ಹುಮನಾಬಾದ್ ತಾಲೂಕಿನ ಮಾಣಿಕನಗರದ ಶಿವಚಂದ್ರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ಮಾಜಿ ಶಾಸಕ ಸುಭಾಷ ಕಲ್ಲೂರ ಉದ್ಘಾಟಿಸಿದರು.ಪ್ರವೀಣಕುಮಾರ, ಶಿವಕುಮಾರ, ವೀರೇಶ, ಶರಣಪ್ಪ ಇತರರಿದ್ದರು. 
ಜಿಲ್ಲೆ

ಧರ್ಮಸ್ಥಳ ಸಂಸ್ಥೆ ಕಾರ್ಯ ಶ್ಲಾಘನೀಯ

ಹುಮನಾಬಾದ್: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಳೆದ ೮ ವರ್ಷಗಳಿಂದ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ಸರ್ಕಾರ ಮಾಡುವ ಕೆಲಸ ಸಂಸ್ಥೆಯಿಂದ ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮಾಜಿ ಶಾಸಕ ಸುಭಾಷ ಕಲ್ಲೂರ ಹೇಳಿದರು.

ಮಾಣಿಕನಗರದ ಶಿವಚಂದ್ರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇವರ ಯಾವುದೇ ಕಾರ್ಯಕ್ರಮ ಬಹಳಷ್ಟು ಶಿಸ್ತುಬದ್ದವಾಗಿ ನಡೆಯುತ್ತವೆ. ಮುಖ್ಯವಾಗಿ ಮಹಿಳೆಯರು ಸ್ವಾಲಂಬನೆ ಜೀವನ ನಡೆಸಲು ಧೈರ್ಯ ನೀಡಿದೆ. ಮನೆಯಲ್ಲಿ ದುಡಿಯುವ ಪುರುಷ ಇರಬೇಕು, ಮಾತು ಕೇಳುವ ಮಕ್ಕಳಿರಬೇಕು, ಆರ್ಥಿಕ ಶಿಸ್ತು ತಿಳಿದಿರುವ ಗೃಹಿಣಿ ಮನೆಯಲ್ಲಿ ಇದ್ದರೆ ಯಾವುದೇ ಸಾಧನೆ ಮಾಡಬಹುದು. ಡಾ.ವೀರೇಂದ್ರ ಹೆಗ್ಗಡೆಯವರ ನೇತೃತ್ವದ ಈ ಯೋಜನೆಯು ಕಲ್ಪವೃಕ್ಷದಂತೆ ಸಾವಿರಾರು ಜನರಿಗೆ ಆಶ್ರಯ ನೀಡುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾಲಂಬಿಯಾಗಿ ಬದುಕು ಕಟ್ಟಿದ್ದಾರೆ ಎಂದರು.

ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾಗುವ ಪ್ರಗತಿನಿಧಿಗೆ ಶೇ. ೧೪ರಷ್ಟು ಬಡ್ಡಿ ವಿತರಿಸಲಾಗುವ ಕುರಿತು ಮಾಹಿತಿ ನೀಡಿದರು.

ಪಂಜಾಬ್ ನ್ಯಾಷನಲ್ ಬ್ಯಾಂಕ್ ವ್ಯವಸ್ಥಾಪಕ ಶಿವಕುಮಾರ, ಯೋಜನಾಧಿಕಾರಿ ವೀರೇಶ ಮಾತನಾಡಿದರು. ಹಣಕಾಸು ಪ್ರಬಂಧಕ ಶರಣಪ್ಪ. ತಾಲೂಕು ಅಧಿಕಾರಿಗಳಾದ ರಘುನಾಥ ರೆಡ್ಡಿ, ಮಲ್ಲಯ್ಯ,ಆನಂದ, ನಗ್ಮಾ, ಸಹಾಯಕ ಗಣೇಶ ಇತರರಿದ್ದರು.