ಜಿಲ್ಲೆ

ಧರ್ಮಸ್ಥಳ ಸಂಸ್ಥೆಯಿಂದ ವರಮಹಾಲಕ್ಷ್ಮೀ ಪೂಜೆ

ಯಾದಗಿರಿ: ಮಹಿಳಾ ಸಬಲೀಕರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ತಿಳಿಸಿದರು.


ಸೈದಾಪುರ ಪಟ್ಟಣದ ಕನಕ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾಮರ್ಿಕ ಸಭೆಗೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರು ಸಾಮಾಜಿಕ, ಆಥರ್ಿಕ, ಶೈಕ್ಷಣಿಕವಾಗಿ ಪ್ರಗತಿ ಸಾಸಿದಾಗ ಮಾತ್ರ ಸಬಲೆ ಎನ್ನಲು ಸಾಧ್ಯ ಎಂದರು.

ಶ್ರೀ ಸೋಮೇಶ್ವರನಂದಾ ಸ್ವಾಮಿಗಳು, ಗ್ರಾಪಂ ಅಧ್ಯಕ್ಷೆ ಮರೆಮ್ಮ ರೆಡ್ಡೆಪ್ಪ, ಜಿಪಂ ಮಾಜಿ ಸದಸ್ಯೆ ಶಶಿಕಲಾ ಭೀಮನಗೌಡ ಕ್ಯಾತ್ನಾಳ, ಅಮರೇಶ್ ಗೌಡ, ಸಂಸ್ಥೆ ತಾಲೂಕು ಯೋಜನಾಕಾರಿ ಮಂಜುನಾಥ, ಜ್ಞಾನವಿಕಾಸ ಸಮನ್ವಯ ಅಕಾರಿ ದ್ರಾಕ್ಷಾಯಿಣಿ, ಶರಣು ನಾಚಾವಾರ್ ಇದ್ದರು.