ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನಮಠದಲ್ಲಿ ಆಚಾರ್ಯ ಮುನಿಶ್ರೀ ಶಾಂತಿಸಾಗರ ಮಹಾರಾಜರ ಭಾವಚಿತ್ರಕ್ಕೆ ಡಾ. ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ನಮನ ಸಲ್ಲಿಸಿದರು. 
ಜಿಲ್ಲೆ

ಧರ್ಮಾಚರಣೆಯಿಂದ ಸಂಕಷ್ಟಗಳಿಗೆ ಪರಿಹಾರ

ರಿಪ್ಪನ್‌ಪೇಟೆ: ಜೈನಧರ್ಮದ ಮೂಲ ಸಿದ್ಧಾಂತಗಳ ಅನುಷ್ಠಾನಗಳ ಪ್ರತಿಪಾದಕರಾಗಿ ಚಾರಿತ್ರ ಚಕ್ರವರ್ತಿ ಆಚಾರ್ಯ ಶ್ರೀ ಶಾಂತಿಸಾಗರ ಮುನಿಶ್ರೀಯವರಾಗಿದ್ದರು. ಧರ್ಮ ಪ್ರಸಾರದ ಅಗ್ರಪಂಕ್ತಿಯಲ್ಲಿನ ದಿಗಂಬರ ಮುನಿ ಆಚಾರ್ಯರ ಐತಿಹ್ಯದ ಕುರಿತ ಅವರ ಪ್ರತಿಪಾದನೆಯು ಅನುಕರಣೀಯವಾದುದು ಎಂದು ಹೊಂಬುಜ ಜೈನ ಮಠದ

ಡಾ. ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಹೊಂಬುಜದಲ್ಲಿ ಸೋಮವಾರ ಆಚಾರ್ಯ ಮುನಿ ಶಾಂತಿಸಾಗರ ಮಹಾರಾಜರ ಪದಾರೋಹಣದ ಶತಮಾನೋತ್ಸವ ಸಂಸ್ಮರಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಜೈನಾಚಾರವು ವಿಶ್ವದ ಸರ್ವ ಸಂಕಷ್ಟಗಳಿಗೆ ಪರಿಹಾರ ನೀಡುವ ಸೂತ್ರವನ್ನು ಪ್ರತಿಪಾದಿಸುತ್ತದೆ ಎಂದರು. ಆಚಾರ್ಯ ಮುನಿಶ್ರೀ ಶಾಂತಿಸಾಗರ ಮಹಾರಾಜರ ಭಾವಚಿತ್ರಕ್ಕೆ ಶ್ರೀಗಳವರು, ಭಕ್ತರು, ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದರು.