ಧಾರವಾಡ: ಜಿಲ್ಲೆಯಲ್ಲಿ ಕರೊನಾ ಪೀಡಿತರ ಸಂಖ್ಯೆ ದಿನೇ ದಿನೆ ನಾಗಾಲೋಟದೊಂದಿಗೆ ಏರಿಕೆಯಾಗುತ್ತಿದೆ. ಕರೊನಾ ಹರಡುವಿಕೆ ತಡೆಗೆ ಪರಸ್ಪರ ಅಂತರ ಕಾಪಾಡುವಂತೆ ಜಿಲ್ಲಾಡಳಿತ ಮಾಡುತ್ತಿರುವ ಶ್ರಮವೆಲ್ಲ ನೀರು ಪಾಲಾದಂತಿದೆ.
ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಜನ ಗುರುವಾರ ಸಂಜೆ ಮಾರುಕಟ್ಟೆಯಲ್ಲಿ ಜಮಾವಣೆಗೊಂಡಿದ್ದರು. ಪರಸ್ಪರ ಅಂತರ ಮರೆತು ಪೂಜಾ ಸಾಮಗ್ರಿ ಖರೀದಿಯಲ್ಲಿ ನಿರತರಾಗಿದ್ದರು. ಇನ್ನು ಹೂವು, ಹಣ್ಣು, ಇತರ ಪೂಜಾ ಸಾಮಗ್ರಿ ಮಾರಾಟಗಾರರು ಮಾಸ್ಕ್ ಧರಿಸದೆ ವ್ಯಾಪಾರದಲ್ಲಿ ನಿರತರಾಗಿದ್ದು ಕಂಡುಬಂತು. ಮಾಸ್ಕ್ ಧರಿಸವರಿಗೆ ದಂಡ ವಿಧಿಸಲಾಗುವುದು ಎಂದು ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿಗಳು ಪ್ರತಿದಿನ ಬಡಾಯಿ ಕೊಚ್ಚಿಕೊಳ್ಳುತ್ತಲೇ ಇದ್ದಾರೆ. ಅದಕ್ಕೆ ಕ್ಯಾರೆ ಎನ್ನದ ಜನ ಕರೊನಾ ಭಯವಿಲ್ಲದಂತೆ ತಮ್ಮಷ್ಟಕ್ಕೆ ತಾವು ಖರೀದಿಯಲ್ಲಿ ನಿರತರಾಗಿದ್ದರು.
EndFragment