ಚಿಕ್ಕಮಗಳೂರು ಅಂಬೇಡ್ಕರ್ ಭವನದಲ್ಲಿ ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಮಿತಿಯ ಸರ್ವ ಸದಸ್ಯರ ಮಹಾಸಭೆಯನ್ನುz್ದÉÃಶಿಸಿ ಡಿಎಸ್‌ಎಸ್ ಪ್ರಧಾನ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿದರು. ಬಿ.ಬಿ.ನಿಂಗಯ್ಯ, ಎಂ.ಪಿ.ಕುಮಾರಸ್ವಾಮಿ, ಮಲ್ಲೇಶ ಅಂಬುಗ, ರಮೇಶ್ ಡಾಕುಳಿಕಿ, ಸಿದ್ದರಾಜು ದೊಡ್ಡಿನವಾಡಿ, ಕಾರಹಳ್ಳಿ ಶ್ರೀನಿವಾಸ್ ಮತ್ತಿತರರಿದ್ದರು. 
ಜಿಲ್ಲೆ

ಧರ್ಮದ ದುಳ್ಳುರಿ ಬಗ್ಗೆ ಎಚ್ಚರಿಕೆಯಿಂದಿರಬೇಕು

ಚಿಕ್ಕಮಗಳೂರು: ಅಸಮಾನತೆ, ತಾರತಮ್ಯವನ್ನು ಮರೆಮಾಚಲು ಹಿಂದೂ ಕೋಮುವಾದಿಗಳು ನಾಡಿನಲ್ಲಿ ಧರ್ಮದ ದಳ್ಳುರಿಯನ್ನು ಹಬ್ಬಿಸುತ್ತಿದ್ದು, ಶೋಷಿತ ಸಮುದಾಯ ಎಚ್ಚರಿಕೆ ವಹಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ) ಪ್ರಧಾನ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಕಿವಿಮಾತು ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಮಿತಿಯ ಸರ್ವ ಸದಸ್ಯರ ಮಹಾಸಭೆ ಮತ್ತು ಮಾಜಿ ಸಚಿವ ಬಸವಲಿಂಗಪ್ಪನವರ ಕುರಿತ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ಭಯ ಹುಟ್ಟುಹಾಕಲಾ ಗುತ್ತಿದೆ. ಈ ಕುರಿತು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.

ಬಸವಲಿಂಗಪ್ಪ ಅವರು ವ್ಯವಸ್ಥೆಯ ವಿರುದ್ಧ ವೈಚಾರಿಕತೆಯ ಬೆಂಕಿಯನ್ನೇ ಉಗುಳುತ್ತಿದ್ದರು. ಯಥಾಸ್ಥಿತಿವಾದಿಗಳು ಅದನ್ನು ಒಪ್ಪುತ್ತಿರಲಿಲ್ಲ. ನಮ್ಮನ್ನಾಳುವ ಸರ್ಕಾರಗಳು ಸಂವಿಧಾನಕ್ಕೆ ವಿರುದ್ಧವಾದ ತೀರ್ಮಾನಗಳನ್ನು ಕೈಗೊಳ್ಳುತ್ತಿವೆ.ದೇಶದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸಂಪತ್ತು ಕೆಲವೇ ಕುಟುಂಬದ ಕೈಸೇರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಚಳವಳಿಗಳ ಮುಖಂಡರು ಮತ್ತು ಕಾರ್ಯಕರ್ತರುಗಳು ವೈಚಾರಿಕ ಪ್ರಖರತೆಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ದೂರಗಾಮಿ ನೀತಿಯನ್ನು ಅರಿಯಬೇಕಾಗಿದೆ. ಇಲ್ಲವಾದಲ್ಲಿ ಚಳವಳಿಗಳು ಹಿನ್ನಡೆ ಅನುಭವಿಸಬೇಕಾಗುತ್ತದೆ. ಹೋರಾಟಗಾರರು, ಸಾಹಿತಿಗಳನ್ನು ದೇಶದ್ರೋಹದ ಹೆಸರಿನಲ್ಲಿ ಜೈಲಿನಲ್ಲಿ ಕೊಳೆಯುವಂತೆ ಮಾಡಲಾಗುತ್ತಿದೆ. ಪ್ರಶ್ನೆಮಾಡುವುದೇ ಅಪರಾಧವಾಗುತ್ತಿದೆ ಎಂದು ಹೇಳಿದರು.

ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ದಲಿತ ಚಳವಳಿಗಳು ರಾಜ್ಯದಲ್ಲಿ ಶೋಷಿತರ ದ್ವನಿಯಾಗಿ ಕೆಲಸಮಾಡಿವೆ. ಸರ್ಕಾರವನ್ನು ತುದಿಬೆರಳಿನಲ್ಲಿ ನಿಲ್ಲಿಸುವ ಶಕ್ತಿಯನ್ನು ಪಡೆದುಕೊಂಡಿದ್ದವು. ದಲಿತಸಂಘಟನೆಗಳೆಲ್ಲ ಒಗ್ಗೂಡಿ ಮರುಹುಟ್ಟುಪಡೆದುಕೊಂಡು ಹಿಂದಿನ ಶಕ್ತಿಯನ್ನು ಪಡೆದುಕೊಳ್ಳಬೇಕಾಗಿದೆ. ಈ ಕುರಿತು ಐಕ್ಯತಾ ಸಮಿತಿ ರಚನೆಯಾಗಿದ್ದು, ಸಂಘಟನೆಗಳ ಮುಖಂಡರೆಲ್ಲ ಒಗ್ಗೂಡಬೇಕಾಗಿದೆ ಎಂದು ಕರೆ ನೀಡಿದರು.

ಸಂಘಟನೆ ಮುಖಂಡರೆಲ್ಲ ಪುನರಾವಲೋಕನಮಾಡಿಕೊಳ್ಳಬೇಕಿದೆ. ಕಳೆದಹೋಗಿರುವ ಜಾಗದಲ್ಲೇ ಹುಡುಕಾಟ ನಡೆಸಬೇಕಾಗಿದೆ. ಎಲ್ಲಾ ಮುಖಂಡರನ್ನು ಒಟ್ಟಿಗೆ ನೋಡುವ ದಿನ ಮುಂದಿನ ದಿನಗಳಲ್ಲಿ ಬರಲಿ ಎಂದು ಆಶಿಸಿದರು.

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ,ಸ್ವಾರ್ಥಕ್ಕಾಗಿ ದಲಿತ ಸಂಘಟನೆಗಳು ಒಡೆದುಹೋಗಿವೆ. ಜನಪ್ರತಿನಿಧಿಗಳಾಗಲಿ, ಸಚಿವರಾಗಲಿ, ಅಧಿಕಾರಿಗಳಾಗಲಿ ತಮ್ಮ ಸುಖದ ಬಗ್ಗೆ ಚಿಂತಿಸುತ್ತಾರೆಯೇ ಹೊರತು ಶೋಷಿತರ ಪರವಾಗಿ ಒಂದು ಗಂಟೆಯೂ ಚಿಂತಿಸುವುದಿಲ್ಲ. ದಲಿತ ಸಂಘಟನೆಯ ಉz್ದೆÃಶ, ಚಿಂತನೆ ಒಂದೇ ಆಗಿತ್ತು. ಸ್ವಾರ್ಥಕೈಬಿಟ್ಟು ಶೋಷಿತರ ಮುಕ್ತಿಗಾಗಿ ಮನೆ, ಮಠ ತೊರೆದು ಸಂಘಟನೆಯಲ್ಲಿ ದುಡಿದವರು ಸಾಕಷ್ಟು ಜನರು ನಮ್ಮ ಕಣ್ಣುಮುಂದೆ ಇದ್ದಾರೆ. ಈ ವ್ಯವಸ್ಥೆಯಲ್ಲಿ ದಲಿತರ ವಿಮೋಚನೆ ಅಸಾಧ್ಯ ವಾಗಿದೆ. ನಮ್ಮ ವಿರುದ್ಧದ ಶಕ್ತಿಗಳು ಬೇರೆ ರೂಪದಲ್ಲಿ ಹುಟ್ಟಿಕೊಳ್ಳುತ್ತಿವೆ. ಎಚ್ಚರದಿಂದ ಇರಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎಚ್.ಎಂ.ರುದ್ರಸ್ವಾಮಿ ಅವರು ಬಸವಲಿಂಗಪ್ಪ, ಬೂಸಾ ಚಳವಳಿ ಮತ್ತು ದಲಿತ ಸಂಘರ್ಷ ಸಮಿತಿ ಹುಟ್ಟಿದ ಕುರಿತು ಮಾತನಾಡಿ, ಬಸವಲಿಂಗಪ್ಪನವರು ದಲಿತರಿಗೆ ಸ್ಪೂರ್ತಿದಾಯಕವಾಗಿದ್ದಾರೆ. ಬ್ರಿಟಿಷರ ಆಳ್ವಿಕೆಯಲ್ಲೇ ಉತ್ತಮ ಶಿಕ್ಷಣ ಪಡೆದುಕೊಂಡಿದ್ದರು. ಅಂಬೇಡ್ಕರ್ ಸಾಹಿತ್ಯವನ್ನು ತಿಳಿದುಕೊಂಡಿದ್ದರು. ಕರ್ನಾಟಕದಲ್ಲಿ ಸಾಮಾಜಿಕ ಅಲೆಯನ್ನು ಸೃಷ್ಟಿಸಿದವರು ಎಂದು ಬಣ್ಣಿಸಿದರು.

ಬೂಸಾ ಪ್ರಕರಣದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ಬಸವಲಿಂಗಪ್ಪನವರು ರಾಜಿನಾಮೆ ನೀಡಿದ ಬಳಿಕ ಮಾತನಾಡಿ ರಾಜಿನಾಮೆ ಪಡೆಯಬಹುದು ಆದರೆ ಅಂಬೇಡ್ಕರ್ ವಿಚಾರಧಾರೆಯನ್ನು ನನ್ನಿಂದ ಕಿತ್ತುಕೊಳ್ಳಲಾಗದು ಎಂದು ಹೇಳಿದ್ದನ್ನು ಸ್ಮರಿಸಿದರು. ಸಿಕ್ಕಿದ ಅಧಿಕಾರವನ್ನು ಅವರು ಜನಾಂಗದ ಒಳಿತಿಗಾಗಿ ಬಳಸಿದರು. ಅವರನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಅಗತ್ಯವಿದೆ. ಚಳವಳಿಗಳ ಹೋರಾಟದ ದಿಕ್ಕು ಸರಿಯಾಗಿದ್ದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.

ಡಿಎಸ್‌ಎಸ್ ರಾಜ್ಯ ಸಮಿತಿ ಸಮಿತಿ ಸದಸ್ಯ ಮಲ್ಲೇಶ ಅಂಬುಗ, ರಾಜ್ಯ ಸಂಘಟನಾ ಸಂಚಾಲಕರಾದ ರಮೇಶ್ ಡಾಕುಳಿಕಿ, ಸಿದ್ದರಾಜು ದೊಡ್ಡಿನವಾಡಿ, ಕಾರಹಳ್ಳಿ ಶ್ರೀನಿವಾಸ, ಜಿಲ್ಲಾ ಸಂಘಟನಾ ಸಂಚಾಲಕರಾದ ಉz್ದÉÃಬೋರನಹಳ್ಳಿ ರಮೇಶ್, ಮಂಜಯ್ಯ ಬಾಚಿಗನಹಳ್ಳಿ, ಕಂಡಪ್ಪ ತೊಂಡುವಳ್ಳಿ, ಮಂಜುನಾಥ ಮೂಡಿಗೆರೆ, ಜಿಲ್ಲಾ ಖಜಾಂಚಿ ಲಕ್ಯಾ ಸಂತೋಷ, ದೌರ್ಜನ್ಯ ಸಮಿತಿ ವಿಭಾಗೀಯ ಸದಸ್ಯ ಹುಣಸೇಮಕ್ಕಿ ಲಕ್ಷö್ಮಣ್,ಗೌತಮಬುದ್ದ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ.ಬಸವರಾಜು ಇದ್ದರು.