ಜಿಲ್ಲೆ

ಧ್ಯಾನ್, ಅನುಷ್ಕಾ, ಲಿಜೋ ಜೇಮ್ಸ್‌ಗೆ ಪ್ರಶಸ್ತಿ

ಗೋಣಿಕೊಪ್ಪ: ಪಿಸಿ ಕ್ಲಬ್ ಮತ್ತು ಪೊನ್ನಂಪೇಟೆ ನಿಸರ್ಗ ಜೆಸಿ ವತಿಯಿಂದ ಅನುದಾನಿತ ಪ್ರೌಢಶಾಲಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಎನ್.ಧ್ಯಾನ್ ಪ್ರಥಮ ಸ್ಥಾನ ಪಡೆದುಕೊಂಡರು.


4 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಪೂರ್ವ ಪ್ರಾಥಮಿಕ ಮತ್ತು ಮುಕ್ತ ವಿಭಾಗದಲ್ಲಿ 6, ಪ್ರಾಥಮಿಕ, ಪ್ರೌಢ ವಿಭಾಗದಲ್ಲಿ 7 ಜನ ವಿಜೇತರಿಗೆ ಬಹುಮಾನ ನೀಡಲಾಯಿತು. ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಎನ್. ಧ್ಯಾನ್, ಎಂ.ಎ.ಆರಾಧ್ಯ, ಪೊನ್ನಿಮಾಡ ಬೋಜಮ್ಮ, ವಿಭಾ ಶೆಟ್ಟಿ, ಎಚ್.ಎಸ್.ಅನುಷಾ, ಭವನ್ ತಿಮ್ಮಯ್ಯ. ಪ್ರಾಥಮಿಕ ವಿಭಾಗದಲ್ಲಿ ಬಿ.ಪಿ.ಅನುಷ್ಕಾ, ಎಂ.ಕೆ.ಗೌತಮ್, ಕೆ.ಕಿತೇಶ್, ಎಂ.ಕೆ. ಗಣೇಶ್, ಪ್ರಥಮ್ ಮುತ್ತಮ್ಮ, ಕರುಣ್ ಕುಶಾಲಪ್ಪ, ಡಿ. ಚೈತನ್ಯ. ಪ್ರೌಢ ವಿಭಾಗದಲ್ಲಿ ಲಿಜೋ ಜೇಮ್ಸ್, ದಿಗಂತ್, ಅಮೃತ್ ನಾಣಯ್ಯ, ಭೀಮಯ್ಯ, ತೇಜಸ್, ಶ್ಲೋಕ್ ಮೇತ್ರಿ, ಚಿರಣ್ ಎನ್.ಪ್ರಭು. ಮುಕ್ತ ವಿಭಾಗದಲ್ಲಿ ರಜತ್ ಗುರುರಾಜ್, ಎಚ್.ಎಸ್.ಜೀವನ್, ಟಿ.ಕೆ.ರಾಮು, ಲತೀಶ್, ಪ್ರಮೋದ್, ಸುನೀತಾ ಬಹುಮಾನ ಪಡೆದುಕೊಂಡರು.
ಪಿಸಿ ಕ್ಲಬ್ ಅಧ್ಯಕ್ಷ ಪೊನ್ನಿಮಾಡ ಪ್ರದೀಪ್, ವಕೀಲ ಕಳ್ಳಿಚಂಡ ಅಪ್ಪಣ್ಣ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ಶಾಜಿ ಅಚ್ಚುತ್ತನ್, ಮತ್ರಂಡ ದಿಲು ಪಂದ್ಯಾವಳಿಗೆ ಚಾಲನೆ ನೀಡಿದರು. ಪೊನ್ನಂಪೇಟೆ ನಿಸರ್ಗ ಜೆಸಿ ಅಧ್ಯಕ್ಷ ಅಪ್ಪಂಡೇರಂಡ ದಿನು, ಕಾರ್ಯದರ್ಶಿ ಚೆಟ್ಟೋಳೀರ ಶರತ್ ಸೋಮಣ್ಣ, ಪಿಸಿ ಕ್ಲಬ್ ಕಾರ್ಯದರ್ಶಿ ಆಂಥೋನಿ, ಅನುದಾನಿತ ಪ್ರೌಢಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕುಪ್ಪಂಡ ತಿಮ್ಮಯ್ಯ ಇದ್ದರು.