ಜಿಲ್ಲೆ

ಧಾನ್ಯದಿಂದ ಒತ್ತಡ ನಿವಾರಣೆ

ಕಾರಟಗಿ: ಒತ್ತಡ ರಹಿತ ಜೀವನಕ್ಕೆ ಹಾಗೂ ಆರೋಗ್ಯವಾಗಿರಲು ಧ್ಯಾನ ಸಹಕಾರಿ ಎಂದು ಪುರಸಭೆ ಸದಸ್ಯೆ ಅರುಣಾದೇವಿ ಹೇಳಿದರು.

ಪಟ್ಟಣದ 23ನೇ ವಾರ್ಡ್ ದೇವಿ ಕ್ಯಾಂಪಿನ ಶ್ರೀದೇವಿ ಮಂದಿರದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆಂತರಿಕ ಶಕ್ತಿ ಮತ್ತು ಭಾವನೆಗಳನ್ನು ಸಮತೋಲನದಲ್ಲಿರಲು ಧ್ಯಾನ ಸಾಮರ್ಥ್ಯ ನೀಡಲಿದೆ. ಜತೆಗೆ ಖಿನ್ನತೆ ಮತ್ತು ಆತಂಕದಿಂದ ಎದುರಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ ಎಂದರು.

ಹೆಜ್ಜೆ ಸಂಘಟನೆ ಅಧ್ಯಕ್ಷೆ ಡಾ.ಶಿಲ್ಪಾ ದಿವಟರ್ ಮಾತನಾಡಿ, ಪೌರ ಕಾರ್ಮಿಕರ ಶ್ರಮಜೀವಿಗಳು. ಮಹಿಳೆ ನಾಲ್ಕು ಗೋಡೆಯೊಳಗೆ ಸೀಮಿತವಾಗಿರದೆ ಆರ್ಥಿಕ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇರಿ ಇತರ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾಳೆ ಎಂದರು.

ಪ್ರಮುಖರಾದ ಯರಡೋಣಾ, ಸುಮಿತ್ರಾ, ರಾಜಲಕ್ಷ್ಮೀ, ಮಾರುತಿ ಇಳಿಗೇರ್, ರಮೇಶ್, ಎಚ್.ಜಿ.ಶೇಖರ್, ಕೆ.ಹನುಮಂತ ಪೂಜಾರಿ, ಹೊನ್ನೂರಪ್ಪ, ಬಸವರಾಜ ಸಿಂಗಪುರ್ ಸೇರಿ ಇತರರಿದ್ದರು.