ನೆಲಮಂಗಲ: ತಾಲೂಕಿನ ಮಲ್ಲರಬಾಣವಾಡಿಯ ತರಳಬಾಳು ನಗರ ಬಡಾವಣೆಯಲ್ಲಿ ಟೀಮ್ ರೇವ್ ರನ್ನರ್ಸ್ ರೇಸಿಂಗ್ ಕ್ಲಬ್ ಭಾನುವಾರ ಆಯೋಜಿಸಿದ್ದ ಕಾರ್ ರೇಸ್ ಸ್ಪರ್ಧೆಯಲ್ಲಿ ಬೆಂಗಳೂರಿನ ಐಎನ್‌ಆರ್‌ಸಿ ಡ್ರೈವರ್ ಧೃವಚಂದ್ರಶೇಖರ್‌ಗೆ ಬೆಸ್ಟ್ ಡ್ರೈವರ್ ಕಪ್, ಮಂಗಳೂರಿನ ಐಎನ್‌ಆರ್‌ಸಿ ಡ್ರೈವರ್ ಮಡಿಕೇರಿಯ ಸುಹೇಮ್‌ಕಬೀರ್‌ಗೆ ಫಾಸ್ಟೆಸ್ಟ್ ಡ್ರೈವರ್ ಕಪ್ ಲಭಿಸಿದೆ.
ಶನಿವಾರ ನಡೆದ 16 (ಕ್ಲಾಸ್)ವಿದಧ ಬೈಕ್ ಓಡಿಸುವ ಸ್ಪರ್ಧೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು, ಮೊದಲ 3 ಮಂದಿಗೆ ನಗದು ಬಹುಮಾನ ಜತೆಗೆ ನೆನಪಿನ ಕಾಣಿಕೆ ನೀಡಲಾಯಿತು. ಅಲ್ಲದೆ, ವಿವಿಧ ವರ್ಗಗಳಲ್ಲಿ ಭಾಗವಹಿಸಿದ್ದ ಬೆಂಗಳೂರಿನ ಸಚ್ಚಿನ್‌ಗೆ ಬೆಸ್ಟ್ ರೈಡರ್ ಕಪ್ ನೀಡಲಾಯಿತು.
ಭಾನುವಾರ ನಡೆದ ಸುಮಾರು 14 (ಕ್ಲಾಸ್) ವಿದಧ ಕಾರು ಓಡಿಸುವ ಸ್ಪರ್ಧೆಯಲ್ಲಿ ಸುಮಾರು 110 ಸ್ಪರ್ಧಿಗಳು ಭಾಗವಹಿಸಿದ್ದು ಪ್ರತಿ (ಕ್ಲಾಸ್) ವಿದಧ ಕಾರು ಓಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ಮೂವರಿಗೆ ನಗದು ಬಹುಮಾನ, ನೆನಪಿನಕಾಣಿಕೆ ನೀಡಲಾಯಿತು.
ಅಂತೆಯೇ ಕನಿಷ್ಠ 4 ವಿವಿಧ ಕಾರು ಓಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇಬ್ಬರು ಸ್ಪರ್ಧಿಗಳಿಗೆ ಬೆಸ್ಟ್ ಡ್ರೈವರ್, ಫಾಸ್ಟೆಸ್ಟ್ ಡ್ರೈವರ್ ಕಪ್ ನೀಡಲಾಯಿತು.
ಅಭಿನಂದನೆ: ದಿ.ಫೆಡರೇಷನ್ ಆಫ್ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದಿಂದ ತೀರ್ಪುಗಾರರಾಗಿ ಆಗಮಿಸಿದ್ದ ಜೀವರತಿನಮ್, ಸತ್ಯವತ್, ಮೋಟಾರ್‌ಪೋಟ್ ಶ್ರೀನಿವಾಸ್, ವಾಹನ ಪರಿಶೀಲಕ ಚಕ್‌ಪಾಯಿಂಟ್ ಬಾಬು ಅವರನ್ನು ರೇಸಿಂಗ್ ಕ್ಲಬ್‌ನಿಂದ ಸನ್ಮಾನಿಸಲಾಯಿತು. ಮಾಕಳಿ ಹಿಮಾಲಯ ಡ್ರಗ್ ಕಂಪನಿ ಹಾಗೂ ಯಕೋಮಾ ಕಂಪನಿ ಸ್ಪರ್ಧೆಗೆ ಪ್ರಾಯೋಜಕತ್ವ ನೀಡಿದ್ದವು.
ರೇಸಿಂಗ್ ಕ್ಲಬ್‌ನ ದರ್ಶನ್, ವಿ.ರಂಜಿತ್, ಸುನೀಲ್‌ಕುಮಾರ್, ಚರೀದ್, ಸುಜನ್, ಅಭಿಜಿತ್, ರಾಕೇಶ್, ಫರ‌್ಹಾನ್, ಚೇತನ್ ಮತ್ತಿತರರಿದ್ದರು.