ಕಂಪ್ಲಿ: ಆಧುನಿಕ ಜೀವನಶೈಲಿ ನೆಪದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಮನೋಭಾವನೆಗಳಿಂದ ವಿಮುಖರಾಗಬಾರದು ಎಂದು ಹೆಬ್ಬಾಳ ಬೃಹನ್ಮಠದ ಶ್ರೀ ನಾಗಭೂಷಣ ಶಿವಾಚಾರ್ಯರು ಹೇಳಿದರು.
ಪಟ್ಟಣದ ವೀರಶೈವ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಪ್ರಗತಿಬಂಧು ಸ್ವ ಸಹಾಯ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಶನಿವಾರ ಮಾತನಾಡಿದರು. ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ನೀಡುವುದರಿಂದ ಸಾರ್ಥಕವಾದ ಜೀವನ ಸಾಗಿಸಲು ಸಾಧ್ಯ ಎಂದರು.
ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿ ಮಾತನಾಡಿ, ಸಾಮೂಹಿಕ ಸತ್ಯನಾರಾಯಣ ಪೂಜೆಯಿಂದ ಸಮಾಜದಲ್ಲಿ ಭಾವೈಕ್ಯ ಮೂಡುವುದರೊಂದಿಗೆ ಒಟ್ಟಾಗಿ ಬಾಳುವಂತೆ ಪ್ರೇರಣೆ ನೀಡುತ್ತದೆ ಎಂದರು. ಪೂಜಾ ಸಮಿತಿ ಅಧ್ಯಕ್ಷ ಡಾ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು.
ಟ್ರಸ್ಟ್ ನಿರ್ದೇಶಕ ರೋಹಿತಾಕ್ಷ, ಪ್ರಮುಖರಾದ ಎಲ್.ರಾಘವೇಂದ್ರ, ಕೆ.ಎಂ.ಹೇಮಯ್ಯಸ್ವಾಮಿ, ಎ.ಸಿ.ದಾನಪ್ಪ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ಜಗದೀಶ ಜಿ.ರಾಯ್ಕರ್, ಎನ್.ರಾಮಾಂಜನೇಯಲು, ಬಿ.ಎಂ.ಪುಷ್ಪಾ, ಎಸ್.ಡಿ.ಬಸವರಾಜ, ಎಚ್.ಉಮಾಮಹೇಶ್ವರಿ, ಎಲಿಗಾರ ವೆಂಕಟರೆಡ್ಡಿ, ಡಿ.ಶ್ರೀಧರ ಶ್ರೇಷ್ಠಿ, ಅರವಿ ಬಸವನಗೌಡ, ಮಂಜುಳಾ ಐಹೊಳ್ಳಿ, ಸಂಜುಕುಮಾರ್, ಮಾರುತಿನಗರ ವಲಯದ ಪೂಜಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.