ಜಿಲ್ಲೆ

ಧಾರ್ಮಿಕ ಪ್ರಜ್ಞೆ ಹೊಂದಿದ ಕೊಡೇಕಲ್ ಜನ

ಕೊಡೇಕಲ್: ಗ್ರಾಮದ ಜನರು ಧಾರ್ಮಿಕ ಪ್ರಜ್ಞೆಯೊಂದಿಗೆ ಬಸವನ್ಣನವರ ತತ್ವಾದರ್ಶಗಳನ್ನು ಪಾಲಿಸುತ್ತಾ ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಮಾಜಿ ಸಚಿವ ನರಸಿಂಹನಾಯಕ(ರಾಜುಗೌಡ) ಹೇಳಿದರು.

ಗ್ರಾಮದ ಶ್ರೀ ಬಸವೇಶ್ವರ ಗಜಾನನ ಸಮಿತಿಯಿಂದ ಬುಧವಾರ ಸಂಜೆ ಆಯೋಜಿಸಿದ ಗಣೇಶೋತ್ಸವ ಸಾಂಸ್ಕೃತಿಕ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾವೈಕ್ಯತೆಯ ಪುಣ್ಯಭೂಮಿಯಾದ ನಮ್ಮೂರಿನಲ್ಲಿ ಎಲ್ಲ ಸಮುದಾಯದ ಜನರು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ಬಸವನ್ಣನವರ ತತ್ವಾದರ್ಶ ಮತ್ತು ಧಾರ್ಮಿಕ ಪ್ರಜ್ಞೆ ಉಳ್ಳವರಾಗಿದ್ದಾರೆ ಎಂದರು.

೪೦ ವರ್ಷಗಳಿಂದ ಗಣೇಶ ಪ್ರತಿಷ್ಠಾಪಿಸಿ ವಿವಿಧ ಸಾಂಸ್ಕೃತಿಕ ಕರ‍್ಯಕ್ರಮ ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುತ್ತಿರುವ ಯುವಕರ ಕಾರ್ಯ ಶ್ಲಾಘನೀಯ. ಯುವಕರು ದೇಶದ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಮುಂದಾಗಬೇಕು. ದೇಶದ ಗಡಿಯಲ್ಲಿ ನಿಂತು ನಮ್ಮನ್ನು ರಕ್ಷಣೆ ಮಾಡಿದ ಸೈನಿಕರನ್ನು ಸನ್ಮಾನಿಸುತ್ತಿರುವುದು ನಿಜಕ್ಕೂ ಸಂತೋಷವಾಗಿದೆ ಎಂದರು.

ಮುದಗಲ್‌ನ ತಿಮ್ಮಾಪುರ ಕಲ್ಯಾಣ ಆಶ್ರಮದ ಶ್ರೀ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು. ಅರ‍್ಯಸ್ವಾಮಿ ಜಾಲಿಬೆಂಚಿ ವಿಶೇಷ ಉಪನ್ಯಾಸ ನೀಡಿದರು. ಈ ವೇಳೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷ ನೀಲಪ್ಪ ತೆಗ್ಗಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ನೀಲಮ್ಮ ಹಾವೇರಿ, ಗೀತಾ ಸಜ್ಜನ್, ಮಾಜಿ ಸೈನಿಕ ಕಾಶೀಮ್‌ಸಾಬ್, ಸಂಗೀತ ಶಿಕ್ಷಕ ಅಮರಯ್ಯ ಅವರನ್ನು ಸನ್ಮಾನಿಸಲಾಯಿತು. ಧಾರ ಬಳಸಿ ವಿದ್ಯಾರ್ಥಿನಿ ಸಾಹಿತ್ಯ ತಯಾರಿಸಿದ ಬಯಲೋಳು ಬಯಲಾಗಿರುವ ವೀರಯ್ಯ ಅಪ್ಪನವರ ಭಾವಚಿತ್ರ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿತು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತೀಕ ಕರ‍್ಯಮ ಜರುಗಿದವು.

ಬಸವ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ, ಶ್ರೀ ಮಹಾಂತ ಸ್ವಾಮೀಜಿ, ಶ್ರೀ ನೀಲಕಂಠಸ್ವಾಮಿ ವಿರಕ್ತಮಠ, ರಾಜ ಮನೆತನದ ರಾಣಿ ರಂಗಮ್ಮ ಜಾಹಾಗೀರದಾರ, ನೇಕಾರ ಸಮಾಜದ ಜಿಲ್ಲಾಧ್ಯಕ್ಷ ವೀರಸಂಗಪ್ಪ ಹಾವೇರಿ, ರಂಗನಾಥ ದೋರಿ, ಗ್ರಾಪಂ ಅಧ್ಯಕ್ಷ ಶಿವಶರಣ ಕುಂಬಾರ, ಶಾಮಸುಂದರ ಜೋಶಿ, ಮೋಹನ ಪಾಟೀಲ್, ಕನಕು ಜಿರಾಳ, ಮಲ್ಲು ನವಲಗುಡ್ಡ, ವಸಂತಗೌಡ ಮಾಲಿಗೌಡ್ರ, ಅಲ್ಲಮಪ್ರಭುಸ್ವಾಮಿ ಕೊಡೇಕಲ್ಮಠ, ಈರಸಂಗಯ್ಯ ದೊಡ್ಡೆಗೋಳ, ರವೀಂದ್ರ ಅಂಗಡಿ, ಸಂತೋಷ ಕೊಡೇಕಲ್ಮಠ, ಚಂದ್ರಶೇಖರ ಹೋಕ್ರಾಣಿ, ಭೀಮನಗೌಡ ಬಿರಾದಾರ, ವಿರೇಶ ಮುತ್ತಗಿ, ಬಸಣ್ಣ ಬಾವೂರ, ಸಂಗಮೇಶ ಅಡ್ಡಿ, ಸುರೇಶ ದೇವೂರ ಇತರರಿದ್ದರು.

ಬಸವರಾಜ ಭದ್ರಗೋಳ ಪ್ರಾಸ್ತಾವಿಕ ಮಾತನಾಡಿದರು. ಸೋಮಶೇಖರ ಪಂಜಗಲ್ ಸ್ವಾಗತಿಸಿದರು, ಬಸವರಾಜ ಕೆಂಡದ ವಂದಿಸಿದರು. ಕೋರಿಸಂಗಯ್ಯ ಗಡ್ಡದ ನಿರೂಪಣೆ ಮಾಡಿದರು.