ಧುಳಗನವಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಡಿವೈಎಸ್‌ಪಿ ಸತೀಶ ಚಿಕ್ಕೋಡೆ ಚಾಲನೆ ನೀಡಿದರು. ವೈಶಾಲಿ ಕಮತೆ, ಸುರೇಶ ಬಡಿಗೇರ, ಮಲ್ಲಮ್ಮ ಎ.ಇತರರಿದ್ದರು. 
ಜಿಲ್ಲೆ

ಧರ್ಮಸ್ಥಳ ಸಂಸ್ಥೆಯಿಂದ ಸಮಾಜಮುಖಿ ಕೆಲಸ

ರಾಘವೇಂದ್ರಗೌಡ ಭೀ ಪಾಟೀಲ್

ಚಿಕ್ಕೋಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ಮಹಿಳೆಯರಿಗೆ ಸಾಲ ನೀಡಿ ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ಪಿರಿಯಾಪಟ್ಟಣ ಡಿವೈಎಸ್‌ಪಿ ಸತೀಶ ಚಿಕ್ಕೋಡೆ ಹೇಳಿದರು. ತಾಲೂಕಿನ ಖಟಕಲಾಟ ವಲಯದ ಧುಳಗಣವಾಡಿಯ ಬ್ರಹ್ಮದೇವ ಜ್ಞಾನ ವಿಕಾಸ ಕೇಂದ್ರದಲ್ಲಿ ಸೃಜನಶೀಲ ಕಾರ್ಯಕ್ರಮದಡಿ ಶನಿವಾರ ಹಮ್ಮಿಕೊಂಡಿದ್ದ ಹಸಿ ಕಸ-ಒಣ ಕಸ ವಿಂಗಡಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಗ್ರಾಮೀಣ ಪ್ರದೇಶದಲ್ಲಿ ಸಮಾಜೋಪಯೋಗಿ ಕೆಲಸ ಮಾಡುತ್ತಿದೆ ಎಂದರು. ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಜರುಗಿತು. ಗ್ರಾಪಂ ಸದಸ್ಯೆ ವೈಶಾಲಿ ಕಮತೆ, ಶಿವಾನಂದ ದೇಸಾಯಿ, ಗ್ರಂಥಾಪಾಲಕ ಸುರೇಶ ಬಡಿಗೇರ, ಮಲ್ಲಮ್ಮ ಎ. ಇತರರಿದ್ದರು.