ಜಿಲ್ಲೆ

ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲಿ

ರಾಘವೇಂದ್ರಗೌಡ ಭೀ ಪಾಟೀಲ್

ಹುಕ್ಕೇರಿ: ಧಾರ್ಮಿಕ ಕಾರ್ಯಕ್ರಮಗಳು ನಮ್ಮಲ್ಲಿ ಒಳ್ಳೆಯ ಆಚಾರ, ವಿಚಾರ ಬೆಳೆಸುತ್ತವೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ಪಟ್ಟಣದ ವಿದ್ಯುತ್ ಸಹಕಾರಿ ಸಂಘದ ನೌಕರರ ವಸತಿ ಗೃಹಗಳ ಕಾಲನಿಯ ಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ 38ನೇ ವಾರ್ಷಿಕೋತ್ಸವದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿ, ಯುವ ಜನಾಂಗಕ್ಕೆ ಧಾರ್ಮಿಕ ಆಚಾರ, ವಿಚಾರಗಳ ತಿಳಿವಳಿಕೆ ಅವಶ್ಯವಾಗಿದೆ. ಮಕ್ಕಳು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಪಾಲಕರು ಪ್ರೋತ್ಸಾಹಿಸಬೇಕು ಎಂದರು.

ದೇವಸ್ಥಾನ ಸಮಿತಿ ಅಧ್ಯಕ್ಷ ನೇಮಿನಾಥ ಖೇಮಲಾಪುರೆ ಶಾಸಕರನ್ನು ಸನ್ಮಾನಿಸಿದರು. ಅರ್ಚಕ ಶಾಂತಯ್ಯ ಹಿರೇಮಠ, ಬೆಮುಲ್ ನಿರ್ದೇಶಕ ರಾಯಪ್ಪ ಡೂಗ, ಮುಖಂಡರಾದ ಸತ್ತೆಪ್ಪ ನಾಯಿಕ, ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ರಾಜು ಮುನ್ನೋಳಿ, ಸಂತೋಷ ಕತ್ತಿ, ಬಸವರಾಜ ಹಿರೇಮಠ, ಚಿದಾನಂದ ಬೆಲ್ಲದ, ಶೇಖರ ಮರಬಸ್ಸನವರ, ಶ್ರೀಶೈಲ ಹುಂಡೇಕಾರ, ವಿದ್ಯುತ್ ಸಹಕಾರಿ ಸಂಘದ ರೆಸಿಡೆಂಟ್ ಇಂಜಿನಿಯರ ನೇಮಿನಾಥ ಖೇಮಲಾಪುರೆ, ಅಧಿಕಾರಿಗಳಾದ ಉದಯ ಮಗದುಮ್ಮ, ಬಸವರಾಜ ವಾಜಂತ್ರಿ, ವಿನಾಯಕ ರಾಮದುರ್ಗ, ಅನ್ನಪ್ಪ ಕಮತೆ, ಮಲಗೌಡ ಪಾಟೀಲ ಇತರರಿದ್ದರು.