ಜಿಲ್ಲೆ

ನ.10 ರಂದು ಜಿಲ್ಲಾ ಲೇಖಕರ ಸಂಘ ಉದ್ಘಾಟನೆ

ಚಾಮರಾಜನಗರ: ನಗರದ ರೋಟರಿ ಭವನದಲ್ಲಿ ನ.10 ರಂದು ಜಿಲ್ಲಾ ಲೇಖಕರ ಸಂಘ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಡಾ.ಕೃಷ್ಣಮೂರ್ತಿ ಉದ್ಘಾಟಿಸುವರು.

ಸಾಹಿತಿ ಮತ್ತು ರಾಜ್ಯೋತ್ಸವ ಪುರಸ್ಕೃತ ಪ್ರೊ.ಜಿ.ಎಸ್.ಜಯದೇವ್ ಕನ್ನಡಿ ಮತ್ತು ವಿಮೋಚಕರು ಪುಸ್ತಕ ಬಿಡುಗಡೆ ಮಾಡುವರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮತ್ತು ಚಲನಚಿತ್ರ ನಿರ್ದೇಶಕ ಪ್ರಕಾಶ್‌ರಾಜ್ ಮೇಹು, ರೋಟರಿ ಸಂಸ್ಥೆ ಅಧ್ಯಕ್ಷ ಎಲ್.ನಾಗರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಲೇಖಕರ ಸಂಘದ ಅಧ್ಯಕ್ಷ ರೇಚಂಬಳ್ಳಿ ದುಂಡುಮಾದಯ್ಯ ಅಧ್ಯಕ್ಷತೆ ವಹಿಸುವರು ಎಂದು ಲೇಖಕರ ಸಂಘದ ಕಾರ್ಯದರ್ಶಿ ಸೋಮಶೇಖರ ಬಿಸಲವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.