ಜಿಲ್ಲೆ

ಧಾರವಾಡ ಕೀರ್ತಿ ಹೆಚ್ಚಿಸಿದ್ದು ಮನಸೂರ

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವರಸಾಮ್ರಾಟ ಡಾ. ಮಲ್ಲಿಕಾರ್ಜುನ ಮನಸೂರ ಅವರ 31ನೇ ಪುಣ್ಯಸ್ಮರಣೆಯು ನಗರದ ಆಕಾಶವಾಣಿ ಬಳಿಯ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆವರಣದಲ್ಲಿ ಮಂಗಳವಾರ ಜರುಗಿತು.
ಸಂಗೀತ ಕಲಾವಿದ ಪಂ. ಎಂ.ವೆಂಕಟೇಶ ಕುಮಾರ ಅವರು ಡಾ.ಮಲ್ಲಿಕಾರ್ಜುನ ಮನಸೂರ ಸಮಾಧಿಗೆ ಪುಷ್ಪ ಸಮರ್ಪಿಸಿ ಮಾತನಾಡಿ, ಡಾ.ಮಲ್ಲಿಕಾರ್ಜುನ ಮನಸೂರ ಘರಾಣಾ ಸಂಗೀತ ಮುಂದುವರಿಯಬೇಕು. ಅವರು ತಮ್ಮ ಸಂಗೀತ ಸಾಧನೆ ಮೂಲಕ ಧಾರವಾಡದ ಕೀರ್ತಿಯನ್ನು ದೆಹಲಿವರೆಗೆ ಮುಟ್ಟಿಸಿ, ರಾಷ್ಟ್ರೀಯ ಮಟ್ಟದಲ್ಲಿ ಧಾರವಾಡಕ್ಕೆ ಸಂಗೀತದ ಹೆಸರು ತಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಂಗೀತ ಕಲಾವಿದ ರಘುನಾಥ ನಾಕೋಡ, ವಿದುಷಿ ರೇಣುಕಾ ನಾಕೋಡ, ಡಾ. ಶಾಂತಾರಾಮ ಹೆಗಡೆ, ಡಾ. ಮೃತ್ಯುಂಜಯ ಅಗಡಿ, ಉಜಿರೆಯ ಡಾ.ಮಿಥುನ ಚಕ್ರವರ್ತಿ, ಅಕ್ಕಮಹಾದೇವಿ ಆಲೂರ, ಅಲ್ಲಮಪ್ರಭು ಕಡಕೋಳ, ಪರಶುರಾಮ ಕಟ್ಟಿಸಂಗಾವಿ, ನಿಜಗುಣ ರಾಜಗುರು, ವೀರಣ್ಣ ಪತ್ತಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಇತರರು ಇದ್ದರು.
ಬಳಿಕ ಉಜಿರೆಯ ಗಾಯಕ ಡಾ.ಮಿಥುನ ಚಕ್ರವರ್ತಿ ಹಾಗೂ ಅಕ್ಕಮಹಾದೇವಿ ಆಲೂರ, ಕರ್ನಾಟಕ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗಾಯನ ಪ್ರಸ್ತುತ ಪಡಿಸಿದರು.