ಜಿಲ್ಲೆ

ಧರ್ಮ ಕಾಲಂನಲ್ಲಿ ಬೌದ್ಧ ಎಂದು ಬರೆಸಿ

ಮೈಸೂರು: ಸೆ.22ರಿಂದ ನಡೆಯುವ ಜಾತಿ ಜನಗಣತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರು ಧರ್ಮ ಕಾಲಂನಲ್ಲಿ ಬೌದ್ಧ ಎಂದು ಬರೆಸಬೇಕು. ಇದರಿಂದ ಮೀಸಲಾತಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಕರ್ನಾಟಕ ಬುದ್ಧ ಧಮ್ಮ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಮಹಾದೇವಪ್ಪ ಕೋರಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಶೂದ್ರ, ಅತಿ ಶೂದ್ರರು ಈ ದೇಶದ ಆದಿ ಜನರು ಮತ್ತು ಬೌದ್ಧರು. ಆದರೆ, ಪ್ರತಿ ಕ್ರಾಂತಿಯ ಸಂದರ್ಭದಲ್ಲಿ ಸಂಸ್ಕೃತೀಕರಣಕ್ಕೆ ಒಳಗಾಗಿ ಬ್ರಾಹ್ಮಣರ ತಂತ್ರಗಾರಿಕೆಯಿಂದ ಹಿಂದು ಎಂದು ಕರೆಸಿಕೊಳ್ಳುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಾತಿ ವ್ಯವಸ್ಥೆಯ ಶ್ರೇಣಿಯಲ್ಲಿ ಕೆಳಗಡೆ ನೂಕಲ್ಪಟ್ಟ ಅಸ್ಪಶ್ಯರ ಜಾತಿ ವ್ಯವಸ್ಥೆಯ ಹೊರಗಿದ್ದಾರೆ. ಆದ್ದರಿಂದಲೇ ಅವರನ್ನು ಅವರ್ಣೀಯರ ಎಂದು ಸಹ ಕರೆಯುತ್ತಾರೆ.

ಈ ಸತ್ಯವನ್ನು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರೂ ಅರಗಿಸಿಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ. ಹೀಗಾಗಿ ಜಾತಿ ಜನಗಣತಿಯಲ್ಲಿ ಎಲ್ಲ ಅಸ್ಪಶ್ಯ ಸಮುದಾಯ ಧರ್ಮದ ಕಾಲಂನಲ್ಲಿ ಬೌದ್ಧ ಎಂದು ಬರೆಯಿಸಿಕೊಳ್ಳಬೇಕು. ಬೇಕಿದ್ದರೆ ಜಾತಿ ಕಾಲಂನಲ್ಲಿ ತಮ್ಮ ಮೂಲ ಜಾತಿಯ ಹೆಸರನ್ನು ಬರೆಯಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.

ದಲಿತ ಮುಖಂಡರಾದ ಹರಿಹರ ಆನಂದಸ್ವಾಮಿ, ಶಿವರಾಜು, ಪ್ರೊ.ಟಿ.ನಂಜುಂಡಯ್ಯ ಇನ್ನಿತರರಿದ್ದರು.