ಜಿಲ್ಲೆ

ಧಾರ್ಮಿಕ ಆಚರಣೆಗಳಿಂದ ಬದುಕು ಸುಂದರ

ಕೊಡೇಕಲ್: ಧಾರ್ಮಿಕ ವಿಧಿ-ವಿಧಾನಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಭಾಗವಾಗಿವೆ. ಧಾರ್ಮಿಕ ಆಚರಣೆಗಳಿಂದ ಬದುಕು ಸುಂದರವಾಗುತ್ತದೆ ಎಂದು ಬಸವ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ ನುಡಿದರು.

ನವರಾತ್ರಿ ನಿಮಿತ್ತ ಗ್ರಾಮದ ದ್ಯಾಮಮ್ಮ ದೇವಿ ದೇವಸ್ಥಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಒಂಬತ್ತು ದಿನದ ಶ್ರೀ ದೇವಿ ಪುರಾಣದ ಮಂಗಲೋತ್ಸವದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಪುರಾಣ ಶ್ರವಣದಿಂದ ಜೀವನಮುಕ್ತಿ ಸಿಗಲ್ಲ. ಪುರಾಣಗಳಲ್ಲಿನ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಮುಕ್ತಿ ಪಡೆಯಲು ಸಾಧ್ಯ ಎಂದರು.

ಆರ್‌ಟಿಜೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹನುಮಂತ ನಾಯಕ (ಬಬಲುಗೌಡ) ಮಾತನಾಡಿ, ಊರಿನಲ್ಲಿ ನಡೆಯುವ ಧಾರ್ಮಿಕ ಕರ‍್ಯಕ್ರಮಗಳಲ್ಲಿ ಎಲ್ಲ ವರ್ಗದ ಜನತೆ ಸಾಮರಸ್ಯದಿಂದ ಭಾಗವಹಿಸುತ್ತಿರುವುದಕ್ಕೆ ೨೬ ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ದೇವಿ ಪುರಾಣವೇ ಸಾಕ್ಷಿ ಎಂದು ಹೇಳಿದರು.
ಪುರಾಣಿಕರಾದ ಗದಗಿನ ಪುಟ್ಟರಾಜ ಶಾಸ್ತಿç ಮಾತನಾಡಿ, ದೇವಿ ಆರಾಧನೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸುತ್ತದೆ. ಎಲ್ಲರೂ ಸದ್ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಸತ್ಯ ಶುದ್ಧ ಕಾಯಕ ಮಾಡಿದರೆ ಜೀವನ ಸುಂದರವಾಗುತ್ತದೆ ಎಂದರು.

ಶ್ರೀ ಗುರು ದುರದುಂಡೇಶ್ವರ ವಿರಕ್ತ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯದ ಕಾರ್ಯಕ್ರಮದಲ್ಲಿ ಶ್ರೀ ನಿಲಕಂಠ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ ಶಿವಶರಣ ಕುಂಬಾರ, ಈರಸಂಗಯ್ಯ ಕೊಡೇಕಲ್ಮಠ, ರಾಣಿ ರಂಗಮ್ಮ ಜಹಾಗೀರದಾರ, ರಾಜಾ ಸುಜಯಸಿಂಹ ನಾಯಕ ಜಹಾಗೀರದಾರ, ಎಸ್.ಎಸ್. ಜೋಶಿ, ರಂಗನಾಥ ದೋರಿ, ವಸಂತಗೌಡ ಮಾಲಿಪಾಟೀಲ, ವೀರಸಂಗಪ್ಪ ಹಾವೇರಿ, ಕನಕು ಜಿರಾಳ, ಮಲ್ಲು ನವಲಗುಡ್ಡ, ಸೋಮಲಿಂಗಪ್ಪ ದೋರಿ, ಬಸನಗೌಡ ಮಾಲಿಗೌಡ್ರ, ಮೋಹನ ಪಾಟೀಲ, ಬಸಣ್ಣ ಕಂಚಗಾರ, ಡಾ.ಬಿ.ಬಿ. ಬಿರಾದಾರ, ಸಂಗಪ್ಪ ಶಿವಪುರ, ಮಹ್ಮದ್ ಖಾಜಿ, ವೀರಸಂಗಪ್ಪ ಅಂಬ್ಲಿಹಾಳ, ಬಸಲಿಂಗಯ್ಯ ಮಠ, ಬೊಮ್ಮಣ್ಣ ಪತ್ತಾರ, ನಿಜಲಿಂಗಪ್ಪ ಬಡಿಗೇರ, ರಮೇಶ ಬಿರಾದಾರ, ನಿಂಗಣ್ಣ ಪತ್ತಾರ, ತಿಪ್ಪಣ್ಣ ದ್ಯಾಮನಾಳ, ಮಲ್ಲಣ್ಣ ಹೂಗಾರ, ಅಂಬಣ್ಣ ದೋರಿ, ಬಸಣ್ಣ ಹಳೇಪೂಜಾರಿ, ಸಂಗಮೇಶ ಅಡ್ಡಿ ಇದ್ದರು.


ದೇವರಾಜ ಮತ್ತು ನಾಗರಾಜ ಹೂಗಾರ ಸಹೋದರರು ಸಂಗೀತ ಸೇವೆ ಸಲ್ಲಿಸಿದರು. ಗುರುರಾಜ ಜೋಶಿ ನಿರೂಪಣೆ ಮಾಡಿದರು. ರವೀಂದ್ರ ಅಂಗಡಿ ಸ್ವಾಗತಿಸಿದರು. ಬಸವರಾಜ ಭದ್ರಗೋಳ ವಂದಿಸಿದರು. ಚಿಕ್ಕ ಮಕ್ಕಳು ದೇವಿಯ ಒಂಬತ್ತು ಅವತಾರದ ಛದ್ಮವೇಷ ಧರಸಿ ಗಮನಸೆಳೆದರು.