ಚಿಕ್ಕಮಗಳೂರಿನ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಅಜಾದ್ ಪಾರ್ಕ್ ಗಣೇಶೋತ್ಸವ ಸಮಿತಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶ ಮೆರವಣಿಗೆಗೆ ಶಾಸಕ ಎಚ್.ಡಿ.ತಮ್ಮಯ್ಯ ಚಾಲನೆ ನೀಡಿದರು. ಸಿ.ಎಸ್.ಕುಬೇರ, ಸಿ.ಆರ್.ಕೇಶವಮೂರ್ತಿ, ವರಸಿದ್ಧಿ ವೇಣುಗೋಪಾಲ್, ಎಲ್.ವಿ.ಕೃಷ್ಣಮೂರ್ತಿ ಮತ್ತಿತರರಿದ್ದರು.  
ಜಿಲ್ಲೆ

ಧಾರ್ಮಿಕವಾಗಿ ಸರ್ವರನ್ನೂ ಒಗ್ಗೂಡಿಸುವುದೇ ಗಣೇಶೋತ್ಸವ

ಚಿಕ್ಕಮಗಳುರು: ಹಿಂದುತ್ವವನ್ನು ಗಟ್ಟಿಗೊಳಿಸಲು ಧಾರ್ಮಿಕವಾಗಿ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಿ ಆಚರಿಸುವುದೇ ಸಾರ್ವಜನಿಕ ಗಣೇಶೋತ್ಸವದ ಪ್ರಮುಖ ಉz್ದÉÃಶ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಅಭಿಪ್ರಾಯಪಟ್ಟರು.

ನಗರದ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಅಜಾದ್ ಪಾರ್ಕ್ ಗಣೇಶೋತ್ಸವ ಸಮಿತಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಕಳೆದ ೮೯ ವರ್ಷಗಳಿಂದ ನಗರದಲ್ಲಿ ವಿಶೇಷವಾಗಿ ಗಣಪತಿಯನ್ನು ಅಜಾದ್ ಮೈದಾನದಲ್ಲಿ ಪ್ರತಿಷ್ಠಾಪಿಸಿ ೨೧ ದಿನಗಳ ಕಾಲ ವಿವಿಧ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗಣೇಶೋತ್ಸವ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಕಳೆದ ೧೦ ವರ್ಷಗಳಿಂದ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಿ ವೈಭವದಿಂದ ಪೂಜೆ ಸಲ್ಲಿಸಿ ವಿವಿಧ ಸಾಂಸ್ಕೃತಿಕ ಜಾನಪದ ಕಲಾತಂಡಗಳ ಮೂಲಕ ಇಂದು ನಗರದ ಪ್ರಮುಖ ರಸ್ತೆಗಳಲ್ಲಿ ಗಣೇಶ ಮೆರವಣಿಗೆ ಸಾಗಲಿದೆ ಎಂದು ತಿಳಿಸಿದರು.

ಬಾಲಗಂಗಾಧರ ತಿಲಕರು ಜಾತ್ಯಾತೀತ ರಾಷ್ಟç ಭಾರತದಲ್ಲಿ ಎಲ್ಲರನ್ನೂ ಒಗ್ಗೂಡಿಸಲು ಭಾವೈಕ್ಯತಾ ಸಂಕೇತವಾದ ಗಣೇಶೋತ್ಸವದ ಮೂಲಕ ಸ್ವಾತಂತ್ರö್ಯ ಹೋರಾಟದಲ್ಲಿ ವಿಜಯ ಸಾಧಿಸಿದ್ದರು ಎಂದು ಸ್ಮರಿಸಿದರು.

ನಗರದ ಎಲ್ಲ ನಾಗರಿಕರು ಶಾಂತಿ ಸಂಯಮದಿAದ ವಿಘ್ನೇಶ್ವರ ಮೆರವಣಿಗೆಯಲ್ಲಿ ಪಾಲ್ಗೊಂಡು ಶ್ರೀಯವರ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದ ಅವರು, ಗಣೇಶ ಮೂರ್ತಿಯನ್ನು ಬಸವನಹಳ್ಳಿ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ಹೇಳಿದರು.

ಗಣೇಶೋತ್ಸವ ಎಲ್ಲರ ಆರೋಗ್ಯ ಕಾಪಾಡುವ ಜೊತೆಗೆ ರೈತರಿಗೆ ಮಳೆ, ಬೆಳೆ, ಬೆಲೆ ಬರುವಂತೆ ಕರುಣಿಸಲಿ ಎಂದು ಪ್ರಾರ್ಥಿಸಿದರು. ಮುಂದಿನ ವರ್ಷದ ಗಣೇಶೋತ್ಸವದ ವೇಳೆಗೆ ಪೆಂಡಾಲ್ ಮೇಲೆ ಮೇಲ್ಛಾವಣಿ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

ಮೆರವಣಿಗೆ ಶ್ರೀಯವರನ್ನು ಅಲಂಕಿತವಾದ ಪ್ರಭಾವಳಿಯಲ್ಲಿ ಕುಳ್ಳಿರಿಸಿ, ಮಂಗಳವಾದ್ಯ ರಂಗುರAಗಿನ ಹೂಮಳೆಗರೆಯುವ ಬಾಣ ಬಿರುಸುಗಳÀ ನಯನ ಮನೋಹರವಾದ ಕೀಲು ಕುದುರೆ ನೃತ್ಯ, ಸ್ಯಾಕ್ಸೋಫೋನ್ ವಾದ್ಯ, ವೀರಗಾಸೆ ಕುಣೀತ, ಡೊಳ್ಳು ಕುಣಿತ, ಹಳ್ಳಿವಾದ್ಯ ಇನ್ನೂ ಮುಂತಾದ ಜನಪದ ಕಲಾತಂಡಗಳೊAದಿಗೆ ವಿಜೃಂಭಣೆಯಿAದ ಕೂಡಿದ ಮೆರವಣಿಗೆಯು, ಚಿಕ್ಕಮಗಳೂರು ನಗರದ ಪ್ರಮುಖ ರಾಜ ಬೀದಿಗಳಲ್ಲಿ ಹಾಗೂ ಎಂ.ಜಿ. ರಸ್ತೆಯಲ್ಲಿ ಹಾದು ಹೋಗಿ ರಾತ್ರಿ ಬಸವನಹಳ್ಳಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎನ್ ಕುಬೇರ, ಪ್ರಧಾನ ಕಾರ್ಯದರ್ಶಿ ಸಿ.ಆರ್ ಕೇಶವಮೂರ್ತಿ, ಖಜಾಂಚಿ ಎಚ್.ಕೆ ಮಂಜುನಾಥ್, ಕಾರ್ಯಾಧ್ಯಕ್ಷ ಈಶ್ವರಪ್ಪ ಎನ್.ಕೋಟೆ, ಗೌರವಾಧ್ಯಕ್ಷ ಬಿ.ವಿರೂಪಾಕ್ಷಪ್ಪ, ಎಂ.ದಿವಾಕರ್, ವರಸಿದ್ಧಿ ವೇಣುಗೋಪಾಲ್, ಎಲ್.ವಿ ಕೃಷ್ಣಮೂರ್ತಿ, ಸಿ.ಎಂ ವೇಣುಗೋಪಾಲ್, ಎಂ.ಎಸ್ ಉಮೇಶ್ ಕುಮಾರ್, ಎಚ್.ವೈ ಮೋಹನ್ ಕುಮಾರ್, ಸಿ.ಈ.ಚೇತನ್ ಏಕಾಂತ್‌ರಾಮ್, ಶ್ರೀನಿವಾಸ್, ಸಿ.ಎಸ್ ಹೊನ್ನಪ್ಪ ಶೆಟ್ಟಿ, ಸಚಿನ್ ಎಂ.ಕೆ, ಗಂಗಾಧರ ಸಿ.ಎನ್, ಹೆಚ್.ಎನ್ ಉಮಾಶಂಕರ್, ಸಿ.ಬಿ ಪ್ರಸಾದ್, ಸದಸ್ಯರುಗಳಾದ ಬಿ.ಸಿ ಶಿವಶಂಕರ್, ಮಂಜುನಾಥ್ ಸಿ.ಎನ್, ಸಿ.ವಿ ಕಲ್ಲೇಶ್, ಸುಜಿತ್.ಸಿ, ಸಿ.ಎಂ ದಯಾನಂದ್, ಪಿ.ಕಿರಣ್, ಬಿ.ಆರ್ ಮಾಲತೇಶ್ ರಾವ್, ಸಿ.ಆರ್ ನಾಗೇಶ್, ಆಡಿಟರ್ ಎಚ್.ಆರ್ ಮೋಹನ್ ಮತ್ತಿತರರಿದ್ದರು.