ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿಯ ಹುಗ್ಗೆಳ್ಳಿ ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ಧರ್ಮ ಸಭೆಯನ್ನು ಶ್ರೀ ವೀರೂಪಾಕ್ಷ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ಜಯಶಾಂತಲಿಂಗ ಸ್ವಾಮೀಜಿ, ಶ್ರೀ ಘನಲಿಂಗರುದ್ರಮುನಿ ಶಿವಾಚಾರ್ಯ, ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ, ಶ್ರೀ ಚಿದಾನಂದ ಶಿವಾಚಾರ್ಯರು, ಹುಡಗಿಯ ಶ್ರೀ ಚನ್ನಮಲ್ಲ ಸ್ವಾಮೀಜಿ ಇತರರಿದ್ದರು. 
ಜಿಲ್ಲೆ

ಧರ್ಮ ಮಾರ್ಗದಲ್ಲಿ ನಡೆದರೆ ಬದುಕು ಸುಂದರ

ಭಾಲ್ಕಿ: ಮನುಷ್ಯ ಜನ್ಮ ಸಾರ್ಥಕತೆ ಆಗಬೇಕಾದರೆ ಧರ್ಮ ಮಾರ್ಗದಲ್ಲಿ ನಡೆಯಬೇಕು. ಧರ್ಮ ಮಾರ್ಗದಲ್ಲಿ ನಡೆದರೆ ಬದುಕು ಸುಂದರವಾಗುವುದು ಎಂದು ಕಟ್ಟಿಮನಿ ಹಿರೇಮಠ ಸಂಸ್ಥಾನ ಹುಡಗಿಯ ಶ್ರೀ ವೀರುಪಾಕ್ಷ ಶಿವಾಚಾರ್ಯರು ನುಡಿದರು.

ಖಟಕ ಚಿಂಚೋಳಿ ಗ್ರಾಮದ ಹುಗ್ಗೆಳ್ಳಿ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಬಸವಲಿಂಗ ಶಿವಾಚಾರ್ಯರ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಿಮಿತ್ತ ಸೋಮವಾರ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಎಲ್ಲರೂ ಧರ್ಮ ಮಾರ್ಗದಿಂದ ನಡೆಯಬೇಕು. ಮಾನವ ಜನ್ಮ ಸಾರ್ಥಕತೆ ಅಡಗಿರುವುದು ನಿಜವಾದ ಧರ್ಮದಲ್ಲಿದೆ. ಹೀಗಾಗಿ ಎಲ್ಲರೂ ಧರ್ಮಮಾರ್ಗದಲ್ಲಿ ನಡೆದು ವಿಶ್ವ ಶಾಂತಿಗಾಗಿ ಪ್ರಾರ್ಥಿಸಬೇಕು. ಹುಗ್ಗೆಳ್ಳಿ ಹಿರೇಮಠದ ಶ್ರೀ ಬಸವಲಿಂಗ ಶಿವಾಚಾರ್ಯರು ಪವಾಡ ಪುರುಷರಾಗಿದ್ದರು. ಅವರ ಜೀವಿತಾವಧಿಯಲ್ಲಿ ಬಂದ ಭಕ್ತರ ಕಷ್ಟಗಳನ್ನು ಪರಿಹಿರಿಸ ಉದ್ಧರಿಸಿದ ಹಲವಾರು ಉದಾಹರಣೆಗಳಿವೆ. ಅವರ ಮಾರ್ಗದಲ್ಲಿ ನಡೆದು ನಮ್ಮ ಜನ್ಮ ಪಾವನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಹಿರೇನಾಗಾಂವದ ಶ್ರೀ ಜಯಶಾಂತಲಿಂಗ ಸ್ವಾಮೀಜಿ ಮಾತನಾಡಿ, ಗುರುಹಿರಿಯಲ್ಲಿ ಭಕ್ತಿ ಭಾವದಿಂದ ಜೀವನ ಸಾಗಿಸಬೇಕು. ಎಲ್ಲರನ್ನೂ ಪ್ರೀತಿಸುವ ಕಾರ್ಯವಾಗಬೇಕು ಎಂದರು.

ಹಿರೇಮಠ ಸಂಸ್ಥಾನ ರಾಜೇಶ್ವರದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಕಣಕಣದಲ್ಲಿ ದೇವರಿದ್ದಾನೆ, ಮನದಲ್ಲಿ ಭಕ್ತಿ ತುಂಬಿ ದೇವರನ್ನು ನನೆದರೆ ಜೀವನ ಪಾವನವಾಗುವುದು ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಹುಗ್ಗೆಳ್ಳಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಹುಗ್ಗೆಳ್ಳಿ ಹಿರೇಮಠವು ಭಕ್ತರ ಮಠವಾಗಿದೆ. ಕಲಬುರಗಿಯ ಡಾ.ಶಿವರಾಜ ಅಲಶೆಟ್ಟಿ ಮತ್ತು ರಮೇಶ ಅಲಶೆಟ್ಟಿ ಅವರು ನೂತನ ಮಂದಿರ ನಿರ್ಮಾಣಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಬಿಲಗುಂದಿಯ ಶ್ರೀ ಚಿದಾನಂದ ಶಿವಾಚಾರ್ಯರು, ಹುಡಗಿಯ ಶ್ರೀ ಚನ್ನಮಲ್ಲ ಸ್ವಾಮೀಜಿ ಸಾನ್ನಿಧ್ಯಬವಹಿಸಿ ಮಾತನಾಡಿದರು. ಹುಗ್ಗೆಳ್ಳಿ ಹಿರೇಮಠದ ಕಿರಿಯ ಸ್ವಾಮೀಜಿ ಶ್ರೀರುದ್ರಮುನಿ ದೇವರು, ಖಟಕ ಚಿಂಚೋಳಿಯ ಶ್ರೀ ರಾಮಕೃಷ್ಣ ಶರಣರು ಸಮ್ಮುಖ ವಹಿಸಿದ್ದರು.

ಪ್ರಮುಖರಾದ ಶಾಂತಮ್ಮ ಶ್ರೀಶೈಲ, ಕಲ್ಲಯ್ಯಸ್ವಾಮಿ ಮಂಗಲಗಿ, ಲಕ್ಷ್ಮೀ ನಾಗಯ್ಯಸ್ವಾಮಿ ರಾಂಪುರ, ರಾಗಿಣಿ, ರಮೇಶ ಅಲಶೆಟ್ಟಿ, ಮಹಾನಂದಾ ಧೂಳಪ್ಪ, ಸರಳಾಬಾಯಿ ಪಾಟೀಲ, ಸಂಗಮೆಶ ಬೇಲೂರೆ, ನಾಗರಾನ ಸಜ್ಜನಶೆಟ್ಟಿ, ಪ್ರದೀಪ ವಡಗಾವೆ, ಅನೀಲಕುಮಾರ ಪಟ್ನೆ, ಶೋಭಾ ಈರಣ್ಣ ಮೈಂದರಗಿ ಇದ್ದರು.

ನಾಗರಾಜ ಸಜ್ಜನಶೆಟ್ಟಿ ಸ್ವಾಗತಿಸಿದರು. ಎದಲಾಪುರೆ ನಿರೂಪಣೆ ಮಾಡಿದರು. ನಾಗರಾಜ ಚಿಲಶೆಟ್ಟಿ ವಂದಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ವಿಶ್ವನಾಥ ಉಬುರಗೆ, ವಿಜಯಕುಮಾರ ಅಲಶೆಟ್ಟಿ, ಆನಂದ ಬೇಲೂರೆ, ಮೈಬುಸಾಬ್ ರಸುಲಸಾಬ್ ಅವರನ್ನು ಸನ್ಮಾನಿಸಲಾಯಿತು.