ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನ.10 ರಂದು ಸಂಜೆ 4 ಗಂಟೆಗೆ ಅದ್ಧೂರಿ ಕನ್ನಡ ರಾಜ್ಯೋತ್ಸವ ಮತ್ತು ರಾಜ್ಯಮಟ್ಟದ ದೇಹದಾಢ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ರಾಜಣ್ಣ ಫಿಟ್ನೆಸ್‌ನ ಆನಂದ್ ತಿಳಿಸಿದರು.
ರಾಜ್ಯ ಮಟ್ಟದ ದೇಹದಾಢ್ಯ ಸ್ಪರ್ಧೆ ಆಗಿರುವುದರಿಂದ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಸುಮಾರು 200-250 ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದೆ. ಸ್ಪರ್ಧೆಯು ನಾಲ್ಕು ಹಂತದ ಹೈಟ್‌ನಲ್ಲಿ ನಡೆಯಲಿದೆ. ಹಾಸನ ಮೂಲದ ಹೆಚ್.ಪಿ. ಧ್ರುವಕುಮಾರ್ ಈ ಸ್ಪರ್ಧೆಗೆ ಹೆಚ್ಚಿನ ಸಹಕಾರ ಕೊಟ್ಟಿದ್ದಾರೆ. ರಾಯಪುರದ ಆರ್.ಟಿ. ಕೃಷ್ಣೇಗೌಡ, ಕ್ರಷರ್ ಅನಂತಣ್ಣ ಮೊದಲಾದವರು ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಸ್ಪರ್ಧೆಯಲ್ಲಿ ಪಾಲ್ಗೊಂಡವರು ಸೋಲಲಿ, ಗೆಲ್ಲಲಿ, ಭಾಗಿಯಾದವರಿಗೆಲ್ಲಾ ಬಹುಮಾನ ನೀಡಲಾಗುವುದು. ವಿಜೇತರಿಗೆ ವಿಶೇಷ ಬಹುಮಾನ ನೀಡಲಾಗುವುದು.ರಾಜ್ಯಮಟ್ಟದ ದೇಹದಾಢ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ಯುವರತ್ನ ಪ್ರಶಸ್ತಿ ನೀಡಿ 1 ಕೆಜಿಯ ಬೆಳ್ಳಿ ಗದೆ ಹಾಗೂ ನಗದು ಕೊಡಲಾಗುವುದು. ಎರಡನೇ ಬಹುಮಾನವಾಗಿ 15 ಸಾವಿರ ನಗದು, ಟ್ರೋಫಿ, ಸರ್ಟಿಫಿಕೇಟ್ ಕೊಡಲಾಗುವುದು. ಮೂರನೇ ಬಹುಮಾನವಾಗಿ 10 ಸಾವಿರ ನಗದು, ಟ್ರೋಫಿ, ಸರ್ಟಿಫಿಕೇಟ್ ನೀಡಿ ಗೌರವಿಸಲಾಗುವುದು ಹಾಗೂ ಗ್ರೂಪ್ ವಿನ್ನರ್‌ಗೂ ಕೂಡ ವಿವಿಧ ರೀತಿಯ ಬಹುಮಾನ ಕೊಡುವುದಾಗಿ ಎಂದು ಹೇಳಿದರು.
ವಿವಿಧೆಡೆಗಳಿಂದ ಆಗಮಿಸುವ ಸ್ಪರ್ಧಾಳುಗಳಿಗೆ ಉಳಿದುಕೊಳ್ಳಲು ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಸ್ಪರ್ಧೆ ಜೊತೆಗೆ ಅದ್ಧೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಕನ್ನಡಪರ ಹೋರಾಟಗಾರರಿಗೆ ಮತ್ತು ಸಂಘಟನೆಯ ಮುಖಂಡರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಗರ ಹಾಗೂ ಜಿಲ್ಲೆಯ ಪ್ರತಿಯೊಬ್ಬರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತಸ್ವರೂಪ್, ಶಿವಕುಮಾರ್ ಇದ್ದರು.