ಜಿಲ್ಲೆ

ಧ್ಯಾನದಿಂದ ಮನಸ್ಸಿಗೆ ನೆಮ್ಮದಿ

ಚಿತ್ರದುರ್ಗ: ಧ್ಯಾನದಿಂದ ಮನಸ್ಸಿನ ನೆಮ್ಮದಿ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದೆಂದು ನಿವೃತ್ತ ಡಿಡಿಪಿಐ ರೇವಣಸಿದ್ದಪ್ಪ ಹೇಳಿದರು. ರಾಮಚಂದ್ರ ಮಿಷನ್ ಹಾರ್ಟ್‌ಫುಲ್‌ನೆಸ್ ಧ್ಯಾನ ಕೇಂದ್ರದಿಂದ ತರಾಸು ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಧ್ಯಾನೋತ್ಸವ ಉ ದ್ಘಾಟಿಸಿ ಮಾತನಾಡಿ,ಆಧುನಿಕ ಈ ಜಗತ್ತಿನಲ್ಲಿಂದು ಪ್ರತಿಯೊಬ್ಬರು ಒತ್ತಡದಲ್ಲಿ ಬದುಕುವಂತಾಗಿದೆ. ಎಲ್ಲರೂ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು,ಧ್ಯಾನ ಮಾನಸಿಕ ನೆಮ್ಮದಿ ಹಾಗೂ ದೈಹಿಕ ಆರೋಗ್ಯಕ್ಕೆ ನೆರವಾಗುತ್ತದೆ ಎಂದರು.

ಹಾರ್ಟ್‌ಫುಲ್‌ನೆಸ್ ರಾಜ್ಯಸಂಚಾಲಕ ಮೈಸೂರಿನ ಮಧುಸೂದನ್ ಮಾತನಾಡಿ ವಿವೇಕಯುತ ಜೀವನಕ್ಕಾಗಿ ಧ್ಯಾನದ ಅಗತ್ಯತೆಯನ್ನು ಪ್ರತಿ ಪಾದಿಸಿದರು. ಹಾರ್ಟ್‌ಫುಲ್‌ನೆಸ್ ಪ್ರಶಿಕ್ಷಕ ಡಾ.ವಿ.ಬಸವರಾಜ್,ಸಂಚಾಲಕ ಡಾ.ವಿ.ಸಿದ್ದೇಶ್ವರನ್ ಹಾಗೂ ಎಸ್.ಎನ್.ಕಾಶಿವಿಶ್ವನಾಥಶೆಟ್ಟಿ ಮಾ ತನಾಡಿದರು.

ಧ್ಯಾನ,ಶುದ್ಧೀಕರಣ,ಪ್ರಾರ್ಥನೆ ಕುರಿತು ವಿಚಾರ ಗೋಷ್ಠಿಗಳು ನಡೆದವು.ಹಾರ್ಟ್‌ಫುಲ್‌ನೆಸ್‌ನ ಹಿರಿಯ ಪ್ರಶಿಕ್ಷಕ ಎಸ್.ವೆಂಕಟಾದ್ರಿ,ನಿವೃತ್ತ ಡಿಡಿ ಪಿಐ ಎನ್.ಎಂ.ರಮೇಶ್ ಇದ್ದರು. ಗಂಜಿಗಟ್ಟೆ ಆರ್.ಕೃಷ್ಣಮೂರ್ತಿ ಜಾನಪದ ಗೀತ ಗಾಯನ ನಡೆಸಿಕೊಟ್ಟರು.