ಹಾರೂಗೇರಿ: ಧರ್ಮಸ್ಥಳದ ಧರ್ಮಾಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಧರ್ಮಸ್ಥಳ ಸಂಘ ಅನೇಕ ಜನಪರ ಯೋಜನೆ ರೂಪಿಸಿ ಸಮರ್ಥವಾಗಿ ಅನುಷ್ಠಾನಗೊಳಿಸಿ ರಾಜ್ಯದ ಜನರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಧರ್ಮಸ್ಥಳ ಸಂಘದ ಅಥಣಿ ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಹೇಳಿದರು.
ಪಟ್ಟಣದ ಸ್ವಾಮಿ ಅಯ್ಯಪ್ಪ ದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಚೆಕ್ ಹಾರೂಗೇರಿ ಯೋಜನಾಕಾರಿ ಕಿರಣ ಎಸ್. ಜತೆಗೂಡಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಸಹದೇವ ಲಾಳಿ ಅವರಿಗೆ 1.50 ಲಕ್ಷ ರೂ. ಮೊತ್ತದ ವಿತರಿಸಿ ಮಾತನಾಡಿದರು.
ವಿಕ್ರಮ ಪತ್ತಾರ, ಸಿದ್ದು ಠಕ್ಕಣ್ಣವರ, ರಾಜು ಹೆಗ್ಗೋಡ, ರವಿ ಗುರುಸ್ವಾಮಿ, ಮಾರುತಿ ಮಾಳ್ಗೆನ್ನವರ, ತುಕಾರಾಮ ದುಮಾಳೆ, ಸತ್ಯಪ್ಪ ಆಸಂಗಿ, ಶೋಭಾ ಪಾಟೀಲ, ರೇಶ್ಮಾ ಕಾಂಬಳೆ ಇತರರಿದ್ದರು.