ಸರಗೂರು ತಾಲೂಕಿನ ಹಾದನೂರು ಗ್ರಾಮದಲ್ಲಿ ಆರ್. ಧ್ರುವನಾರಾಯಣ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಿವಮೂರ್ತಿ, ಸತೀಶ್, ಸಿದ್ದರಾಜು, ಪ್ರಕಾಶ್, ರಾಜೇಶ್, ಶಿವರಾಜು ಅರಸು , ಪುಟ್ಟಸ್ವಾಮಿ ಇದ್ದರು. 
ಜಿಲ್ಲೆ

ಧ್ರುವ ಪಕ್ಷ ನಿಷ್ಠೆ ಎಲ್ಲರಿಗೂ ಮಾದರಿ

ಸರಗೂರು: ಕಾಯಕಯೋಗಿ, ಹೃದಯವಂತ ರಾಜಕಾರಣಿ ಆರ್.ಧ್ರುವನಾರಾಯಣ ಅವರ ನಿಧನ ಅಭಿಮಾನಿಗಳಿಗೆ ತುಂಬಲಾರದ ನಷ್ಟ ಎಂದು ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಹೇಳಿದರು.

ಹಾದನೂರು ಗ್ರಾಮದಲ್ಲಿ ಶನಿವಾರ ಧ್ರುವನಾರಾಯಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಧ್ರುವ ಅವರ ಸರಳತೆ, ಸಂಘಟನಾ ಚಾತುರ್ಯ ಹಾಗೂ ಪಕ್ಷ ನಿಷ್ಠೆ ಎಲ್ಲರಿಗೂ ಮಾದರಿ ಎಂದರು.

ಅಂಬೇಡ್ಕರ್ ಸಂಘದ ಅಧ್ಯಕ್ಷ ರಾಜೇಶ್ ಮಾತನಾಡಿ, ಕೋಟೆ ಮತ್ತು ಸರಗೂರು ತಾಲೂಕಿನ ಬಗ್ಗೆ ಧ್ರುವ ಅವರಿಗೆ ಪಾರ ಅಭಿಮಾನವಿತ್ತು ಎಂದರು.

ಮಾಜಿ ಯಜಮಾನರಾದ ಪುಟ್ಟಸ್ವಾಮಿ ಮಾತನಾಡಿದರು. ಯಜಮಾನರಾದ ರಾಜೇಶ್, ಸತೀಶ್, ಸಿದ್ದರಾಜು, ಗ್ರಾಪಂ ಸದಸ್ಯರಾದ ರಾಜೇಶ್, ಶಿವರಾಜು ಅರಸು, ಕೆಂಪಸಿದ್ದ, ಶಿವಲಿಂಗಯ್ಯ, ಚಿದಾನಂದ, ಸಿದ್ದರಾಜು, ಮಹದೇವಸ್ವಾಮಿ, ರಾಜು, ಉಮೇಶ್, ಜೋಗಪ್ಪ, ಶಶಿ, ಸ್ವಾಮಿ, ಚಿಕ್ಕಣ್ಣ ಇತರರಿದ್ದರು.