ಜಿಲ್ಲೆ

ಧರ್ಮಗಳಿಗೆ ಬೆಂಕಿ ಹಚ್ಚಿದ ರಾಷ್ಟ್ರೀಯ ಪಕ್ಷಗಳು: ನಿಖಿಲ್​ ಕುಮಾರಸ್ವಾಮಿ ಆರೋಪ

Tumakuru

ಗುಬ್ಬಿ: ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಗಳು ಧರ್ಮಗಳ ನಡುವೆ ಬೆಂಕಿ ಹಚ್ಚಿ ಚುನಾವಣೆಯಲ್ಲಿ ಮತ ಪಡೆಯುತ್ತಿವೆ ಎಂದು ಜೆಡಿಎಸ್​ ಯುವ ಟಕದ ರಾಜ್ಯಾಧ್ಯ ನಿಖಿಲ್​ ಕುಮಾರಸ್ವಾಮಿ ಹರಿಹಾಯ್ದರು.

ಜನತಾ ಜಲಧಾರೆ ರಥಯಾತ್ರೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರನ್ನು ಯಾಮಾರಿಸುತ್ತೇವೆ ಎಂಬ ಭ್ರಮೆಯಲ್ಲಿದ್ದರೆ ಇದು ಸುಳ್ಳಾಗುವ ಸಮಯ ದೂರ ಇಲ್ಲ ಎಂದರು.

ಜಾತಿ, ಧರ್ಮದ ಲೆಕ್ಕಾಚಾರದ ಮೇಲೆ ರಾಜಕೀಯ ಮಾಡುವ ಕಾಂಗ್ರೆಸ್​ ಹಿಜಾಬ್​ ವಿಚಾರದಲ್ಲಿ ಯಾವ ಹೇಳಿಕೆಗಳನ್ನು ನೀಡಲಿಲ್ಲ. ಇನ್ನು ರಾಜ್ಯ ಸರ್ಕಾರ ಜನರನ್ನು ಎತ್ತಿಕಟ್ಟಿ ಮೌನವಾಗಿ ಕುಳಿತಿದೆ ಎಂದು ಎರಡೂ ರಾಷ್ಟ್ರೀಯ ಪಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಎರಡೂ ರಾಷ್ಟ್ರೀಯ ಪಗಳು ಜನರು ನೀಡಿದ ಅವಕಾಶ ಬಳಸಿಕೊಂಡು ಕೊಟ್ಟ ಭರವಸೆ ಈಡೇರಿಸಿಲ್ಲ, ಪ್ರಸ್ತುತ ಬಿಜೆಪಿ ಸರ್ಕಾರ ಶೇ.40ರ ಕಮಿಷನ್​ ಸರ್ಕಾರವಾಗಿದ್ದು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದಲೂ ಧರ್ಮಧರ್ಮಗಳ ನಡುವೆ ಬೆಂಕಿ ಹಚ್ಚಿಕೊಂಡು ಸರ್ಕಾರ ಆಡಳಿತ ನಡೆಸುತ್ತಿದೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ಉಳಿಸುವ ಕೆಲಸ ಆಗಬೇಕಿದೆ. ರಾಜಕೀಯ ಲಾಭಕ್ಕಾಗಿ ನಮ್ಮ ನಡುವಿನ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎಂದರು.

ಜನರು ಸರಿಯಾದ ತೀರ್ಮಾನ ಮಾಡಬೇಕು, ಪ್ರಾದೇಶಿಕ ಪವನ್ನು ಉಳಿಸುವುದು ಅತ್ಯವಶ್ಯಕ. ರೈತರಿಗಾಗಿ, ಶೋಷಿತರಿಗಾಗಿ, ಬಡವರಿಗಾಗಿ, ಯುವಕರಿಗಾಗಿ ಜೆಡಿಎಸ್​ ಉಳಿಯಬೇಕಿದೆ ಎಂದರು.

ಜಿಲ್ಲಾಧ್ಯಕ್ಷ ಆರ್​.ಸಿ.ಆಂಜಿನಪ್ಪ, ಶಾಸಕ ಕೆ.ಎ.ತಿಪ್ಪೇಸ್ವಾಮಿ, ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಮತ್ತಿತರರು ಇದ್ದರು.

ನಿಖಿಲ್​ ರೋಡ್​ ಶೋ: ಜನತಾಜಲಧಾರೆ ರಥಯಾತ್ರೆ ಅಂಗವಾಗಿ ತೆರೆದ ವಾಹನದಲ್ಲಿ ಜೆಡಿಎಸ್​ ಮುಖಂಡರೊಂದಿಗೆ ನಿಖಿಲ್​ ರೋಡ್​ ಶೋ ನಡೆಸಿದರು. ಪೂರ್ಣ ಕುಂಭ ಹೊತ್ತ ನೂರಾರು ಮಹಿಳೆಯರು ಜನತಾ ಜಲಧಾರೆ ರಥಯಾತ್ರೆಗೆ ಸ್ವಾಗತ ಕೋರಿದರು. ಪಟ್ಟಣದ ಶ್ರೀಚನ್ನಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಜನತಾ ಜಲಧಾರೆ ರಥಕ್ಕೆ ಪವಿತ್ರ ಜಲ ಸಂಗ್ರಹಿಸಲಾಯಿತು.

ಗುಬ್ಬಿ ಶಾಸಕರಿಗೆ ಸ್ವಲ್ಪವಾದರೂ ತಾಯಿ ಹೃದಯವಿದಿದ್ದರೆ ಅವರನ್ನು ಬೆಳೆಸಿದ ಪಕ್ಷದ ಬೆನ್ನಿಗೆ ಚೂರಿ ಹಾಕುತ್ತಿರಲಿಲ್ಲ, ಈಗ ಯಾವ ಪಕ್ಷದಲ್ಲಿದ್ದಾರೆ ಎಂಬುದು ಅವರಿಗೆ ಗೊತ್ತಿಲ್ಲ ಅಂದರೆ ಬ್ಲಾಕ್​ಮೇಲ್​ ರಾಜಕಾರಣವಷ್ಟೇ. ಗುಬ್ಬಿ ಕ್ಷೇತ್ರಕ್ಕೆ ಜೆಡಿಎಸ್​ ಅಭ್ಯರ್ಥಿಕೂಡ ಈಗಾಗಲೇ ೂಷಿಸಲಾಗಿದೆ. > ನಿಖಿಲ್​ಕುಮಾರಸ್ವಾಮಿ ರಾಜ್ಯಾಧ್ಯಕ್ಷ, ಜೆಡಿಎಸ್​ ಯುವ ಟಕ