ಬಾಗಲಕೋಟೆ: ಧರ್ಮವನ್ನು ನಾವು ಆಚರಿಸುವುದರೊಂದಿಗೆ ನಮ್ಮವರನ್ನೂ ಧರ್ಮದ ಮಾರ್ಗದಲ್ಲಿ ಸಾಗುವಂತೆ ಪ್ರೇರೇಪಿಸುವ ಮಹತ್ವದ ಕಾರ್ಯವನ್ನು ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಉತ್ತರಾದಿಮಠಾಧೀಶರಾದ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು.
ರವಿವಾರ ನವನಗರದ ಕಿಲ್ಲಾ ವೆಂಕಟೇಶ ದೇವಸ್ಥಾನದಿಂದ ಜರುಗಿದ ಶ್ರೀರಾಮದೇವರ ಯಾತ್ರೆಯಲ್ಲಿ ಪಾಲ್ಗೊಂಡ ನಂತರ ಉತ್ತರಾದಿಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಧರ್ಮವನ್ನು ನಾವು ಪಾಲಿಸುವದರೊಂದಿಗೆ ನಮ್ಮಿಂದ ಜ್ಞಾನ ಪಡೆಯುವವರು, ಬಂಧುಗಳು, ಇಷ್ಟದ ಮಿತ್ರರಿಗೂ ತಿಳಿಸಿ ಅವರೂ ಅನುಸರಿಸುವಂತೆ ಮಾಡಬೇಕು. ಭಗವಂತ ಸೇವೆ ಹೇಗೆ ಮಾಡಬೇಕೆಂಬುದಕ್ಕೆ ವಾಯುದೇವರು ಪ್ರೇರಣೆಯಾಗಿದ್ದಾರೆ. ಅಂಥ ಪ್ರೇರಣೆಯೊಂದಿಗೆ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ನಮ್ಮ ಹಿರಿಯರು ಅನುಸರಿಸಿಕೊಂಡು ಬಂದ ಆಚರಣೆಗಳನ್ನು ಜ್ಞಾನಪೂರ್ವಕವಾಗಿ ಅರ್ಥೈಸಿಕೊಳ್ಳುವ ಕೆಲಸ ಮಾಡಬೇಕು. ಸಂಧ್ಯಾವAದನೆ, ಪೂಜಾದಿ ಕಾರ್ಯಗಳನ್ನು ಮಾಡುವಾಗ ಅವುಗಳ ಮಹತ್ವ ಅರಿಯಬೇಕು. ಶ್ರೀಮದ್ ಆನಂದತೀರ್ಥ ಭಗವತ್ಪಾದಾಚಾರರು ದಿವ್ಯ, ಭವ್ಯವಾದ ಸಿದ್ಧಾಂತಗಳ ಸಾಗರವನ್ನು ವಿವರಿಸಿದ್ದಾರೆ ಅದರಲ್ಲಿ ಮಣಿಗಳು, ಪ್ರಮೇಯಗಳಿವೆ. ಶ್ರೀರಾಘವೇಂದ್ರ ಸ್ವಾಮಿಗಳು ಪ್ರಾಂತಸAಕಲ್ಪ ಗದ್ಯದಲ್ಲಿ ಅನೇಕ ಪ್ರಮೇಯಗಳನ್ನು ಸಂಗ್ರಹಿಸಿ ತಿಳಿಸುವ ಕೆಲಸವನ್ನು ಮಾಡಿದ್ದಾರೆ. ಮಧ್ವಾಚಾರ್ಯರು ಪ್ರಣವಗಳ ಮಹಿಮೆ ಸಾರಿದ್ದಾರೆ. ನಮ್ಮ ಆಚರಣೆ, ಧರ್ಮವನ್ನು ಜ್ಞಾನಪೂರ್ವಕವಾಗಿ ಅರ್ಥೈಸಿಕೊಳ್ಳುವ ಕೆಲಸವಾಗಬೇಕೆಂದರು.
ಉತ್ತರಾದಿಮಠದ ಪರಂಪರೆಯಲ್ಲಿ ಬಂದ ಶ್ರೀಸತ್ಯಾಭಿನವತೀರ್ಥರು ಶ್ರೀಮಠಕ್ಕೆ ಭೇಟಿ ನೀಡಿ ದರ್ಶನ ಪಡೆಯುವುದರಿಂದ ತೀರ್ಥಯಾತ್ರೆ ಮಾಡಿದಷ್ಟು ಫಲ ಸಿಗುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದರು. ಪ್ರಸನ್ನ ವೆಂಕಟದಾಸರ ಜೀವತಾವಧಿಯಲ್ಲಿದ್ದ ಸತ್ಯಾಭಿನವರ ಬಗ್ಗೆ ದಾಸರು ವಿಶೇಷ ಪ್ರೀತಿಯನ್ನು ತೋರಿದ್ದರು. ಬಾಗಲಕೋಟೆಯಲ್ಲಿ ಸಮಾಜದ ಯುವಕರೇ ಮುತ್ತುವರ್ಜಿ ವಹಿಸಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಪಂ. ರಘೋತ್ತಮಾಚಾರ್ಯ ನಾಗಸಂಪಿಗೆ, ಪಂ.ಭೀಮಸೇನಾಚಾರ್ಯ ಪಾಂಡುರAಗಿ ಅವರು ಮಾತನಾಡಿ, ಶ್ರೀಗಳು ಐದು ದಿನಗಳ ಕಾಲ ಬಾಗಲಕೋಟೆಯಲ್ಲಿ ಕಾರ್ಯಕ್ರಮ ಕೈಗೊಂಡಿದ್ದು, ಭಕ್ತರ ಮನಸ್ಸು ತುಂಬಿ ಬಂದಿದೆ. ಈ ಕಾರ್ಯಕ್ರಮದಿಂದಾಗಿ ಧರ್ಮಕಾರ್ಯವನ್ನು ಕೈಗೊಳ್ಳಲು ಮತ್ತಷ್ಟು ಪ್ರೇರೇಪಣೆ ಸಿಕ್ಕಂತಾಗಲಿದೆ ಎಂದರು. ಪಂ. ಬಿಂದುಮಾಧವಾಚಾರ್ಯ ನಾಗಸಂಪಿಗೆ ಮತ್ತಿತರರು ಇದ್ದರು.