ಹೊಳೆನರಸೀಪುರ: ಧರ್ಮ ಧಾರ್ಮಿಕತೆ ವೈಜ್ಞಾನಿಕವಾಗಿರಬೇಕು ಧಾರ್ಮಿಕತೆಯ ಹೆಸರಲ್ಲಿ ಕಂದಾಚಾರ ಮೌಡ್ಯ ಆಚರಣೆ ಸಲ್ಲದು ವಿಜ್ಞಾನದ ತಳಹದಿಯ ಮೇಲಿರುವ ಧರ್ಮದಿಂದ ಸಮಾಜದಲ್ಲಿ ಪ್ರಗತಿ ಕಾಣುವುದೆಂದು ಚಿತ್ರದುರ್ಗದ ಆದಿಜಾಂಭವ ಗುರುಪೀಠದ ಶ್ರೀ ಶ್ರೀ ಮಾದಾರಚನ್ನಯ್ಯ ಸ್ವಾಮೀಜಿ ನುಡಿದರು.
ಅವರು ತಾಲ್ಲೂಕಿನ ಕಡವಿನಹೊಸಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿಮಾರ್ರ್ಣಗೊಂಡು ಡಿಸೆಂಬರ್,01 ರಂದು ಲೋಕಾರ್ಪಣೆಗೊಂಡ ಗ್ರಾಮದೇವತೆ ದೊಡ್ಡಮ್ಮ ಚಿಕ್ಕಮ್ಮ ದೇವಸ್ಥಾನ ಉಧ್ಘಾಟನಾ ಸಮಾರಂಭದಲ್ಲಿ ಕಳಸ ಪ್ರತಿಷ್ಠಾಪಿಸಿ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದರು ಮಾನವಕುಲಕ್ಕೆ ನಂಬಿಕೆಗಳೇ ದೇವರು ಕಾಯಕವೇ ಕೈಲಾಸವೆಂದ ಅವರು ಶೋಷಿತರು ಹಿಂದುಳಿದವರು ಶೈಕ್ಷಣಿಕವಾಗಿ ಉನ್ನತಿ ಹೊಂದಬೇಕೆಂದರು.
ಮತ್ತೋರ್ವ ಶರಣರಾದ ಚಿತ್ರದುರ್ಗದ ಆದಿಜಾಂಭವ ಗುರುಪೀಠದ ಶ್ರೀ ಶ್ರೀ ಷಡಕ್ಷರಿ ಮಹಾಮುನಿ ಸ್ವಾಮೀಜಿಯವರು ದೇವಸ್ಥಾನಗಳು ಪ್ರಗತಿ ಕಂಡಂತೆ ನಿಷ್ಕಲ್ಮಶ ಮನಸ್ಸಿನಿಂದ ಪಾರದರ್ಶಕವಾಗಿ ದೇವರನ್ನು ನಂಬಬೇಕು ಅದಕ್ಕೆ ಬಾಬಾಸಾಹೇಬರ ಶಿಕ್ಷಣ ಬಸವಣ್ಣನವರ ಕಾಯಕ ಕ್ರಾಂತಿ ಬುಧಧಗುರುಗಳ ಕರುಣೆ ಮೈತ್ರಿ ಪ್ರೀತಿ ಅಳವಡಿಸಿಕೊಂಡು ಮನೆಮನೆಯಲ್ಲಿ ಆದರ್ಶ ಅನುಸರಣೆಗಳ ಮೂಲಕ ಬುದ್ದ ಬಸವ ಅಂಬೇಡ್ಕರ್ ಇರಬೇಕೆಂದರು. ಮೈಮೇಲೆ ದೇವರು ಬರುವುದು ಅತಿದೊಡ್ಡ ಮೌಡ್ಯ ಮತ್ತು ಅಜ್ಞಾನ ಎಲ್ಲರೂ ಶಿಕ್ಷಣವಂತರಾದಾಗ ಮೌಡ್ಯ ಅಳಿಯುತ್ತದೆ ಎಂದರು.
ಗ್ರಾಮಕ್ಕೆ ದೇವಸ್ಥಾನದ ಅನುಕೂಲಕ್ಕೆ ಕೊಠಡಿ, ಕಲೆ,ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಂಗ ವೇದಿಕೆ, ಸಮುದಾಯಭವನಕ್ಕೆ ಅಡಿಗೆ ಕೊಠಡಿಗಳು ಮತ್ತು ನೆಲಕ್ಕೆ ಕಾಂಕ್ರೀಟ್ ವ್ಯವಸ್ಥೆ ಬಾಕಿ ಇರುವ ಹರಳೀಕಟ್ಟೆ ಕೆಲಸ ಪೂರ್ಣಗೊಳಿಸುವುದು ತಾಲ್ಲೂಕಿನಲ್ಲಿ ಬಾಬುಉಜಗಜೀವರಾಂ ಭವನಕ್ಕೆ ಸೂಕ್ತ ನಿವೇಶನ ಬೇಕೆಂಬ ಬೇಡಿಕೆಗಳನ್ನೊಳಗೊಂಡ ಗ್ರಾಮಸ್ಥರ ಭಿನ್ನವತ್ತಳೆ ಸ್ವೀಕರಿಸಿದ ಮಾಜಿಸಚಿವರು ಹಾಲಿ ಶಾಸಕರಾದ ಹೆಚ್.ಡಿ.ರೇವಣ್ಣನವರು ಮಾತನಾಡಿ ನಮ್ಮ ಕೆಲಸಗಳ ಜೊತೆಗೆ ದೈವಾನುಗ್ರಹದಿಂದ ಒಳ್ಳೆಯದಾಗುತ್ತದೆ ಈ ದೇವಸ್ಥಾನ ನಿರ್ಮಾಣ ಬಹಳ ದೈವೀಕತೆಯಿಂದ ಮೂಡಿ ಬಂದಿದ್ದು ಎಲ್ಲರಿಗೂ ಒಳ್ಳೆಯದಾಗಲಿ ಎಂದರು. ಕಡವಿನಹೊಸಹಳ್ಳಿ ಗ್ರಾಮದ ಅಭಿವೃದ್ದಿಗೆ ಸಾಕಷ್ಟು ಕೆಲಸಗಳಾಗಿದ್ದು ನೀವೂ ತಿಳಿಸಿರುವ ಕರ್ಯಗಳನ್ನು ಮಾಡುವುದರೊಂದಿಗೆ ಹೊಳೆನರಸೀಪುರ ಪಟ್ಟಣದಲ್ಲಿ ಡಾ. ಬಾಬೂಜಗಜೀವನರಾಂ ಭವನಕ್ಕೆ ನಿವೇಶನ ಗುರುತಿಸಿ ಸುಮಾರು 2.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುದೆಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಮತಿ ಭವಾನಿರೇವಣ್ಣ ಕಾರ್ಯಕ್ರಮ ಉಧ್ಘಾಟಿಸಿದರು. ತಹಸೀಲ್ದಾರ್ ಕೆ. ಕೃಷ್ಣಮೂರ್ತಿ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮಾತನಾಡಿದರು.
ಕಳೆದ ಮೂರು ದಿನಗಳಿಂದ ಗ್ರಾಮವು ತಳಿರು ತೋರಣ ಹಾಗೂ ವಿಧ್ಯುತ್ ದೀಪಾಲಂಕರಗಳಿಂದ ಸಿಂಗರಿಸಿಕೊಂಡು ಹಬ್ಬದ ವಾತವರಣದಿಂದ ಕಂಗೊಳಿಸುತ್ತಿತ್ತು ನಿತ್ಯ ಅನ್ನದಾಸೋಹ ಮಾಡುವುದರೊಂದಿಗಗೆ ಪೂಜಾ ಕೈಕಂರ್ಯಗಳು ನಡೆದು ನೂರೊಂದು ಕಳಸಗಳೊಂದಿಗೆ ಶರಣರ ಜೊತೆ ಮೆರವಣಿಗೆ ಸಾಗಿಬಂತು,
ತಾ.ಪಂ.ಮಾಜಿ ಅಧ್ಯಕ್ಷರಾದ ಸಿ.ಆರ್.ಮಂಜುನಾಥ, ಉಪ ತಹಸೀಲ್ದಾರ್ ಶಿವಕುಮಾರ್, ಬಾಗಿವಾಳು ಗ್ರಾ.ಪಂ.ಅಧ್ಯಕ್ಷರಾದ ಬಿ.ಎಂ.ಮಣಿಕಂಠ, ಅಭಿವೃದ್ದಿ ಅಧಿಕಾರಿ ಕೆ.ಸಿ. ವಿಜಯ್, ತಾ.ಪಂ.ಮಾ. ಸದಸ್ಯರಾದ ಬಾಗಿವಾಳು ಬಸವರಾಜು ಕಡವಿನಕೋಟೆ ಗ್ರಾಮದ ಕೆ.ಎಂ.ಕುಮಾರಸ್ವಾಮಿ ತಟ್ಟೇಕೆರೆ ಗ್ರಾಮದ ರಾಮಚಂದ್ರು ಯುವಮುಖಂಡರಾದ ಕೆ.ಎನ್. ಸತೀಶ ಕೆ.ಬಿ.ದೇವರಾಜು ಕೆ.ಎಂ.ಚಿಕ್ಕಣ್ಣ ಕೆ.ಎಚ್.ರಾಜಪ್ಪಗ್ರಾ.ಪಂ.ಸದಸ್ಯರಾದ ವೀರಭದ್ರಯ್ಯ ಮಾ.ಸದಸ್ಯರಾದ ಕೆ.ಎಚ್.ಪಾಪಣ್ಣ ಕೆ.ರಾಜು ಕೆ.ಎಸ್.ಯೋಗೇಶ್ ಗುರುಮೂರ್ತಿ ಗ್ರಾ.ಪಂ ಮಾ.ಉಪಾಧ್ಯಕ್ಷರಾದ ಕೆ.ಟಿ.ಲೋಕೇಶ ಕೆ.ಸಿ.ಚಂದ್ರಹಾಸ ಕೆ.ಟಿ.ಶ್ರೀನಿವಾಸ ನ್ಯಾಯಬೆಲೆ ಅಂಗಡಿ ಮಾಲೀಕರಾದ ಕೆ.ಎಚ್.ಕುಮಾರ ಮುಂತಾದವರು ಉಪಸ್ಥಿತರಿದ್ದರು. ಸ್ವಾಮೀಜಿಗಳನ್ನೊಳಗೊಂಡಂತೆ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ದಾನಿಗಳನ್ನು ಹಾಗೂ ಕಡವಿನಕೋಟೆ ಬಾಗಿವಾಳು ತಟ್ಟೇಕೆರೆ ಗ್ರಾಮದ ಮುಖಂಡರನ್ನು ಆತ್ಮೀಯವಾಗಿ ಗೌರವಿಸಿ ಅಭಿನಂದಿಸಲಾಯಿತು .
ಕೆ.ಎಂ.ನಾಗರಾಜು, ಕೆ.ಜೆ.ಸುನಿಲ್ ಕುಮಾರ್ , ಕೆ.ಎ.ಪ್ರವೀಣ , ತಾಲ್ಲೂಕಿನ ಸಹಸ್ರಾರು ಭಕ್ತಾದಿಗಳು ಗ್ರಾಮಸ್ಥರು ಗ್ರಾಮದ ಎಲ್ಲಾ ಯುವಕರು ಮಹಿಳೆಯರು ದೇವಸ್ಥಾನದ ಎಲ್ಲಾ ಅರ್ಚಕವೃಂದದವರು ಭಾಗವಹಿಸಿದ್ದರು