ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ೪ ದಿನಗಳ ಕೃಷಿ ಮೇಳಕ್ಕೆ ಶನಿವಾರ ಚಾಲನೆ ದೊರೆಯಿತು. ಕೃಷಿ ಮೇಳದ ಮುಖ್ಯ ಆಕರ್ಷಣೆಯಾದ ಬೀಜ ಮೇಳದಲ್ಲಿ ಮೊದಲ ದಿನ ವಿವಿಧ ತಳಿಯ ೧೪.೩೫ ಲಕ್ಷ ಮೌಲ್ಯದ ಬೀಜ ಮಾರಾಟವಾದವು. ಬೀಜ ಘಟಕದಲ್ಲಿ ನಡೆಯುತ್ತಿರುವ ಬೀಜ ಮೇಳಕ್ಕೆ ಭೇಟಿ ನೀಡಿದ ರೈತರು ಹಿಂಗಾರು ಬೆಳೆಗಳ ೧೯೨ ಕ್ವಿಂಟಲ್ ಬೀಜಗಳನ್ನು ಖರೀದಿಸಿದರು.
ಕೃಷಿ ತಂತ್ರಜ್ಞಾನ ಸಲಹಾ ಕೇಂದ್ರಕ್ಕೆ ೫೪೭ ರೈತರು ಭೇಟಿ ನೀಡಿ ಕೃಷಿ ಸಂಬ0ದಿತ ಸಮಸ್ಯೆಗಳನ್ನು ವಿಜ್ಞಾನಿಗಳ ಜೊತೆಗೆ ಚರ್ಚಿಸಿ ಪರಿಹಾರ ಕಂಡುಕೊ0ಡರು. ರೈತರು, ವಿದ್ಯಾರ್ಥಿಗಳು, ರೈತ ಮಹಿಳೆಯರು, ವಿಸ್ತರಣಾ ಕಾರ್ಯಕರ್ತರು, ಇಲಾಖೆ ಅಽಕಾರಿಗಳು ಸೇರಿ ಸುಮಾರು ೭೪,೦೦೦ ಜನರಿಗೆ ವಿವಿಧ ಮಳಿಗೆಗಳ ಮಾಲೀಕರು ಕೃಷಿ ಪರಿಕರಗಳು ಹಾಗೂ ತಾಂತ್ರಿಕತೆಗಳನ್ನು ಪರಿಚಯಿಸಿದರು.
ಕೃಷಿ ಮೇಳದಲ್ಲಿ ಇಂದು: ೨ನೇ ದಿನವಾದ ಭಾನುವಾರ ಬೆಳಗ್ಗೆ ೧೧.೩೦ ಗಂಟೆಗೆ ಕೃಷಿ ಮೇಳ ವೇದಿಕೆಯಲ್ಲಿ ಕೃಷಿ ಮೇಳದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ನಂತರ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಹಾಗೂ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಸಮಾರಂಭ ಇದೆ. ವಿಶ್ವವಿದ್ಯಾಲಯದ ಮುಖ್ಯದ್ವಾರದ ಬಳಿ ಶ್ವಾನಗಳ ಪ್ರದರ್ಶನ ಮತ್ತು ಮಧ್ಯಾಹ್ನ ೨.೩೦ರಿಂದ ಕೃಷಿ ಮೇಳ ವೇದಿಕೆಯಲ್ಲಿ `ರೈತರ ಆದಾಯ ೦ದ್ವಿಗುಣಗೊಳಿಸುವಿಕೆ' ಕುರಿತು ವಿಚಾರಗೋಷ್ಠಿ ನಡೆಯಲಿದೆ.