ಧಾರವಾಡ: ನಗರದ ರಪಾಟಿ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಳದ ವತಿಯಿಂದ ಆಯೋಜಿಸಿರುವ ಎರಡು ದಿನಗಳ 29ನೇ ಅಖಿಲ ಭಾರತ ತತ್ವಜ್ಞಾನ ಸಮ್ಮೇಳನಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಉತ್ತರಾಧಿಮಠಾಧೀಶ ಸತ್ಯಾತ್ಮತೀಥ೯ ಶ್ರೀಪಾದಂಗಳವರು, ಸೋಸಲೆ ವ್ಯಾಸರಾಜರ ಮಠಾಧೀಶರಾದ ಶ್ರೀ ವಿದ್ಯಾಶ್ರೀಶತೀಥ೯ ಶ್ರೀಪಾದಂಗಳವರು ಹಾಗೂ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀಥ೯ ಶ್ರೀಪಾದಂಗಳವರು ಸಮ್ಮೇಳನಕ್ಕೆ ಚಾಲನೆ ನೀಡಿದರು.
ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಅತಿಥಿಯಾಗಿ ಪಾಲ್ಗೊಂಡಿದ್ದರು.
ಪಂ. ಜಯತೀರ್ಥಾಚಾರ್ಯ ಮಳಗಿ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು.
ಇದೇವೇಳೆ ವಿಶ್ವೇಶತೀಥ೯ ಶ್ರೀಪಾದಂಗಳವರ ಪ್ರಮುಖ ಛಾಯಾಚಿತ್ರಗಳ ಪ್ರದಶ೯ನ ಮತ್ತು ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಉದ್ಘಾಟನೆಯನ್ನು ಶ್ರೀ ವಿಶ್ವಪ್ರಸನ್ನತೀಥ೯ ಶ್ರೀಪಾದಂಗಳವರು ನೆರವೆರಿಸಿದರು.