ಚಿಕ್ಕಮಗಳೂರು: ಧರ್ಮ, ದೇವರು, ಸಂಸ್ಕೃತಿ ಇವುಗಳು ಕೇವಲ ಜಾತ್ರೆಗಳಿಗೆ ಸೀಮಿತವಾಗದೆ, ಚಿಂತನೆಗಳತ್ತ ವ್ಯಾಪಿಸಬೇಕು ಎಂದು ಪುಷ್ಪಗಿರಿ ಮಹಾ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.
ಕಡೂರು ತಾಲೂಕಿನ ಕಾಮೇನಹಳ್ಳಿ ಗ್ರಾಮದ ಶ್ರೀವೀರಭದ್ರೇಶ್ವರ ಸ್ವಾಮಿ ನೂತನ ದೇವಾಲಯದ ಪ್ರವೇಶ, ಕಳಶ ಪ್ರತಿಷ್ಟಾಪನೆ, ವೀರಭದ್ರೇಶ್ವರ ಸ್ವಾಮಿಯವರ, ಶ್ರೀ ಚೌಡೇಶ್ವರಿ ದೇವಿಯವರ ನೂತನ ವಿಗ್ರಹ ಪ್ರತಿಷ್ಟಾಪನೆ ಮತ್ತು ಕುಂಭಾಭಿಷೇಕದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಇಂದಿನ ಪೈಪೋಟಿ ಯುಗದಲ್ಲಿ ಏನನ್ನು ಓದಬೇಕು. ಯಾವುದನ್ನ ಓದಬೇಕು ಎಂಬ ಗೊಂದಲದಲ್ಲಿ ವಿದ್ಯಾರ್ಥಿಗಳು, ಪಾಲಕರು ಇದ್ದಾರೆ. ಆದರೆ ಏನನ್ನಾದರೂ ಓದಿ, ಯಾವುದಾದರೂ ಓದಿ, ಜ್ಞಾನ ಎಲ್ಲಿ ಸಿಗುತ್ತೋ ಅದನ್ನ ಓದಿ, ಜ್ಞಾನ ಪಡೆದುಕೊಳ್ಳಿ ಆಗ ವಿದ್ಯಾರ್ಥಿ ಜೀವನ ಸಾರ್ಥಕಮಯವಾಗುತ್ತದೆ. ಧಕ್ಷ ಬ್ರಹ್ಮನ ಒಂದೇ ಒಂದು ತಪ್ಪಿನಿಂದಾಗಿ ಶಿವಪುರಾಣ ನಡೆಯಿತು. ಒಂದು ತಪ್ಪಿನಿಂದ ರಾಮಯಣ, ಒಂದೇ ಒಂದು ಮಾತಿನಿಂದ ಮಹಾಭಾರತ ನಡೆಯಿತು. ಈ ರೀತಿ ಆಗಬಾರದು ಎಂದರೆ ಗುರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಉತ್ತಮ ಜೀವನ ನಡೆಸಲು ಸಾಕಾರವಾಗುತ್ತದೆ ಎಂದರು.
ದೇವರಿಗೆ ಎಲ್ಲ ದಿನವೂ ಒಂದೇ. ದಿನಗಳಲ್ಲಿ ತಾರತಮ್ಯ ಸಲ್ಲದು. ಆಧುನಿಕತೆ ಬೆಳೆದಂತೆ ನಾವು ತುಂಬಾ ಹಿಂದೆ ಹೋಗುತ್ತಿದ್ದೆವೆ. ಆಧುನಿಕತೆಯ ಬೆಳವಣಿಗೆಯೊಂದಿಗೆ ಧಾರ್ಮಿಕವಾಗಿ, ವೈಚಾರಿಕವಾಗಿ, ಆಧ್ಯಾತ್ಮಿಕವಾಗಿಯೂ ಬೆಳವಣಿಗೆ ಹೊಂದುತ್ತ ಧರ್ಮ, ಸಂಸ್ಕೃತಿಯನ್ನ ಕಾಪಾಡಬೇಕು. ಅಧಿಕಾರ ಮತ್ತು ಶ್ರೀಮಂತಿಕೆ ಎಷ್ಟಿದ್ದರೂ, ಸಮಾಜದಲ್ಲಿ ಎಷ್ಟೇ ದೊಡ್ಡವರಾದರೂ ಆಚಾರ, ಧರ್ಮವನ್ನ ಪಾಲಿಸಬೇಕು. ಮನುಷ್ಯನಿಗೆ ಹಣ, ಅಧಿಕಾರ ಬೇಕು. ಆದರೆ ಅವು ಜೀವಕ್ಕೇ ಕುತ್ತು ತರುವಂತಾಗಬಾರದು. ಕಲಿಯುಗದಲ್ಲಿ ಮನುಷ್ಯನಿಗೆ ಕೃತಜ್ಞತೆ ಇಲ್ಲದಂತಾಗುತ್ತಿರುವುದೇ ಇಂದಿನ ದಿನಗಳಲ್ಲಿ ಸಮಾಜ ತಲೆ ತಗ್ಗಿಸುವಂತಹ ಘಟನೆಗಳು ನಡೆಯಲು ಕಾರಣವಾಗುತ್ತಿವೆ. ಆರ್ಥಿಕ ಅಭಿವೃದ್ಧಿಯ ಜೊತೆಗೆ ಧರ್ಮದ ಅಭಿವೃದ್ಧಿಯಾಗಬೇಕು ಎಂದು ತಿಳಿಸಿದರು.
ಪುಷ್ಪಗಿರಿ ಸಂಸ್ಥಾನ ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದ ಸೇವೆಯ ಜೊತೆಗೆ ಆರೋಗ್ಯದ ಕಡೆಗೆ ಒತ್ತು ಕೊಡಲು ಚಿಂತನೆ ನಡೆಸುತ್ತಿದೆ ಎಂದರು.
ಕೋಳಗುAದ ಕೇದಿಗೆ ಮಠದ ಶ್ರೀಜಯಚಂದ್ರಶೇಖರ ಸ್ವಾಮೀಜಿ ಆಶೀರ್ವಚನ ನೀಡಿ, ಇತ್ತೀಚಿನ ದಿನಗಳಲ್ಲಿ ದೇವಸ್ಥಾನದ ಒಳಗೆ ದೇವರನ್ನ ಪ್ರತಿಷ್ಟಾಪನೆ ಮಾಡಿ, ಹೊರಗೆ ಅನೈತಿಕ ಕಾರ್ಯಗಳನ್ನ ಮಾಡುತ್ತಿz್ದೆÃವೆ. ಆದರೆ ಭಾರತೀಯ ಸಂಸ್ಕೃತಿ, ಹಿಂದೂ ಧರ್ಮದಲ್ಲಿ ಹುಟ್ಟಿದ ನಾವುಗಳು ಈ ಧರ್ಮಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು. ಮಕ್ಕಳಿಗೆ ನೈತಿಕ, ಮೌಲ್ಯಯುತ ಶಿಕ್ಷಣ ನಾವು ಕೊಡುತ್ತಿಲ್ಲ. ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಬೇಕು. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಅವನ ಕಾಯಕ ಅವನೇ ಮಾಡಿ ಅವನ ಜೀವನ ಅವನೇ ಮಾಡುವ ಕಾಯಕದ ಕೆಲಸಕ್ಕೆ ಅವರನ್ನ ಕಳಿಸುವ ಕೆಲಸವನ್ನು ಪಾಲಕರು ಮಾಡಬೇಕು ಎಂದು ಹೇಳಿದರು.
ಸಾಹಿತಿ ಚಟ್ನಹಳ್ಳಿ ಮಹೇಶ್ ಉಪನ್ಯಾಸ ನೀಡಿ, ಭಗವಂತನ ಕೃಪೆ ಎಲ್ಲರ ಮೇಲಿದ್ದಾಗ ಮಾತ್ರ ಇಡೀ ನಾಡು ಸುಖ, ನೆಮ್ಮದಿಯಿಂದಿರುತ್ತದೆ. ದೇವಸ್ಥಾನ ಓಪನ್ ಆಗುತ್ತಿದ್ದಂತೆ ತಲೆ ಮೇಲಿನ ಜವಾಬ್ದಾರಿ ತಪ್ಪುವುದಿಲ್ಲ. ದೇವಸ್ಥಾನ ಓಪನ್ ಆದ ಬಳಿಕ ನಿಜವಾದ ಜವಾಬ್ದಾರಿ ಆರಂಭವಾಗುತ್ತದೆ. ದೇವಸ್ಥಾನ ಧಾರ್ಮಿಕ ಶ್ರದ್ದೆಯ ಕೇಂದ್ರವಾಗಬೇಕು. ನ್ಯಾಯ ಸ್ಥಾನವಾಗಬೇಕು. ಗ್ರಾಮದ ಹಿರಿಯರೇ ಗ್ರಾಮದ ನ್ಯಾಯಾಧೀಶರಾಗಬೇಕು. ಆಗ ಮಾತ್ರ ದೇವಸ್ಥಾನಗಳ ನಿರ್ಮಾಣದ ಉz್ದÉÃಶ ಸಾರ್ಥಕವಾಗಲಿದೆ. ತಮ್ಮಲ್ಲಿನ ಜಾಗೃತ ಪ್ರಜ್ಞೆಯನ್ನ ಎಚ್ಚರಿಸುವುದೇ ನಿಜವಾದ ಮಹತ್ಕಾರ್ಯ ಎಂದು ಹೇಳಿದರು.
ಗ್ರಾಪಂ ಸದಸ್ಯ ಷಣ್ಮುಖಪ್ಪ ಅಧ್ಯಕ್ಷತೆ ವಹಿಸಿದ್ದರು. ಶ್ರೀ ವೀರಭದ್ರೇಶ್ವರ ದೇವಸ್ಥಾನದ ಕಾರ್ಯದರ್ಶಿ ಯೋಗೀಶ್, ಮಲ್ನಾಡ್ ಇಂಜಿನಿಯರಿAಗ್ ಕಾಲೇಜು ಉಪನ್ಯಾಸಕ ಕೆ.ಪಿ ರವಿ ಕುಮಾರ್, ಶಿಕ್ಷಕ ಕೆ.ಆರ್.ಮಲ್ಲಿಕಾರ್ಜುನಪ್ಪ, ನಿವೃತ್ತ ಮುಖ್ಯ ಶಿಕ್ಷಕ ವೆಂಕಟೇಶ್, ಗ್ರಾಮದ ಮುಖಂಡರಾದ ಪುರುಷೋತ್ತಮ, ಶಂಕ್ರಪ್ಪ, ಶಿಕ್ಷಕಿ ಯಮುನಾ, ಗಾಯಕ ಮಲ್ಲಿಗೆ ಸುಧೀರ್, ಸಂಗೀತ ನಿರ್ದೇಶಕ ನಾಗಭೂಷಣ್, ರವಿ ಕುಮಾರ್, ಲೋಕೇಶ್, ಮಂಜುನಾಥ್, ಗುಣಸಾಗರ ವಿಜಯ್ ಕುಮಾರ್, ಚಿಕ್ಕದೇವನೂರು ರವಿ ಮತ್ತಿತರರಿದ್ದರು.
ನಿಜವಾದ ಧರ್ಮ, ನಂಬಿಕೆ, ಗುರು ಹಿರಿಯರ ಮೇಲಿನ ಶ್ರದ್ಧೆ ಉಳಿದುಕೊಂಡಿದೆ ಎಂದರೆ ಅದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ. ಯಾವ ಗ್ರಾಮದಲ್ಲಿ ದೇವಸ್ಥಾನಗಳ ನಿರ್ಮಾಣ, ಧಾರ್ಮಿಕ ಕಾರ್ಯಗಳು ಹೆಚ್ಚಾಗಿ ನಡೆಯುತ್ತವೋ ಆ ಗ್ರಾಮ ನಿಜವಾಗಿಯೂ ಸಿರಿವಂತ ಗ್ರಾಮವಾಗಿರುತ್ತದೆ. ಊರಿನ ಕೊಡುಗೈ ದಾನಿಗಳ ಉದಾರ ಮನಸ್ಸಿನಿಂದಾಗಿಯೇ ದೇವಸ್ಥಾನಗಳು ಸುಂದರವಾಗಿ ನಿರ್ಮಾಣವಾಗುತ್ತವೆ.
ಸಿ.ಟಿ ರವಿ, ವಿಧಾನ ಪರಿಷತ್ ಸದಸ್ಯ