ಬೆಳಗಾವಿಯಲ್ಲಿ ಆಚರಿಸುವ ಕರ್ನಾಟಕ ರಾಜ್ಯೋತ್ಸವದಲ್ಲಿ ಈ ಬಾರಿ ಧ್ವನಿವರ್ಧಕಗಳ ಮಿತಿ ಹೆಚ್ಚಿಸಬೇಕೆಂದು ಒತ್ತಾಯಿಸಿ ಬೆಳಗಾವಿ ರಾಜ್ಯೋತ್ಸವ ಯುವಕ ಮಂಡಳಿಯಿಂದ ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಲಾಯಿತು. ಸಂಪತ್‌ಕುಮಾರ ದೇಸಾಯಿ, ವಿನಾಯಕ ಬ್ಯಾಳೇರಿ, ಅನಿಲ ದಡ್ಡಿಮನಿ, ಶಿವು ದೇವರವರ ಇತರರಿದ್ದರು. 
ಜಿಲ್ಲೆ

ಧ್ವನಿವರ್ಧಕ ಮಿತಿ ಹೆಚ್ಚಿಸಲು ಒತ್ತಾಯ

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದಲ್ಲಿ ಈ ಬಾರಿ ಧ್ವನಿವರ್ಧಕಗಳ ಮಿತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಬೆಳಗಾವಿ ರಾಜ್ಯೋತ್ಸವ ಯುವಕ ಮಂಡಳಿಯಿಂದ ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಲಾಯಿತು.ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವನಿವರ್ಧಕಗಳಿಗೆ ನಿಯಂತ್ರಣ ಹಾಕುತ್ತಿರುವುದು ನಿಜಕ್ಕೂ ಬೇಸರ ತರಿಸಿದೆ. ರಾಜಕೀಯ ಸಮಾವೇಶ ಹಾಗೂ ಅನೇಕ ಧಾರ್ಮಿಕ ಆಚರಣೆಗಳಲ್ಲಿ ಮಿತಿ ಇಲ್ಲದೆ ಧ್ವನಿವರ್ಧಕಗಳನ್ನು ಬಳಸಲಾಗುತ್ತದೆ. ಬೆಳಗಾವಿಯ ಅದ್ದೂರಿ ರಾಜ್ಯೋತ್ಸವಕ್ಕೆ ನಿಯಂತ್ರಣ ಹಾಕಿದ್ದು ಸರಿಯಲ್ಲ. ಕರೊನಾ ಕಾರಣದಿಂದ ಸುಮಾರು 3 ವರ್ಷಗಳ ನಂತರ ಈ ಬಾರಿ ಕನ್ನಡಪರ ಎಲ್ಲ ಸಂಘಟನೆಗಳು, ಯುವಕ ಮಂಡಳಿಗಳು ವಿಜೃಂಭಣೆಯಿಂದ ಆಚರಿಸಬೇಕೆಂದು ಬಯಸಿದ್ದಾರೆ. ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಮಹೋನ್ನತ ಇತಿಹಾಸವಿದೆ. ಬೆಳಗಾವಿ ಗಡಿಭಾಗ ವಾಗಿರುವುದರಿಂದ ಕನ್ನಡಿಗರ ಸ್ವಾಭಿಮಾನದ ಗುರುತಾಗಿದೆ.

ಹೀಗಾಗಿ ಧ್ವನಿವರ್ಧಕಗಳ ಮಿತಿ ಹೆಚ್ಚಿಸಬೇಕು. ಶಿವಸೇನೆ, ಎಂಇಎಸ್ ನವರು ರಾಜ್ಯೋತ್ಸವದಂದು ಪ್ರತಿವರ್ಷ ಸರ್ಕಾರದ ಆದೇಶ ಉಲ್ಲಂಘಿಸಿ ಕರಾಳ ದಿನ ಆಚರಿಸುತ್ತಾರೆ. ಅವರಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಸಂಪತ್‌ಕುಮಾರ ದೇಸಾಯಿ, ವಿನಾಯಕ ಬ್ಯಾಳೇರಿ, ಅನಿಲ ದಡ್ಡಿಮನಿ, ಶಿವು ದೇವರವರ, ಯೋಗನಗೌಡ ಲಿಂಗದಳ್ಳಿ, ಶುಭಮ್ ಗಡಾದ ಇತರರಿದ್ದರು.