ಜಿಲ್ಲೆ

"ಧರ್ಮಸ್ಥಳ' ಸತ್ಯಾಸತ್ಯತೆ ಹೊರಬರಲಿ

ಬೆಳಗಾವಿ: ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಟ್ಟ ಪರಿಸರದಲ್ಲಿ ನೂರಾರು ಶವ ಹೂತಿರುವುದಾಗಿ ಅನಾಮಿಕ ವ್ಯಕ್ತಿಯ ದೂರಿನ ಮೇಲೆ ಎಸ್​ಐಟಿ ಅಧಿಕಾರಿಗಳ ತಂಡದ ತನಿಖೆ ಹೆಸರಿನಲ್ಲಿ ಧರ್ಮ ಪೀಠಕ್ಕೆ ಅಪಪ್ರಚಾರ ಆಗಬಾರದು. ಪ್ರಕರಣದ ಸತ್ಯಾಸತ್ಯತೆ ಹೊರಬೇಕು ಎಂದು ಸಂಸದ ಜಗದೀಶ ಶೆಟ್ಟರ್​ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಾಮಿಕ ವ್ಯಕ್ತಿಯ ದೂರಿನ ಆಧಾರದ ಮೇಲೆ ತನಿಖಾ ತಂಡ ಅಸ್ಥಿಪಂಜರ ಹೊರ ತೆಗೆಯುತ್ತಿದ್ದಾರೆ. ಮೃತರು ಯಾರು? ಹೇಗೆ ಮೃತಪಟ್ಟರು ಎಂಬುವುದು ಜನರಿಗೆ ಗೊತ್ತಾಗಬೇಕು. ತನಿಖೆ ನಿಷ್ಪಕ್ಷಪಾತವಾಗಿರಬೇಕು. ಪತ್ತೆಯಾಗಿರುವ ಅಸ್ಥಿಪಂಜರಗಳ ಡಿಎನ್​ಎ ಪರೀಕ್ಷೆ ಕೂಡ ಆಗಬೇಕು ಎಂದರು.

ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರಬೇಡಿ

ಮಹದಾಯಿ, ಕಳಸಾ&ಬಂಡೂರಿ ಯೋಜನೆ ಅನುಷ್ಠಾನಕ್ಕೆ ಅನುಮತಿ ಕೊಡುವುದಿಲ್ಲ ಎಂದು ಕೇಂದ್ರ ಸಚಿವರು ಹೇಳಿಕೆ ನೀಡಿಲ್ಲ. ಸದನದಲ್ಲಿಯೂ ಈ ವಿಷಯ ಕುರಿತು ಚರ್ಚೆ ಮಾಡಿಲ್ಲ. ಆದರೆ, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರ ಹೇಳಿಕೆಗಳನ್ನು ನಾವೆಲ್ಲ ಖಂಡಿಸುತ್ತೇವೆ. ನಿಮ್ಮ ಹಕ್ಕು ನೀವು ಕೇಂದ್ರದ ಬಳಿ ಹೇಳಿಕೊಳ್ಳಿ. ಬಹಿರಂಗವಾಗಿ ಹೇಳಿಕೆ ನೀಡಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಬೇಡಿ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರದ ವಿರೋಧವಿಲ್ಲ ಮಹದಾಯಿ, ಕಳಸಾ&ಬಂಡೂರಿ ಯೋಜನೆ ಅನುಷ್ಠಾನ ವಿಷಯದಲ್ಲಿ ನಾವು ಆಂತರಿಕವಾಗಿ ಎಲ್ಲೆಲ್ಲಿ ಒತ್ತಡ ತರಬೇಕು ತಂದಿದ್ದೇವೆ. ಶ್ರೀವೇ ಕೇಂದ್ರ ಸರ್ಕಾರ ಒಳ್ಳೆಯ ನಿರ್ಧಾರ ಪ್ರಕಟಿಸಲಿದೆ. ಕುಡಿಯುವ ನೀರಿಗಾಗಿ ಕಳಸಾ&ಬಂಡೂರಿ ಯೋಜನೆ ಜಾರಿಯಾಗುವುದು ಖಚಿತ. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಕಾಮಗಾರಿಗೆ ಕೇಂದ್ರ ಸರ್ಕಾರ ವಿರೋಧ ಮಾಡಿಲ್ಲ ಎಂದರು..

ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನ ನಿಭಾಯಿಸುವಲ್ಲಿ ಕಾಂಗ್ರೆಸ್​ ಸಂಪೂರ್ಣ ವಿಫಲವಾಗಿದೆ. ಪಾಕಿಸ್ತಾನದ ಪರವಾಗಿ ರಾಹುಲ ಗಾಂಧಿ ಹೇಳಿಕೆ ಕೊಡುತ್ತಿದ್ದಾರೆ. ರಾಷ್ಟ್ರೀಯತೆ ವಿಚಾರದಲ್ಲಿ ಕಾಂಗ್ರೆಸ್​ ತಪ್ಪು ದಾರಿ ತುಳಿಯುತ್ತಿದ್ದು, ತಕ್ಕ ಪಾಠ ಕಲಿಯಲಿದೆ. ಜಗದೀಶ ಶೆಟ್ಟರ್​, ಸಂಸದ