ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರ 50 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 882ಕ್ಕೆ ಏರಿದೆ. ಶುಕ್ರವಾರ ಇಬ್ಬರು ಮೃತಪಟ್ಟಿದ್ದು, ಕರೊನಾಕ್ಕೆ ಬಲಿಯಾದವರ ಸಂಖ್ಯೆ 29ಕ್ಕೆ ಏರಿದೆ.
ಹುಬ್ಬಳ್ಳಿ ತಾಲೂಕಿನಲ್ಲಿಯೇ ಅತಿ ಹೆಚ್ಚು ಪ್ರಕರಣ ಪತ್ತೆಯಾಗಿದೆ. ತಾಲೂಕುವಾರು ವಿವರ ಈ ಮುಂದಿನಂತಿದೆ.
ಹುಬ್ಬಳ್ಳಿ ತಾಲೂಕು: ನೆಗಡಿ, ಕೆಮ್ಮು, ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹುಬ್ಬಳ್ಳಿಯ 50 ವರ್ಷದ ಪುರುಷ, 63 ವರ್ಷದ ವೃದ್ಧ, ಸಿದ್ದಾರ್ಥ ಕಾಲನಿ 79 ವರ್ಷದ ವೃದ್ಧ, ಉಣಕಲ್ ತಾಜ್ನಗರದ 69 ವರ್ಷದ ವೃದ್ಧ, ಸದರಸೋಫಾದ 53 ವರ್ಷದ ಪುರುಷ, ಕಿಲ್ಲಾದ 57 ವರ್ಷದ ಪುರುಷ, 53 ವರ್ಷದ ಮಹಿಳೆ, ಜಂಗ್ಲಿಪೇಟೆಯ 22 ವರ್ಷದ ಯುವಕ, 46 ವರ್ಷದ ಮಹಿಳೆ, 48 ವರ್ಷದ ಪುರುಷ, ಸುಭಾಷ ನಗರ 1ನೇ ಕ್ರಾಸ್ನ 33 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.
ಆದರ್ಶ ನಗರದ 48 ವರ್ಷದ ಪುರುಷ, ಬಾಣತಿಕಟ್ಟಾದ 32 ವರ್ಷದ ಪುರುಷ, 25 ವರ್ಷದ ಯುವತಿ, ಯಲ್ಲಾಪುರ ಓಣಿಯ 61 ವರ್ಷದ ವೃದ್ಧ, ಇಂದ್ರಪ್ರಸ್ಥ ನಗರದ 34 ವರ್ಷದ ಮಹಿಳೆ, 27 ವರ್ಷದ ಮಹಿಳೆ, ಸದಾಶಿವ ನಗರದ 61 ವರ್ಷದ ಪುರುಷ, ಬ್ಯಾಹಟ್ಟಿ ಪ್ಲಾಟ್ನ 59 ವರ್ಷದ ಮಹಿಳೆ, ನೇಕಾರ ನಗರದ 22 ವರ್ಷದ ಪುರುಷ, ಆನಂದ ನಗರದ 47 ವರ್ಷದ ಪುರುಷ, ಲೋಹಿಯಾ ನಗರದ 12 ವರ್ಷದ ಬಾಲಕಿ, 34 ವರ್ಷದ ಮಹಿಳೆ, 8 ವರ್ಷದ ಬಾಲಕ, ಹುಬ್ಬಳ್ಳಿಯ 22 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಧಾರವಾಡ: ಧಾರವಾಡ ಜಿಲ್ಲಾ ನ್ಯಾಯಾಲಯ ಬಳಿಯ ನಿವಾಸಿ 63 ವರ್ಷದ ವೃದ್ಧೆ, ಮಣಕಿಲ್ಲಾದ 51 ವರ್ಷದ ಮಹಿಳೆ, ಸಪ್ತಾಪುರದ 59 ವರ್ಷದ ಪುರುಷ, ಬನಶ್ರೀ ನಗರದ 58 ವರ್ಷದ ಪುರುಷ, ವಿನಾಯಕ ನಗರದ 62 ವರ್ಷದ ಪುರುಷ, ಮಹಿಷಿ ರಸ್ತೆ ರಘೊತ್ತಮ ಅಪಾರ್ಟ್ವೆುಂಟ್ನ 16 ವರ್ಷದ ಬಾಲಕನಲ್ಲಿ ಕರೊನಾ ವೈರಸ್ ಪತ್ತೆಯಾಗಿದೆ.
ಧಾರವಾಡ ಸಂಚಾರ ಪೊಲೀಸ್ ಠಾಣೆಯ 35 ವರ್ಷದ ಪುರುಷ, ಆಕಾಶವಾಣಿ ಬಳಿಯ 60 ವರ್ಷದ ಪುರುಷ, 25 ವರ್ಷದ ಯುವಕ, 56 ವರ್ಷದ ಪುರುಷ, ಸೋಮಾಪುರ ಗ್ರಾಮದ 41 ವರ್ಷದ ಪುರುಷ, 62 ವರ್ಷದ ಪುರುಷ, ನವಲಗುಂದ ಓಣಿಯ 31 ವರ್ಷದ ಮಹಿಳೆ, 39 ವರ್ಷದ ಮಹಿಳೆ, 30 ವರ್ಷದ ಮಹಿಳೆ, ರಾಘವೇಂದ್ರ ವೃತ್ತದ 48 ವರ್ಷದ ಪುರುಷ, 82 ವರ್ಷದ ವೃದ್ಧೆ, ಶ್ರೀರಾಮನಗರದ 34 ವರ್ಷದ ಪುರುಷ, ಮುರುಘಾ ಮಠ ಬಳಿಯ ತೇಲಗಾರ ಓಣಿಯ 39 ವರ್ಷದ ಪುರುಷನಿಗೆ ಸೋಂಕು ತಗುಲಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಕುಂದಗೋಳ ತಾಲೂಕು: ಕುಂದಗೋಳ ಸಾರ್ವಜನಿಕ ಆಸ್ಪತ್ರೆ ಎದುರಿನ 37 ವರ್ಷದ ಪುರುಷ, ಡಾ.ಅಂಬೇಡ್ಕರ್ನಗರದ 45 ವರ್ಷದ ಮಹಿಳೆ, ತಾಲೂಕಿನ ಸಂಶಿ ಗ್ರಾಮದ 5 ವರ್ಷದ ಬಾಲಕಿ, 5 ವರ್ಷದ ಬಾಲಕನಿಗೆ ಕರೊನಾ ದೃಢಪಟ್ಟಿದೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ಸದಾಶಿವಪೇಟೆಯ 26 ವರ್ಷದ ಯುವಕ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿರುವ ಧಾರವಾಡ ಲೈನ್ ಬಜಾರ್ನ 39 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಮತ್ತೆ ಇಬ್ಬರ ಸಾವು
ಧಾರವಾಡ: ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ ಓರ್ವ ಹಾಗೂ ಬಳ್ಳಾರಿ ಜಿಲ್ಲೆಯ ಓರ್ವ ಕಳೆದ 2 ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಿಳಿಸಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ತುಂಗಭದ್ರಾ ಡ್ಯಾಂ ನಿವಾಸಿ 40 ವರ್ಷದ ಪುರುಷ ಜು. 6ರಂದು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ಗೆ ದಾಖಲಾಗಿದ್ದನು. ಗುರುವಾರ ಮೃತಪಟ್ಟಿದ್ದಾನೆ. ಹಳೇಹುಬ್ಬಳ್ಳಿ ಸದರಸೋಫಾ ನಿವಾಸಿ 60 ವರ್ಷದ ಪುರುಷ ಜು. 7ರಂದು ಚಿಕಿತ್ಸೆಗೆ ದಾಖಲಾಗಿದ್ದನು. ಶುಕ್ರವಾರ ಮೃತಪಟ್ಟಿದ್ದಾನೆ ಎಂದು ಪ್ರಕಟಣೆ ತಿಳಿಸಿದೆ.
5 ಜನರಿಗೆ ಮನೆಯಲ್ಲಿರಲು ಅವಕಾಶ
ಧಾರವಾಡ: ಕೋವಿಡ್ ಸೋಂಕು ಇದ್ದರೂ ರೋಗ ಲಕ್ಷಣ ಇಲ್ಲದವರು ಮತ್ತು ಸೌಮ್ಯ ಲಕ್ಷಣವುಳ್ಳ ಜನರಿಗೆ ತಮ್ಮ ಮನೆಗಳಲ್ಲಿಯೇ ಪ್ರತ್ಯೇಕವಾಗಿ ಇದ್ದು ಟೆಲಿ ಕನ್ಸಲ್ಟೇಷನ್ ಮೂಲಕ ಚಿಕಿತ್ಸೆ ಪಡೆಯುವ ಅವಕಾಶ ಕಲ್ಪಿಸಿದ 2ನೇ ದಿನವಾದ ಶುಕ್ರವಾರ, ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಐವರು ಸ್ವಯಂ ಪ್ರೇರಣೆಯಿಂದ ಈ ಮಾದರಿಯ ಚಿಕಿತ್ಸೆ ಆಯ್ದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಈ ಅವಕಾಶ ಜಾರಿಗೊಳಿಸಿದ ನಂತರ 2 ದಿನಗಳಲ್ಲಿ 17 ಜನರನ್ನು ಹೋಂ ಐಸೋಲೇಷನ್ ಚಿಕಿತ್ಸೆಗೆ ಒಳಪಡಿಸಲಾಗಿದೆ. ಕರೊನಾ ದೃಢಪಟ್ಟ ನಂತರ ವೈದ್ಯರ ತಂಡವು ಪರಿಶೀಲಿಸಿ ಈ ಕುರಿತು ನಿರ್ಧಾರ ಕೈಗೊಂಡು ಶಿಫಾರಸು ಮಾಡುತ್ತದೆ. ಅದನ್ನು ಆಧರಿಸಿ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಶನಿವಾರ, ಭಾನುವಾರ ಜವಳಿ ಅಂಗಡಿ ಬಂದ್
ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೊನಾ ಹಾವಳಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಬಟ್ಟೆ ಅಂಗಡಿಗಳನ್ನು ಬಂದ್ ಮಾಡಲು ನಗರದ ಜವಳಿ ಮತ್ತು ಬಟ್ಟೆ ವರ್ತಕರ ಸಂಘದ ವತಿಯಿಂದ ನಿರ್ಧರಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಸತೀಶ ಮೆಹ್ತಾ ತಿಳಿಸಿದ್ದಾರೆ.
ಮತ್ತೆ ಮೂವರಿಗೆ ಪ್ಲಾಸ್ಮಾ ಥೆರಪಿ
ಹುಬ್ಬಳ್ಳಿ: ರಾಜ್ಯದಲ್ಲಿ ಮೊದಲ ಯಶಸ್ವಿ ಪ್ಲಾಸ್ಮಾ ಥೆರಪಿ ಮಾಡುವ ಮೂಲಕ ವಿಕ್ರಮ ಸಾಧಿಸಿದ್ದ ಇಲ್ಲಿನ ಕಿಮ್ಸ್, ಕಳೆದೊಂದು ವಾರದಲ್ಲಿ ಮತ್ತೆ ಮೂವರಿಗೆ ಅದೇ ಶಸ್ತ್ರಚಿಕಿತ್ಸೆ ಮಾಡಿದ್ದು, ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದೆ.
ಮೇ ತಿಂಗಳಲ್ಲಿ ಮೊದಲ ಪ್ಲಾಸ್ಮಾ ಥೆರಪಿ ನಡೆಸಲಾಗಿತ್ತು. ಐಸಿಎಂಆರ್ ಅನುಮತಿಗಾಗಿ ಕಾಯಲಾಗುತ್ತಿತ್ತು. ಅನುಮತಿ ಸಿಕ್ಕ ವಾರದಲ್ಲಿಯೇ ಹುಬ್ಬಳ್ಳಿಯ ಇಬ್ಬರು ಹಾಗೂ ಹೊಸಪೇಟೆಯ ಒಬ್ಬ ರೋಗಿಗೆ ಪ್ಲಾಸ್ಮಾ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಧಾರವಾಡದ ಒಬ್ಬರು ಹಾಗೂ ಹುಬ್ಬಳ್ಳಿಯ ಇಬ್ಬರು ಪ್ಲಾಸ್ಮಾ ನೀಡಿದ್ದಾರೆ.
ಸೋಂಕಿತ ಪ್ರತಿಯೊಬ್ಬರಿಗೂ ತಲಾ 200 ಎಂಎಲ್ ಪ್ಲಾಸ್ಮಾ ಕೊಡಲಾಗಿದೆ. ಈ ಕಾರ್ಯ ಜೂ. 27ರಿಂದಲೇ ಶುರುವಾಗಿದ್ದು, ಜು.7ಕ್ಕೆ ಮುಗಿದಿದೆ. ಥೆರಪಿಗೆ ಒಳಗಾದವರು ಚೇತರಿಸಿಕೊಳ್ಳುತ್ತಿದ್ದಾರೆ. ಮತ್ತೆ ಕೆಲ ದಿನ ಬಿಟ್ಟು ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಿದ್ದು, ವರದಿ ನೆಗೆಟಿವ್ ಬರುವ ವಿಶ್ವಾಸವಿದೆ.
ಮೆಡಿಸಿನ್ ವಿಭಾಗದ ಡಾ. ರಾಮ್ ಕೌಲಗುಡ್ಡ, ಡಾ. ಸಚಿನ್ ಹೊಸಕಟ್ಟಿ, ಪ್ಯಾಥಾಲಜಿ ವಿಭಾಗದ ಡಾ. ಪುರುಷೋತ್ತಮ ರೆಡ್ಡಿ, ಡಾ. ಕವಿತಾ ಏವೂರ ಅವರ ತಂಡ ಪ್ಲಾಸ್ಮಾ ಶಸ್ತ್ರಚಿಕಿತ್ಸೆ ನಡೆಸಿದ್ದು, ನವನಗರ ಕ್ಯಾನ್ಸರ್ ಆಸ್ಪತ್ರೆ ಹಾಗೂ ಧಾರವಾಡದ ಎಸ್ಡಿಎಂ ಆಸ್ಪತ್ರೆಯ ವೈದ್ಯರು ಸಹಕಾರ ನೀಡಿದ್ದಾರೆ. ಪ್ಲಾಸ್ಮಾ ಥೆರಪಿಗೆ ಒಳಗಾದದವರ ಮೇಲೆ ವೈದ್ಯಕೀಯ ನಿಗಾ ಇಡಲಾಗಿದೆ. ಹೃದಯ ಬಡಿತ, ಆಮ್ಲಜನಕ ಪ್ರಮಾಣ, ರಕ್ತ ಸಂಚಾರವನ್ನು ಗಮನಿಸಲಾಗುತ್ತಿದೆ.
ಸಚಿವ ಸುಧಾಕರ ಪ್ರೋತ್ಸಾಹ
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಅವರು ವಿಶೇಷ ಕಾಳಜಿ ವಹಿಸಿ ಕಿಮ್ಸ್ ವೈದ್ಯರ ತಂಡಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಪ್ರತಿ ಹಂತದಲ್ಲೂ ಮಾಹಿತಿ ಪಡೆದುಕೊಂಡು, ಮುಂದುವರಿಯುವಂತೆ ಹೇಳಿದ್ದರು ಎಂದು ಗೊತ್ತಾಗಿದೆ.
ಕೋವಿಡ್ ಆಸ್ಪತ್ರೆಗಳ ಒಳರೋಗಿಗಳಿಗೆ ಆಂಟಿಜನ್ ಪರೀಕ್ಷೆ
ಧಾರವಾಡ: ಸರ್ಕಾರದಿಂದ ಜಿಲ್ಲೆಗೆ 3,300 ಆಂಟಿಜನ್ ಪರೀಕ್ಷಾ ಕಿಟ್ಗಳು ಬರಲಿವೆ. ಕಿಮ್್ಸ, ಎಸ್ಡಿಎಂ, ಜಿಲ್ಲಾಸ್ಪತ್ರೆ ಸೇರಿ ಇತರ ಆಸ್ಪತ್ರೆಗಳಿಗೆ ದಾಖಲಾಗುವ ಸಾಮಾನ್ಯ ಒಳ ರೋಗಿಗಳನ್ನು ಆಂಟಿಜನ್ ಪರೀಕ್ಷೆಗೆ ಒಳಪಡಿಸಲು ಅನುಕೂಲವಾಗಲಿದೆ. ಇದರಿಂದ ಕೋವಿಡ್ನ ತಪಾಸಣಾ ವರದಿ ತ್ವರಿತವಾಗಿ ಕೆಲವೇ ಗಂಟೆಗಳಲ್ಲಿ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಆರೋಗ್ಯ ಕಾರ್ಯಪಡೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತೀವ್ರ ನೆಗಡಿ, ಕೆಮ್ಮು, ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆ ಪ್ರಕರಣಗಳು ಹಾಗೂ ಕಿಮ್್ಸ, ಎಸ್ಡಿಎಂ, ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ಯುೕತರ ಕಾಯಿಲೆಗಳ ಚಿಕಿತ್ಸೆಗೆ ದಾಖಲಾಗುವ ರೋಗಿಗಳ ತ್ವರಿತ ವರದಿಗಾಗಿ ಆಂಟಿಜನ್ ಪರೀಕ್ಷೆಗೆ ಒಳಪಡಿಸಬಹುದು. ಇದರಿಂದ ವೈರಾಣು ಹರಡುವುದನ್ನು ನಿಯಂತ್ರಿಸಲು ಸಾಧ್ಯ ಎಂದರು.
ನಿಗದಿತ ಕೋವಿಡ್ ಆಸ್ಪತ್ರೆಗಳ ಸಾಮಾನ್ಯ ವಾರ್ಡ್ಗಳಲ್ಲಿ ಜನದಟ್ಟಣೆ ಕಡಿಮೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ರೋಗಿಗಳನ್ನು ಭೇಟಿ ಮಾಡಲು ಬರುವ ವ್ಯಕ್ತಿಗಳಿಗೆ ನಿರ್ಬಂಧ ಹೇರಬೇಕು. ಸೋಂಕು ದೃಢಪಟ್ಟ ವ್ಯಕ್ತಿಗಳ ದಾಖಲು ಹಾಗೂ ಬಿಡುಗಡೆ ನಿಯಮಗಳನ್ನು ಇನ್ನಷ್ಟು ಸರಳಗೊಳಿಸಿ ಕಾರ್ಯ ಚುರುಕುಗೊಳಿಸಬೇಕು. ಸೋಂಕಿತ ವ್ಯಕ್ತಿಗಳನ್ನು ಆಸ್ಪತ್ರೆಗೆ ಸೇರಿಸುವುದು ಮತ್ತು ಬಿಡುಗಡೆ ಮಾಡುವ ಕಾರ್ಯ ಕೈಗೊಳ್ಳಲು ಪೂರ್ಣ ಪ್ರಮಾಣದ ತಂಡ ರಚಿಸಿದ್ದು, ಜಿಲ್ಲೆಯ ಹಿರಿಯ ಅಧಿಕಾರಿಗಳು, ವೈದ್ಯರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು ಇದ್ದಾರೆ ಎಂದರು.
ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಆಂಟಿಜನ್ ಪರೀಕ್ಷೆ ವೇಳೆ ಕೋವಿಡ್ ಪಾಸಿಟಿವ್ ದೃಢಪಟ್ಟರೆ ಮತ್ತೆ ಪರೀಕ್ಷಿಸುವ ಅಗತ್ಯವಿಲ್ಲ. ಆದರೆ, ಸೋಂಕಿನ ಲಕ್ಷಣಗಳಿದ್ದು, ವರದಿ ನೆಗೆಟಿವ್ ಬಂದರೆ ಮತ್ತೆ ಮೂಗು ಮತ್ತು ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು. ಸೋಂಕಿನ ಲಕ್ಷಣವಿರುವವರು ಮತ್ತು ಇಲ್ಲದವರನ್ನು ಪ್ರತ್ಯೇಕಗೊಳಿಸಿ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ಗಳಿಗೆ ದಾಖಲಿಸುವ ಕಾರ್ಯದಲ್ಲಿ ವ್ಯತ್ಯಯವಾಗಬಾರದು ಎಂದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಕಿಮ್್ಸ ನಿರ್ದೇಶಕದ ಡಾ. ರಾಮಲಿಂಗಪ್ಪ ಅಂಟರತಾನಿ, ತಜ್ಞ ವೈದ್ಯರಾದ ಡಾ. ಈಶ್ವರ ಹಸಬಿ, ಡಾ. ಶೈಲೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿಮಕುಮಾರ್ ಮಾನಕರ, ಎಸ್ಡಿಎಂ ವೈದ್ಯರಾದ ಡಾ. ಕಿರಣ ಐತಾಳ, ಇತರರು ಇದ್ದರು.
EndFragment