ಧಾರವಾಡ: ಜಿಲ್ಲೆಯಲ್ಲಿ ಬುಧವಾರ ಸಂಜೆಯಿಂದ ಗುರುವಾರ ಸಂಜೆವರೆಗೆ 187 ಕರೊನಾ ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಿಗಾ ವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, ಬುಧವಾರ 2993 ಇದ್ದದ್ದು ಗುರುವಾರ 3180ಕ್ಕೆ ಏರಿಕೆಯಾಗಿದೆ.
ಈವರೆಗೆ ಜಿಲ್ಲೆಯಲ್ಲಿ 2646 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 2246 ಜನರ ವರದಿ ನೆಗೆಟಿವ್ ಬಂದಿವೆ. 9 ಪ್ರಕರಣದಲ್ಲಿ ಪಾಸಿಟಿವ್ ಬಂದಿದ್ದು, ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗೆಯಾಗಿದ್ದಾರೆ. 7 ಜನರಿಗೆ ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 393 ವರದಿಗಳು ಬರಬೇಕಿದೆ.
ಕರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 3180 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 2386 ಜನರು ಮನೆಯಲ್ಲೇ 14 ದಿನ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಆಸ್ಪತ್ರೆಯ ಪ್ರತ್ಯೇಕ ವಾರ್ಡ್ಗಳಲ್ಲಿ 8 ಜನ ದಾಖಲಾಗಿದ್ದಾರೆ. 83 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 703 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಸೀಲ್ಡೌನ್ ವಾಸಿಗಳು ಹೊರಬರದಂತೆ ಕಟ್ಟೆಚ್ಚರ
ಹುಬ್ಬಳ್ಳಿ: ಕರೊನಾ ಸೋಂಕಿತ ವ್ಯಕ್ತಿಗಳು ಪತ್ತೆಯಾಗಿದ್ದ ಇಲ್ಲಿನ ಮುಲ್ಲಾ ಹಾಗೂ ಕರಾಡಿ ಓಣಿಯನ್ನು ಸೀಲ್ಡೌನ್ ಪ್ರದೇಶವೆಂದು ಗುರುತಿಸಿದ್ದು, ಇಲ್ಲಿ ನಿತ್ಯ ದಿನಸಿ ಪೂರೈಕೆ ಸರಾಗವಾಗಿ ನಡೆದಿದೆ. ಜಿಲ್ಲಾಡಳಿತದ ಕಣ್ಗಾವಲು ಮಧ್ಯೆ ಜನರ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ.
ವ್ಯಕ್ತಿಯೊಬ್ಬರನ್ನು ಮುಲ್ಲಾ ಓಣಿಯಲ್ಲಿ ಮೆರವಣಿಗೆ ಮಾಡಿದ್ದು ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇಂಥ ಘಟನೆ ಮರುಕಳಿಸದಂತೆ ಜಿಲ್ಲಾಡಳಿತವೂ ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಜನರು ಇಂಥ ಘಟನೆ ನೋಡಿ ವಿಚಲಿತರಾಗದಂತೆ ನೋಡಿಕೊಳ್ಳಲು ತೀರ್ವನಿಸಲಾಗಿದೆ.
ಈ ಎರಡು ಸೀಲ್ಡೌನ್ ಪ್ರದೇಶದಲ್ಲಿ ಒಟ್ಟು 9 ಜನರಿಗೆ ತರಕಾರಿ, ಹಣ್ಣು ಹಾಗೂ ದಿನಸಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಇವರಿಗೆ ಪಾಸ್ ನೀಡಿದ್ದು, ನಿತ್ಯ ಬೆಳಗ್ಗೆ 9ರಿಂದ ಅಲ್ಲಿಯೇ ಓಡಾಡುವ ದಿನಸಿ ವ್ಯಾಪಾರಿಗಳು ಮನೆಯಿಂದ ಒಬ್ಬೊಬ್ಬರಾಗಿಯೇ ಹೊರಬಂದವರಿಗೆ ದಿನಸಿ ವಿತರಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೊರಬಂದ ವ್ಯಕ್ತಿಗಳಿಗೆ ತಿಳಿ ಹೇಳುತ್ತಿದ್ದಾರೆ. ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆ ನೀಡಲೆಂದೇ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಕಾಯಂ ಆಗಿ ಇಡಲಾಗಿದೆ. ಪೊಲೀಸರ ಸರ್ಪಗಾವಲು ಮಧ್ಯೆ ಸೀಲ್ಡೌನ್ ಪ್ರದೇಶಗಳು ಜನರ ತೀವ್ರ ಚಟುವಟಿಕೆಯಿಂದ ದೂರ ಉಳಿದಿವೆ.
ನಿಟ್ಟುಸಿರು ಬಿಟ್ಟ ಜನತೆ
ಕುಂದಗೋಳ: ಲಾಕ್ಡೌನ್ ಸಡಿಲಿಕೆಯಿಂದ ಪಟ್ಟಣದಲ್ಲಿ ವಾರದಲ್ಲಿ ನಾಲ್ಕು ದಿನ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅನá-ಮತಿ ದೊರೆತಿದ್ದರಿಂದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಗುರುವಾರ ಸ್ವಲ್ಪ ನಿಟ್ಟುಸಿರು ಬಿಟ್ಟಂತಾಗಿದೆ. ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಹಾಗೂ ಶುಕ್ರವಾರ, ಶನಿವಾರ, ಭಾನá-ವಾರ ಬೆಳಗ್ಗೆ 6ರಿಂದ 10ರವರೆಗೆ ವ್ಯಾಪಾರ ವಹಿವಾಟಿಗೆ ಅನುವು ಮಾಡಿಕೊಡಲಾಗಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಮಾಸ್ಕ್ಗಳನ್ನು ಧರಿಸಿಕೊಂಡು ವ್ಯವಹಾರ ಮಾಡಬೇಕು ಎಂದು ಪೊಲೀಸ್ ಇಲಾಖೆಯವರು ತಿಳಿಸಿದ್ದಾರೆ.