ಧರ್ಮಸ್ಥಳ ಸಂಸ್ಥೆಯ ಒಕ್ಕೂಟ ಸಭೆಯಲ್ಲಿ ಶನಿವಾರಸಂತೆ ಗ್ರಾಪಂ ನೂತನ ಅಧ್ಯಕ್ಷೆ ಫರ್ಜಾನ್ ಬಾನು ಅವರನ್ನು ಸನ್ಮಾನಿಸಿರುವುದು. ಒಕ್ಕೂಟದ ಅಧ್ಯಕ್ಷೆ ಭಾಗ್ಯ, ಉಪಾಧ್ಯಕ್ಷೆ ಜ್ಯೋತಿ, ದಿವ್ಯಾ, ಶೋಭಾವತಿ ಇದ್ದರು. 
ಜಿಲ್ಲೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಒಕ್ಕೂಟ ಸಭೆ

ಶನಿವಾರಸಂತೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳುಗಳಲೆ ಒಕ್ಕೂಟ ಸಭೆ ಅಧ್ಯಕ್ಷೆ ಎಸ್.ಪಿ.ಭಾಗ್ಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಶನಿವಾರಸಂತೆ ವಲಯ ಮೇಲ್ವಿಚಾರಕ ನಾಗರಾಜ್ ಮಾತನಾಡಿ, ಶನಿವಾರಸಂತೆಯಲ್ಲಿ ಸಂಸ್ಥೆಯ ವಲಯ ಆರಂಭವಾಗಿದ್ದು, ಸದಸ್ಯರು ಸೌಲಭ್ಯ ಪಡೆದುಕೊಳ್ಳಲು ಅನುಕೂಲವಾಗಿದೆ. ಸಂಘದ ಪ್ರತಿ ಸದಸ್ಯರು ಆರೋಗ್ಯ ಹಿತದೃಷ್ಟಿಯಿಂದ ಸರ್ಕಾರದ ಯೋಜನೆಯ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಬೇಕು, ಪ್ರಧಾನಮಂತ್ರಿ ದಿಶಾ ಯೋಜನೆಯ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.

ಸಂಘದ ಸದಸ್ಯೆ ಹಾಗೂ ಶನಿವಾರಸಂತೆ ಗ್ರಾಪಂ ನೂತನ ಅಧ್ಯಕ್ಷೆ ಫರ್ಜಾನ್ ಬಾನು ಅವರನ್ನು ಒಕ್ಕೂಟ ವತಿಯಿಂದ ಸನ್ಮಾನಿಸಲಾಯಿತು. ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷೆ ಜ್ಯೋತಿ, ಒಕ್ಕೂಟ ಕಾರ್ಯದರ್ಶಿ ಎಸ್.ಪಿ.ದಿವ್ಯಾ, ಎಸ್.ಆರ್.ಶೋಭಾವತಿ ಇದ್ದರು.