ಜಿಲ್ಲೆ

ಧ್ರುವನಾರಾಯಣ ಹೆಸರಿಡಲು ಒತ್ತಾಯ

ಕೊಳ್ಳೇಗಾಲ: ಪಟ್ಟಣದ ಬಸ್ ಟರ್ಮಿನಲ್‌ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ದಿ.ಆರ್. ಧ್ರುವನಾರಾಯಣ ಹೆಸರಿಡುವಂತೆ ಅಭಿಮಾನಿಗಳು ನಗರಸಭೆ ಆಯುಕ್ತ ರಾಜಣ್ಣ ಅವರಿಗೆ ಒತ್ತಾಯಿಸಿದ್ದಾರೆ.

ಎರಡು ಬಾರಿ ಶಾಸಕರಾಗಿ ಹಾಗೂ ಸಂಸದರಾಗಿ ಕೊಳ್ಳೇಗಾಲ ಸೇರಿದಂತೆ ಜಿಲ್ಲೆಯಲ್ಲಿ ಅಪಾರ ಅಭಿವೃದ್ಧಿ ಕಾರ್ಯಗಳನ್ನು ಧ್ರುವ ನಾರಾಯಣ ಅವರು ಮಾಡಿದ್ದಾರೆ. ಜಾತ್ಯತೀತ ನಾಯಕರಾಗಿ ಎಲ್ಲರ ಜತೆ ವಿಶ್ವಾಸದಲ್ಲಿದ್ದರು. ಈ ಹಿನ್ನೆಲೆಯಲ್ಲಿ ನೂತನವಾಗಿ ಪಟ್ಟಣದಲ್ಲಿ ನಿರ್ಮಾಣವಾಗಿರುವ ಬಸ್ ಟರ್ಮಿನಲ್‌ಗೆ ಹಾಗೂ ಪ್ರಮುಖ ರಸ್ತೆ, ವೃತ್ತಕ್ಕೆ ಆರ್.ಧ್ರುವ ನಾರಾಯಣ ಹೆಸರು ಇಡುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಆರ್.ಧ್ರುವನಾರಾಯಣ ಅಭಿಮಾನಿಗಳಾದ ಯುನೂಸ್ ಪಾಷ, ದರ್ಶನ್, ಸುರೇಶ್, ಮಾಜ್. ಅತೀಭ್, ಯೋಗೇಶ್, ರಾಜು, ಕಾಶೀಫ್ ಇದ್ದರು.