ಮೋಘಾ ಗ್ರಾಮದಲ್ಲಿ ಗುರುವಂದನೆ ಕಾರ್ಯಕ್ರಮದ ನಿಮತ್ತ ಅಪಾರ ಭಕ್ತರ ಜೈಘೋಷದ ಮಧ್ಯೆ ಅದ್ದೂರಿಯಾಗಿ ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರ ಮೆರವಣಿಗೆ ನಡೆಯಿತು. 
ಜಿಲ್ಲೆ

ಧಾರ್ಮಿಕ ಆಚರಣೆಯಿಂದ ನೆಮ್ಮದಿ ಜೀವನ

ಕಾಳಗಿ: ಒಳ್ಳೆಯ ಸಂಸ್ಕಾರದಿAದ ಕಲುಷಿತ ಸಮಾಜವೂ ತಿಳಿಗೊಳ್ಳಲು ಸಾಧ್ಯ. ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಹಾರಕೂಡ ಹಿರೇಮಠ ಸಂಸ್ಥಾನದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಮೋಘಾದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ತುಲಾಭಾರ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ಹೇಳಿಕೊಳ್ಳುವ ಕೆಲಸ ಆಗಬೇಕಿದೆ. ಅಲ್ಲದೆ ಮಠ- ಮಂದಿರಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರತಿಒಯೊಬ್ಬರೂ ಪಾಲ್ಗೊಳ್ಳಬೇಕು. ಸೌಹಾರ್ದಯುತ ಮತ್ತು ಭಕ್ತಿ ಭಾವಗಳ ಸಂಗಮದAತೆ ಕೂಡಿರುವ ಮೋಘಾದ ಜನರ ಭಕ್ತಿ ಭಾವ ಮಾದರಿಯಾಗಿದೆ ಎಂದರು.

ಶ್ರೀ ಅಮೋಘಸಿದ್ಧ ಮಹಾರಾಜ, ಬಾಲಾಜಿರಾವ್ ಪಾಟೀಲ್, ರಾಮರಾವ ಪಾಟೀಲ್, ರಾಮರಾವ ದೇಶಪಾಂಡೆ, ರಾಮರೆಡ್ಡಿ ಬೆನಕಿಪಳ್ಳಿ, ರಾಮರಾವ ಕುಲಕರ್ಣಿ, ಸಂತೋಷ ಕುಂಬಾರ, ಚನ್ನಪ್ಪ ವಚ್ಚ, ಶರಣು ಸಾಲಿಮಠ, ಸಿದ್ದಪ್ಪ ಕಲಶೆಟ್ಟಿ, ಅಪ್ಪಣ್ಣ ಜನವಾಡ, ಸಂತೋಷ ಚಿಕ್ಕಮಠ ಇತರರಿದ್ದರು.

ಶ್ರೀಗಳ ಅದ್ದೂರಿ ಮೆರವಣಿಗೆ: ಮೋಘಾ ಗ್ರಾಮಕ್ಕೆ ಆಗಮಿಸಿದ ಶ್ರೀ ಡಾ.ಚನ್ನವೀರ ಶಿವಾಚಾರ್ಯರನ್ನು ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಮಹಿಳೆಯರು ಕುಂಭ ಹೊತ್ತು, ಪಾದಪೂಜೆ ನೆರವೇರಿಸಿ ಗುರಗಳನ್ನು ಬರಮಾಡಿಕೊಂಡರು. ಬಳಿಕ ಬಸ್ ನಿಲ್ದಾಣದಿಂದ ಹಾರಕೂಟ ಮಠದವರೆಗೂ ತೆರೆದ ವಾಹನದಲ್ಲಿ ಗುರುಗಳ ವೈಭವದ ಮೆರವಣಿಗೆ ಜರುಗಿತು. ವಿವಿಧ ವಾದ್ಯ ಮೇಳಗಳು ಗಮನಸೆಳೆದವು. ಬಳಿಕ ಗ್ರಾಮಸ್ಥರು ನಾಣ್ಯಗಳಿಂದ ತುಲಾಭಾರ ನೆರವೇರಿಸಿ, ಆಶೀರ್ವಾದ ಪಡೆದರು.