ಜಿಲ್ಲೆ

ಧರ್ಮ ಪುನರುತ್ಥಾನ ಆರ್​ಎಸ್​ಎಸ್​ ಆಶಯ - ಸು. ರಾಮಣ್ಣ

ಬೆಳಗಾವಿ: ಅಧರ್ಮವನ್ನು ಸಂಹಾರ ಮಾಡಿ, ಧರ್ಮವನ್ನು ಪುನರುತ್ಥಾನ ಮಾಡುವುದು ರಾಷ್ಟ್ರೀಯ ಸ್ವಯಂ ಸೇವಕ ಸಂದ ಮೂಲ ಆಶಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂದ ಕರ್ನಾಟಕ ಜೇಷ್ಠ ಪ್ರಚಾರಕ ಸು. ರಾಮಣ್ಣ ಹೇಳಿದರು. ನಗರದ ಲಿಂಗರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಆರ್​ಎಸ್​ಎಸ್​ ಪಥಸಂಚಲನದ ಸಾರ್ವಜನಿಕ ಸಮಾರಂಭದಲ್ಲಿ "ರಾಷ್ಟ್ರ ತಪಸ್ವಿ ಶ್ರೀ ಗುರೂಜಿ ಗ್ರಂಥ ಲೋಕಾರ್ಪಣೆ' ಮಾಡಿ ಅವರು ಮಾತನಾಡಿದರು.

ಶ್ರೀರಾಮನು ವಾನರನ್ನಿಟ್ಟುಕೊಂಡು ಧರ್ಮ ಸಂರಕ್ಷಣೆ ಮಾಡಿದ. ಶ್ರೀಕೃಷ್ಣ ಪರಮಾತ್ಮ ಪಾಂಡವರನ್ನು ಮುಂದಿಟ್ಟುಕೊಂಡು ಅಧರ್ಮವನ್ನು ಸಂಹಾರ ಮಾಡಿದ.
ಹೀಗಾಗಿ ಶ್ರೀಕೃಷ್ಣ ಮತ್ತು ಶ್ರೀರಾಮ ಎಂದಿಗೂ ಅಪ್ರಸ್ತುತ ಎನಿಸುವುದಿಲ್ಲ. ಶ್ರೀಕೃಷ್ಣ, ಶ್ರೀರಾಮ ಅವರನ್ನು ಅನುಸರಿಸುವುದು ಹಾಗೂ ಅಧರ್ಮವನ್ನು ಸಂವಾರ ಮಾಡಿ, ಧರ್ಮವನ್ನು ಪುನರುತ್ಥಾನ ಮಾಡುವುದು ರಾಷ್ಟ್ರೀಯ ಸ್ವಯಂ ಸೇವಕ ಸಂದ ಮಾರ್ಗವಾಗಿದೆ ಎಂದರು. ಆರ್​ಎಸ್​ಎಸ್​ ಪಥಸಂಚಲನದಲ್ಲಿ ಗಣವೇಷಧಾರಿಗಳ ಶಾರೀರಿಕ ಪ್ರದರ್ಶನವು ಯಾರನ್ನೂ ಹೆದರಿಸುವುದಕ್ಕೆ ಅಲ್ಲ. ಯಾರಿಗೂ ಸಂದೇಶ ಕೊಡುವುದಕ್ಕೆ ಅಲ್ಲ.

ಯಾರನ್ನೂ ಖುಷಿ ಪಡಿಸುವುದೂ ಅಲ್ಲ. ಧರ್ಮ ಸಂಸರಕ್ಷಣೆ ಕಾರ್ಯ ಮುಂದುವರಿಸಿಕೊಂಡು ಹೋಗುವುದಾಗಿದೆ. ಭಾರತ ಮಣ್ಣಿನ ಕಣ ಕಣದಲ್ಲಿ ಹಿಂದು ಸಮಾಜದ ಮಾತೃತ್ವ ಇದೆ. ಸಂಕ್ಕೆ ಎಂದೂ ಮುಪ್ಪು ಬರುವುದಿಲ್ಲ ಎಂದರು. ಬೆಳಗಾವಿ, ಹುಬ್ಬಳಿ, ಬಾಗಲಕೋಟೆ, ವಿಜಯಪುರ ಇತರ ಕಡೆಗಳಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಪಥಸಂಚಲನದಲ್ಲಿ ಶೇ. 33 ಸ್ವಯಂ ಸೇವಕರು ಹೆಚ್ಚಾಗಿದ್ದಾರೆ. 20 ವರ್ಷಗಳಲ್ಲೇ ಇದು ಹೆಚ್ಚಿನ ಸಂಖ್ಯೆಯಾಗಿದೆ. ಪಥಸಂಚಲನವನ್ನು ಸ್ವಾಗತಿಸುವ ಮನಸ್ಸುಗಳು ಹೆಚ್ಚಾಗಿವೆ ಎಂದರು.

ಆರ್​ಎಸ್​ಎಸ್​ ನಗರ ಸಂಚಾಲಕ ಬಾಳಣ್ಣ ಕಗ್ಗಣಗಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಜಿ. ಧಾರವಾಡ ಮಾತನಾಡಿದರು. ಆರ್​ಎಸ್​ಎಸ್​ ಸ್ವಯಂ ಸೇವಕರು, ಗಣ್ಯರು, ಸಾರ್ವಜನಿಕರು ಇದ್ದರು.

ಜನಮನ ಸೆಳೆದ ಆಕರ್ಷಕ ಪಥಸಂಚಲನ: ರಾಷ್ಟ್ರೀಯ ಸ್ವಯಂ ಸೇವಕ ಸಂದಿಂದ (ಆರ್​ಎಸ್​ಎಸ್​) ಯುಗಾಬ್ದ 5124 ಕಾರ್ತಿಕ ಶುಕ್ಲ ತ್ರಯೋದಶಿ ಹಿನ್ನೆಲೆಯಲ್ಲಿ ಭಾನುವಾರ ಕುಂದಾನಗರಿಯಲ್ಲಿ ಆಕರ್ಷಕ ಪಥಸಂಚಲನ ಜರುಗಿತು. ನಗರದ ಸರ್ದಾರ್​ ಮೈದಾನದಿಂದ ಆರಂಭವಾದ ಪಥಸಂಚಲನದಲ್ಲಿ ಸಾವಿರಾರು ಗಣವೇಷಧಾರಿಗಳು ಭಾಗವಹಿಸಿದ್ದರು. ಪಥಸಂಚಲನ ಮಾರ್ಗದುದ್ದಕ್ಕೂ ಸಾರ್ವಜನಿಕರು ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿ ಮಾಡಿ ಭಾರತ ಮಾತಾ ಕಿ ಜೈ, ವಂದೇ ಮಾತರಂ ಎಂಬ ೂಷಣೆ ಕೂಗಿದರು.

ಲಿಂಗರಾಜ ಕೌಕ್​, ಸರ್ದಾರ ಹೈಸ್ಕೂಲ್​ ಕಾರ್ನರ್​, ಕಾಕತಿವೇಸ್​ ರಸ್ತೆ, ಶನಿವಾರ ಕೂಟ, ಗಣಪತಿ ಗಲ್ಲಿ, ನರಗುಂದಕರ ಭಾವೆ ಚೌಕ್​, ಮಾರುತಿ ಗಲ್ಲಿ&ಹುತಾತ್ಮ ಚೌಕ್​, ಕಿಲೋರ್ಸ್ಕರ್​ ರಸ್ತೆ, ಧರ್ಮವೀರ ಸಂಭಾಜಿ ಚೌಕ್​, ಸ್ವಾಮಿ ವಿವೇಕಾನಂದ ಚೌಕ್​, ಗೋಂಧಳಿ ಗಲ್ಲಿ, ಲಿಂಗರಾಜ ಚೌಕ್​ ಮೂಲಕ ಲಿಂಗರಾಜ ಕಾಲೇಜು ಮೈದಾನದಲ್ಲಿ ಪಥಸಂಚಲನ ಸಮಾವೇಶಗೊಂಡಿತು. ಆರ್​ಎಸ್​ಎಸ್​ ಸ್ವಯಂ ಸೇವಕರು ೂಷ್​ ಪ್ರಾತ್ಯಕೆ, ದಂಡ ಪ್ರಯೋಗ ಪ್ರಾತ್ಯಕೆ, ಯಷ್ಠಿ ಪ್ರಯೋಗ ಪ್ರಾತ್ಯಕೆ, ನಿಯುದ್ಧ ಪ್ರಾತ್ಯಕೆ, ದಂಡ ವ್ಯಾಯಾಮ, ಉಪವಿಷ್ಠ ವ್ಯಾಯಾಮ, ಸಮತಾ ಪ್ರಾತ್ಯಕೆ ಪ್ರದಶರ್ಶಿದರು.