎಲ್ಲರ ಜವಾಬ್ದಾರಿ. ಕೃಷಿ ಮೆಳ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಮಹಿಳಾ ಸಮಾವೇಶ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.