ಜಿಲ್ಲೆ

ಧಾರವಾಡ ಜಿಲ್ಲೆಯಲ್ಲಿ 199 ಕರೊನಾ ಪ್ರಕರಣ

ಧಾರವಾಡ: ಕೆಲ ದಿನಗಳಿಂದ 250ಕ್ಕಿಂತ ಹೆಚ್ಚೇ ಬರುತ್ತಿದ್ದ ಕರೊನಾ ಪ್ರಕರಣ ಮಂಗಳವಾರ 199ಕ್ಕೆ ಇಳಿದಿದೆ. ಒಟ್ಟು ಪ್ರಕರಣಗಳ ಸಂಖ್ಯೆ 11512ಕ್ಕೆ ಏರಿದೆ. ಇದುವರೆಗೆ 8914 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2271 ಪ್ರಕರಣಗಳು ಸಕ್ರಿಯವಾಗಿವೆ. 74 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತ್ತೆ ಇಬ್ಬರು ಮೃತಪಟ್ಟಿದ್ದಾರೆ. ಇದುವರೆಗೆ ಸಾವಿಗೀಡಾದವರ ಸಂಖ್ಯೆ 327ಕ್ಕೆ ಏರಿಕೆಯಾಗಿದೆ. ಮಂಗಳವಾರದ ಪ್ರಯೋಗಾಲಯ ವರದಿಯಲ್ಲಿ ಧಾರವಾಡ ಶಹರ ಮತ್ತು ಗ್ರಾಮೀಣ ಸೇರಿ 33 ಕಡೆಗಳಲ್ಲಿ; ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ತಾಲೂಕು ಸೇರಿ 51 ಕಡೆಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.

ಅಳ್ನಾವರದ ನೆಹರು ನಗರ, ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ, ಗಂಜಿಗಟ್ಟಿ, ಮಿಶ್ರಿಕೋಟಿ, ಆಲದಕಟ್ಟಿ, ಬಮ್ಮಿಗಟ್ಟಿ; ನವಲಗುಂದ ತಾಲೂಕಿನ ನಾಗನೂರ ಗ್ರಾಮದ ಅಂಬೇಡ್ಕರ್ ಓಣಿ, ಬಸ್ ಸ್ಟ್ಯಾಂಡ್ ಓಣಿ, ಮುಸ್ಲಿಂ ಓಣಿ, ಹಳ್ಳಿಕೇರಿ ಪ್ಲಾಟ್, ತಿರ್ಲಾಪುರ, ತದನಾಳ, ಅಳಗವಾಡಿ ಪೊಲೀಸ್ ಹೆಡ್ ಕ್ವಾರ್ಟರ್ಸ್, ಗುಮ್ಮಗೋಳ, ಕುಂದಗೋಳ ತಾಲೂಕಿನ ರಾಣಿ ಚನ್ನಮ್ಮ ಶಾಲೆ, ಚಾಕಲಬ್ಬಿಯ ರೇಣುಕಾ ನಗರ ಬಸ್ ನಿಲ್ದಾಣದ ಹತ್ತಿರ, ಯರೇಬೂದಿಹಾಳ ಹಡಪದ ಓಣಿ, ತರ್ಲಘಟ್ಟ, ಹೊಸಹಳ್ಳಿ ಗ್ರಾಮದ ಹನುಮಂತ ಗುಡಿ ಹತ್ತಿರ, ಇಂಗಳಗಿ, ಅಣ್ಣಿಗೇರಿ ತಾಲೂಕಿನ ಕೊಂಡಿಕೊಪ್ಪ, ದೇಶಪಾಂಡೆ ಪ್ಲಾಟ್, ಹರಿಜನ ಕೇರಿ, ಕುರಬಗೇರಿ ಓಣಿ, ಸೈದಾಪುರದಲ್ಲಿ ಕರೊನಾ ಸೋಂಕಿತರು ಕಂಡುಬಂದಿದ್ದಾರೆ.

ಜಿಪಂ ಕಚೇರಿ ಸೀಲ್​ಡೌನ್
ಧಾರವಾಡ ಜಿಲ್ಲಾ ಪಂಚಾಯಿತಿ ಕಚೇರಿ ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತೆ ಜಿಪಂ ಕಚೇರಿ ಸೀಲ್ ಡೌನ್ ಮಾಡಲಾಗಿದೆ. ಕೆಲ ತಿಂಗಳ ಹಿಂದೆ ಸಹ ಕಚೇರಿ ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದ್ದರಿಂದ ಕಚೇರಿ ಬಂದ್ ಮಾಡಲಾಗಿತ್ತು. ಈಗ ಮತ್ತೆ ಐವರಿಗೆ ಸೋಂಕು ದೃಢಪಟ್ಟ ಕಾರಣಕ್ಕೆ ಕಚೇರಿಯನ್ನು 2 ದಿನದ ಮಟ್ಟಿಗೆ ಸೀಲ್​ಡೌನ್ ಮಾಡಲಾಗಿದೆ.