ಶೃಂಗೇರಿಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಧ್ಯಾನ ಶಿಬಿರ ನಡೆಯಿತು. ಸಮಿತಿ ಪದಾಧಿಕಾರಿಗಳಾದ ಆಶಾ, ಕವನಾ, ಸೌಮ್ಯಾ, ವೈಷ್ಣವಿ, ವೈಭವಿ, ಮಹೇಶ್ ಕಾಕತ್ಕರ್ ಇದ್ದರು. 
ಜಿಲ್ಲೆ

ಧ್ಯಾನದಿಂದ ಏಕಾಗ್ರತೆ ವೃದ್ಧಿ

ಶೃಂಗೇರಿ: ಮಾನಸಿಕ ಸ್ಥಿರತೆ ವೃದ್ಧಿ ಮತ್ತು ಏಕಾಗ್ರತೆಗಾಗಿ ಧ್ಯಾನ ಅತ್ಯಂತ ಪರಿಣಾಮಕಾರಿ ಎಂದು ತಾಲೂಕು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಚಾಲಕ ನಾಗೇಶ್ ಕಾಮತ್ ತಿಳಿಸಿದರು.

ಶನಿವಾರ ವಿಶ್ವ ಧಾನ್ಯದಿನ ಪ್ರಯುಕ್ತ ಆಯೋಜಿಸಿದ್ದ ಧ್ಯಾನ ಶಿಬಿರದಲ್ಲಿ ಮಾತನಾಡಿ, ಧ್ಯಾನ ಮಾನಸಿಕ ಮತ್ತು ದೈಹಿಕ ತಂತ್ರಗಳ ಸಂಯೋಜನೆ ಬಳಸಿಕೊಂಡು ಮನಸ್ಸನ್ನು ಕೇಂದ್ರೀಕರಿಸುವ ವಿಧಾನ. ಧ್ಯಾನವು ಒತ್ತಡ, ಭಯ, ಆತಂಕ, ಖಿನ್ನತೆ ಮತ್ತು ನೋವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಶಾಂತಿ, ಗ್ರಹಿಕೆ ಹೆಚ್ಚಿಸುತ್ತದೆ. ಒತ್ತಡದ ಬದುಕು ಸಾಗಿಸುವ ಪ್ರತಿಯೊಬ್ಬರಿಗೂ ಧ್ಯಾನ ಅವಶ್ಯಕ. ಪ್ರತಿ ನಿತ್ಯ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಮಾಡಿದರೆ ಮನಸ್ಸು ಕ್ರಿಯಾಶೀಲವಾಗುತ್ತದೆ ಎಂದರು.

ಶ್ರೀ ಪತಂಜಲಿ ಯೋಗ ಸಮಿತಿ ಶಿಕ್ಷಕಿ ಸೀತಾಲಕ್ಷ್ಮೀ, ನಗರ ಸಂಚಾಲಕಿ ಗಾಯತ್ರಿ ನಾಗರಾಜ್, ಪದಾಧಿಕಾರಿಗಳಾದ ರವಿಕುಮಾರ್, ಮಕ್ಬೂಲ್, ಕುಮಾರ್, ಕಾರ್ತಿಕ್, ಸುಬ್ರಹ್ಮಣ್ಯ, ಮಲ್ಲಿಕಾ, ಮೇಘನಾ ಇದ್ದರು.